ಚೀನಾದಲ್ಲಿ 450 ಅಡಿ ಎತ್ತರದ ಬಿ.ಆರ್. ಅಂಬೇಡ್ಕರ್ ಪ್ರತಿಮೆಯೆಯನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ವಿಶ್ವದ ಅತಿ ಎತ್ತರದ ಹಾಗೂ ಅತ್ಯಂತ ದುಬಾರಿ ಕಂಚಿನ ಪ್ರತಿಮೆ ಎಂದು ಹೇಳಿಕೊಳ್ಳುವ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಯ ಫೋಟೋ ಎನ್ನುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ತಿಳಿಯೋಣ.
ಕ್ಲೇಮ್ : 450 ಅಡಿ ಉದ್ದದ ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಚೀನಾದಲ್ಲಿ ಸ್ಥಾಪಿಸಲಾಗುತ್ತಿದೆ.
ಫ್ಯಾಕ್ಟ್: ಚೀನಾ ಸರ್ಕಾರ ತನ್ನ ದೇಶದಲ್ಲಿ 450 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ 450 ಅಡಿ ಕಂಚಿನ ಅಂಬೇಡ್ಕರ್ ಪ್ರತಿಮೆಯ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.
ಈ ಹಿಂದೆ ಚೀನಾದಲ್ಲಿ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಸ್ಥಾಪನೆ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದು, ಚೀನಾ ಮತ್ತು ಭಾರತೀಯ ಮಾಧ್ಯಮಗಳಲ್ಲಿ ಈ ಕುರಿತಾದ ಯಾವುದೇ ಮಾಹಿತಿಗಳು ದೊರಕಿಲ್ಲ.
ವೈರಲ್ ಪೋಸ್ಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಫೋಟೋವನ್ನು 2023 ರಲ್ಲಿ ವಿಜಯವಾಡದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ದಿ ಹಿಂದೂ (ಆರ್ಕೈವ್) ವೆಬ್‌ಸೈಟ್ ಹೇಳಿದೆ. 125 ಅಡಿ ಎತ್ತರದ ಈ ಪ್ರತಿಮೆಯನ್ನು ಹೈದರಾಬಾದ್‌ನ ಕೆಪಿಸಿ ಪ್ರಾಜೆಕ್ಟ್ಸ್ ಲಿಮಿಟೆಡ್, ವಿಜಯವಾಡದಲ್ಲಿ ಸ್ಥಾಪಿಸಿದೆ. ಪ್ರತಿಮೆಯನ್ನು ತಯಾರಿಸಲು ಆಂಧ್ರ ಪ್ರದೇಶ ಸರ್ಕಾರವು ಚೀನಾದ ಕಂಪನಿಗಳನ್ನು ಸಂಪರ್ಕಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಆದರೆ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ 450 ಅಡಿ (350 ಅಡಿ ಪ್ರತಿಮೆ, 100 ಅಡಿ ಪೀಠ) ಅಂಬೇಡ್ಕರ್ ಕಂಚಿನ ಪ್ರತಿಮೆಯ ಕೆಲವು ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ಕೆಲಸದ ಹಂತದಲ್ಲಿರುವ ಈ ಪ್ರತಿಮೆ ಪೂರ್ಣಗೊಂಡರೆ ಇದು, ‘ಐಕ್ಯತಾ ಪ್ರತಿಮೆ’ (ಸ್ಟ್ಯಾಚು ಆಫ್ ಯುನಿಟಿ ) ಮತ್ತು ದೇಶದ ಎರಡನೇ ಅತಿ ಎತ್ತರದ ಪ್ರತಿಮೆಯಾಗಲಿದೆ.
ಅಂತಿಮವಾಗಿ, ಚೀನಾ ಸರ್ಕಾರವು ತಮ್ಮ ದೇಶದಲ್ಲಿ 450 ಅಡಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.