Fake News - Kannada
 

ಈ ಫೋಟೋಗಳಲ್ಲಿರುವ ಪಂಜಾಬ್‌ ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ ನಡೆದಿಲ್ಲ. ಅವರು ರಸ್ತೆ ಅಪಘಾತದಿಂದ ಮೃತಪಟ್ಟರು

0

ಪಂಜಾಬ್‌ನ ಅಮೃತಸರದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪ್ರತಿಪಾದಿಸಿ ಮಹಿಳಾ ಪೊಲೀಸರೊಬ್ಬರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಫೋಟೋಗಳಲ್ಲಿ ಮೃತಪಟ್ಟ ಮಹಿಳಾ ಪೊಲೀಸ್‌ ಅಧಿಕಾರಿಯ ಗುರುತಿನ ಪತ್ರ ಕೂಡ ಇದ್ದು, ಅದರಲ್ಲಿ ಅವರನ್ನು ಸಲೀಂ ಮಸೀಹ್ ಅವರ ಮಗಳು ನೊಮಿ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಂಶವನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಅಮೃತಸರದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಪಂಜಾಬ್‌ನ ಮಹಿಳಾ ಪೊಲೀಸ್ ಅಧಿಕಾರಿಯ ಫೋಟೋಗಳು.

ಸತ್ಯಾಂಶ: ಫೋಟೋಗಳಲ್ಲಿರುವ ಮಹಿಳಾ ಪೊಲೀಸ್, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದಿಲ್ಲ. ಅವರು ತಮ್ಮ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಸ್ಕಾರ್ಪಿಯೋ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದ್ದರಿಂದ ಅವರು ಮೃತಪಟ್ಟಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ಪೋಸ್ಟ್‌‌ನಲ್ಲಿರುವ ಮಹಿಳಾ ಪೊಲೀಸ್ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದಾಗ ನಮಗೆ ಈ ಚಿತ್ರಕ್ಕೆ ಸಂಬಂಧಪಟ್ಟ ಹಲವಾರು ಸುದ್ದಿಗಳು ಕಂಡುಬಂದಿವೆ. ಜ಼ಂದರ್‌ (ಪಂಜಾಬ್) ನಲ್ಲಿ ನಡೆದ ರಸ್ತೆ ಅಪಘಾತದಿಂದಾಗಿ ಮಹಿಳಾ ಪೊಲೀಸ್ ನೋಮಿ ಮೃತಪಟ್ಟಿದ್ದಾರೆ. ಅವರು ತನ್ನ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಸ್ಕಾರ್ಪಿಯೋ ವಾಹನನವೊಂದು ಡಿಕ್ಕಿ ಹೊಡೆದಿದೆ ಎಂದು ಸುದ್ದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಸುದ್ದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದಾಗಿದೆ.

ಅಲ್ಲದೆ, ಘಟನೆಯ ಬಗ್ಗೆ ದಾಖಲಾದ ಎಫ್‌ಐಆರ್ ನಲ್ಲಿ ಕೂಡಾ, ಅತ್ಯಾಚಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ತಿಳಿಯಬಹುದು. ದಾಖಲಾದ ಎಫ್‌ಐಆರ್‌ ಐಪಿಸಿಯ 304-ಎ ಮತ್ತು 427 ಸೆಕ್ಷನ್‌ಗಳನ್ನು ಮಾತ್ರ ಉಲ್ಲೇಖಿಸುತ್ತದೆ. ಈ ಎಫ್‌ಐಆರ್ ಅನ್ನು ಇಲ್ಲಿ ನೋಡಬಹುದು. ಅಪಘಾತದಲ್ಲಿ ಮೃತಪಟ್ಟ ನೋಮಿ ಅವರ ಆಕ್ಟಿವಾ ಮತ್ತು ಸ್ಕಾರ್ಪಿಯೋ (ಅವರ ಫೋಟೋವನ್ನು ಸಹ ಸಾಮಾಜಿಕ ಜಾಲತಾಣದ ಬಳಕೆದಾರರು ಪೋಸ್ಟ್ ಮಾಡಿದ್ದಾರೆ) ವಾಹನದ ಸಂಖ್ಯೆಗಳನ್ನು ಎಫ್‌ಐಆರ್‌ನಲ್ಲಿ ನೋಡಬಹುದು. ವಾಹನಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗೆ ನೋಡಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಹರಡಲಾಗುತ್ತಿರುವ ಈ ಪಂಜಾಬ್‌ನ ಮಹಿಳಾ ಪೊಲೀಸ್ ನೋಮಿಯವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿಲ್ಲ.

Share.

About Author

Comments are closed.

scroll