Fake News - Kannada
 

ವೀಡಿಯೊದಲ್ಲಿರುವ ವ್ಯಕ್ತಿ ಪಾಕಿಸ್ತಾನದ ಹಿಂದೂ ಸಂಸದರಲ್ಲ, ಆತ ಕ್ರಿಶ್ಚಿಯನ್ ಮತ್ತು ಪಾಕಿಸ್ತಾನದ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಯ ಸದಸ್ಯ

0

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತಿಸುವ ಕುರಿತು ಇತ್ತೀಚಿಗೆ ಹಲವು ವರದಿಗಳು ಹಬ್ಬಿದ್ದ ಸಂದರ್ಭದಲ್ಲಿ, ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಹಿಂದೂಗಳ ಮೇಲೆ ಕರುಣೆಯನ್ನು ಬೇಡುತ್ತಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಹಿಂದೂಗಳ ಮೇಲೆ ಕರುಣೆ ತೋರುವಂತೆ ಪಾಕಿಸ್ತಾನದ ಹಿಂದೂ ಸಂಸದರ ಭಾಷಣ.

ಫ್ಯಾಕ್ಟ್ : ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯ ಹೆಸರು ‘ತಾರಿಕ್ ಮಸಿಹ್ ಗಿಲ್’. ಅವರು ಕ್ರಿಶ್ಚಿಯನ್ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ (ಭಾರತದಲ್ಲಿ ಶಾಸಕರಿಗೆ ಸಮಾನರು). 11 ಆಗಸ್ಟ್ 2022 ರಂದು ನ್ಯಾಷನಲ್ ಅಸೆಂಬ್ಲಿ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಾವೇಶದಲ್ಲಿ, ಅವರು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ ಘಟನೆ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದುಸ್ಥಿತಿಯ ಬಗ್ಗೆ ಮಾತನಾಡಿದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗಿನ ಇಂಟರ್ನೆಟ್ನಲ್ಲಿ ಪರಿಶೀಲಿಸಿದಾಗ, 11 ಆಗಸ್ಟ್ 2022 ರಂದು ‘PTV ಪಾರ್ಲಿಮೆಂಟ್’ ಯೂಟ್ಯೂಬ್  ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿದ ಪೂರ್ಣ ವೀಡಿಯೊ ದೊರಕಿತು. ಇದರ  ಶೀರ್ಷಿಕೆಯು ಇದು ರಾಷ್ಟ್ರೀಯ ಅಸೆಂಬ್ಲಿ ಸಭೆ ಎಂದು ಸೂಚಿಸುತ್ತದೆ. ಈ ವೀಡಿಯೊದಲ್ಲಿ, ಅಸ್ಸೆಂಬ್ಳಿ ಸ್ಪೀಕರ್ ವೈರಲ್ ಕ್ಲಿಪ್‌ನಲ್ಲಿರುವ ವ್ಯಕ್ತಿಯನ್ನು ‘ತಾರಿಕ್ ಮಸಿಹ್ ಗಿಲ್’ ಎಂಬ ಹೆಸರಿನಿಂದ ಸಂಬೋಧಿಸಿದ್ದಾರೆ.

ಇದರಿಂದ ಸುಳಿವು ಪಡೆದು ಪಾಕಿಸ್ತಾನ ಸರ್ಕಾರದ ವೆಬ್‌ಸೈಟ್‌ಗಳಲ್ಲಿ ಆತನ ವಿವರಗಳನ್ನು ಹುಡುಕಿದೆವು. ‘ಪ್ರಾಂತೀಯ ಅಸೆಂಬ್ಲಿ ಆಫ್ ಪಂಜಾಬ್’ ನ ವೆಬ್‌ಸೈಟ್ ಪ್ರಕಾರ, ತಾರಿಕ್ ಮಸಿಹ್ ಗಿಲ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಾಂತೀಯ ಅಸೆಂಬ್ಲಿಯ (ಭಾರತದಲ್ಲಿ ಶಾಸಕರಿಗೆ ಸಮಾನ) ಸದಸ್ಯರಾಗಿದ್ದಾರೆ. ಅವನು ಕ್ರಿಶ್ಚಿಯನ್. ಅವರು ಮುಸ್ಲಿಮೇತರರಿಗೆ ಮೀಸಲಾದ ಎಂಟು ಸ್ಥಾನಗಳಲ್ಲಿ ಒಂದರಲ್ಲಿ 2018 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತ ಎರಡನೇ ಅವಧಿಗೆ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, 11 ಆಗಸ್ಟ್ 1947 ರಂದು ಅಂದಿನ ಸಂವಿಧಾನ ಸಭೆಯಲ್ಲಿ ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಸಮಾನತೆಯ ಕುರಿತು ಕ್ವೈದ್-ಐ-ಆಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಭಾಷಣವನ್ನು ಸ್ಮರಿಸಲು 11 ಆಗಸ್ಟ್ 2022 ರಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಾವೇಶವನ್ನು ರಾಷ್ಟ್ರೀಯ ಅಸೆಂಬ್ಲಿ ಹಾಲ್‌ನಲ್ಲಿ ನಡೆಸಲಾಯಿತು. ರಾಷ್ಟ್ರೀಯ ಮತ್ತು ಪ್ರಾಂತೀಯ ಅಲ್ಪಸಂಖ್ಯಾತ ಸಮುದಾಯಗಳ ಹಲವಾರು ಹಾಲಿ ಮತ್ತು ಮಾಜಿ ಸದಸ್ಯರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಗಿಲ್ ತನ್ನ ಭಾಷಣದಲ್ಲಿ, ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಇಸ್ಲಾಂಗೆ ಬಲವಂತದ ಮತಾಂತರದ ಘಟನೆ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾನೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಹಿಂದೂ ಅಥವಾ ಪಾಕಿಸ್ತಾನದ ಸಂಸದರೂ ಅಲ್ಲ; ಅವರು ಕ್ರಿಶ್ಚಿಯನ್ ಮತ್ತು ಪಾಕಿಸ್ತಾನದ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ, ಅವರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದುಸ್ಥಿತಿಯ ಬಗ್ಗೆ ಮಾತನಾಡಿದರು.

Share.

Comments are closed.

scroll