ಶಿವಲಿಂಗವನ್ನು ತೋರಿಸುವ ವೀಡಿಯೋ ಸಹಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಶಿವಲಿಂಗವು ತಮಿಳುನಾಡಿನಲ್ಲಿದೆ ಎಂದು ಪೋಸ್ಟ್‍ನಲ್ಲಿ ಹೇಳಲಾಗಿದೆ. ಈ ಶಿವಲಿಂಗ ತಮಿಳುನಾಡಿನ ತಾರಾ ಹೈ ವೇ ಇಂದ 10 ಕಿಲೋಮೀಟರ್ ದೂರದಲ್ಲಿ ಇದೆ. ಶಿವಲಿಂಗದ ಮೇಲೆ ಸುರಿಯುವ ನೀರಿನ ಮೂಲ ಎಲ್ಲಿಂದ ಬರುತ್ತಿದೆ ಅಂತ ಇವತ್ತಿನವರೆಗೂ ಗೊತ್ತೆ ಆಗಿಲ್ಲ. ಆದರೆ ವರ್ಷವಿಡೀ ಶಿವಲಿಂಗದ ಮೇಲೆ ನೀರು ಸುರಿಯುತ್ತದೆ ಎಂದು ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ವರ್ಷವಿಡೀ ಈ ಶಿವಲಿಂಗದ ಮೇಲೆ ಮಾತ್ರ ಆಕಾಶದಿಂದ ನೀರು ಬೀಳುತ್ತದೆ ಮತ್ತು ಇದು ತಮಿಳುನಾಡಿನಲ್ಲಿದೆ.
ನಿಜಾಂಶ : ವಿಡಿಯೋದಲ್ಲಿ ಕಂಡುಬರುವ ಶಿವಲಿಂಗವು ಮಲೇಷ್ಯಾದಲ್ಲಿದೆ. ಶಿವಲಿಂಗದ ಮೇಲೆ ವರ್ಷವಿಡೀ ಮಳೆ ಬೀಳುವುದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದ ಸ್ಕ್ರೀನ್‌ಶಾಟ್‌ಗಳೊಂದಿಗೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಕೆಲವು YouTube ಚಾನೆಲ್‍ನಲ್ಲಿ ಅಪ್‍ಲೋಡ್ ಮಾಡಲಾದ ವೀಡಿಯೊ ಲಭ್ಯವಾದವು. ಈ ವೀಡಿಯೊಗಳಲ್ಲಿ ಒಂದು ವೈರಲ್ ಪೋಸ್ಟ್‌ನಲ್ಲಿರುವಂತೆಯೇ ಇದೆ ಮತ್ತು ಅದರ ಶೀರ್ಷಿಕೆಯು ತಮಿಳಿನಲ್ಲಿ ಬರೆಯಲ್ಪಟ್ಟಿದೆ, ಕಾರ್ಕ್ ಹೆದ್ದಾರಿ, ಮಲೇಷ್ಯಾ ಎಂದು ಸ್ಥಳವನ್ನು ಉಲ್ಲೇಖಿಸುತ್ತದೆ. ಶಿವನ್ ಟೆಂಪಲ್ (ಬೆಂಟಾಂಗ್ ಕರಕ್ ಓಲ್ಡ್ ರೋಡ್) ಎಂಬ ಹೆಸರಿನ ನಿಖರವಾದ ಶಿವಲಿಂಗವನ್ನು ತೋರಿಸುವ ಮತ್ತೊಂದು ವೀಡಿಯೊ ಸಹ ಕಂಡುಬಂದಿದೆ.

ಈ ಸುಳಿವುಗಳು ಮತ್ತು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ ಈ ಶಿವಲಿಂಗವು ಮಲೇಷ್ಯಾದ ಸೆಲಂಗೋರ್‌ನ 68100 ಬಟು ಗುಹೆಗಳ ಭಗವಾನ್ ಶಿವ ಧ್ಯಾನ ಅಭಯಾರಣ್ಯದಲ್ಲಿದೆ ಎಂದು ಕಂಡುಬಂದಿದೆ. ಗೂಗಲ್ ಮ್ಯಾಪ್‌ಗೆ ಅಪ್‌ಲೋಡ್ ಮಾಡಲಾದ ಚಿತ್ರಗಳು ವೈರಲ್ ವೀಡಿಯೊದಲ್ಲಿ ತೋರಿಸಿರುವ ಶಿವಲಿಂಗಕ್ಕೆ ಹೊಂದಿಕೆಯಾಗುತ್ತವೆ.

ವರ್ಷವಿಡೀ ಶಿವಲಿಂಗದ ಮೇಲೆ ನೀರು ಬೀಳುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು, ಸುತ್ತಮುತ್ತಲಿನ ಪ್ರದೇಶಗಳನ್ನು ಕುರಿತು ಸರ್ಚ್ ಮಾಡಿದಾಗ ಕಂಡುಬಂದ ವೀಡಿಯೊಗಳನ್ನು ಪರಿಶೀಲಿಸಿದ್ದೇವೆ. ಆಕಾಶದಿಂದ ಶಿವಲಿಂಗದ ಮೇಲೆ ನೀರು ಬೀಳುತ್ತಿಲ್ಲ ಎಂಬುದನ್ನು ನಾವು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.
ಮೂಲ ಪೋಸ್ಟ್‌ನಿಂದ ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೂ, ಶಿವಲಿಂಗದ ಮೇಲೆ ಮಳೆನೀರು ಬಿದ್ದ ಯಾವುದೇ ಕುರುಹು ನಮಗೆ ಕಂಡುಬರುವುದಿಲ್ಲ. ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾದ ಕೆಲವು ಇತರ ವೀಡಿಯೊಗಳು ಅದನ್ನು ಖಚಿತಪಡಿಸುತ್ತವೆ. ಈ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಶಿವನ್ ಧ್ಯಾನ ಅಭಯಾರಣ್ಯದ ಯಾವುದೇ ಅಧಿಕೃತ ವೆಬ್‌ಸೈಟ್ ನಮಗೆ ಕಂಡುಬಂದಿಲ್ಲ. www.malaysiahanuman.com ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಈ ಸ್ಥಳದ ಬಗ್ಗೆ ಪ್ರಸ್ತಾಪಿಸಿದ್ದು. ವರ್ಷದ 365 ದಿನವೂ ನಿರಂತರವಾಗಿ ಶಿವಲಿಂಗದ ಮೇಲೆ ನೀರು ಬೀಳುವ ಉಲ್ಲೇಖ ಇರಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೊದಲ್ಲಿ ಕಂಡುಬರುವ ಶಿವಲಿಂಗವು ಮಲೇಷ್ಯಾದಲ್ಲಿದೆ, ತಮಿಳುನಾಡಿನಲ್ಲ. ಶಿವಲಿಂಗದ ಮೇಲೆ ವರ್ಷವಿಡೀ ಮಳೆ ಬೀಳುವುದಿಲ್ಲ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.