Fake News - Kannada
 

ಈ ವೀಡಿಯೊದಲ್ಲಿ ಜನರು ಸ್ವಾಗತ ಮಾಡುತ್ತಿರುವ ವ್ಯಕ್ತಿ ಬ್ರೈಟನ್ ಮತ್ತು ಹೋವ್‌ನ ನೂತನ ಚುನಾಯಿತ ಮೇಯರ್ ಅಲ್ಲ

0

ಪುರುಷರ ಗುಂಪೊಂದು ಸ್ಕಲ್ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬನನ್ನು ಸ್ವಾಗತಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶಿ ಮೂಲದ ಮುಸ್ಲಿಮರಾದ ಮೊಹಮ್ಮದ್ ಅಸಾದುಜ್ಜಮಾನ್ ಯುನೈಟೆಡ್ ಕಿಂಗ್‌ಡಮ್‌ನ ಬ್ರೈಟನ್‌ನ ಹೊಸದಾಗಿ ಚುನಾಯಿತ ಮೇಯರ್ ಆಗಿದ್ದು, ಆತನನ್ನು   ಸ್ವಾಗತಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬಾಂಗ್ಲಾದೇಶ ಮೂಲದ ಮುಸ್ಲಿಂ ಆಗಿರುವ ಮೊಹಮ್ಮದ್ ಅಸಾದುಝಮಾನ್ ಬ್ರೈಟನ್ (ಯುನೈಟೆಡ್ ಕಿಂಗ್‌ಡಮ್) ನ ನೂತನ ಚುನಾಯಿತ ಮೇಯರಾಗಿ ಆಗಮಿಸಿದಾಗ ಜನರ ಗುಂಪು ಅವರನ್ನು ಸ್ವಾಗತಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೀಡಿಯೊದಲ್ಲಿರುವ ವ್ಯಕ್ತಿ ಹೋವ್‌ನ ಹೊಸದಾಗಿ ಚುನಾಯಿತರಾದ ಮೇಯರ್ ಮೊಹಮ್ಮದ್ ಅಸಾದುಝಮಾನ್ ಅಲ್ಲ. ಬದಲಾಗಿ ಇಸ್ಲಾಮಿಕ್ ಧರ್ಮಗುರುಗಳಾದ, ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಅವರು ಯುಕೆ ಬೆಡ್‌ಫೋರ್ಡ್‌ಗೆ ಆಗಮಿಸಿದಾಗ ಅವರ ಅನುಯಾಯಿಗಳು ಸ್ವಾಗತಿಸುತ್ತಿದ್ದಾರೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅಸ್ಲಾಮಿಯಾ ಫೌಂಡೇಶನ್ (ಇಲ್ಲಿ ಮತ್ತು ಇಲ್ಲಿ) ಹೆಸರಿನ ಯೂಟ್ಯೂಬ್  ಚಾನಲ್‌ನಲ್ಲಿ ವೈರಲ್ ವೀಡಿಯೊದಲ್ಲಿ ತೋರಿಸಿರುವ ಅದೇ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ಈ ವಿಡಿಯೋದಲ್ಲಿ ಇದ್ದ ಇಬ್ಬರನ್ನು ನಾವು ಗುರುತಿಸಿದ್ದು, ಈ ವಿಡಿಯೋ ಜೂನ್ 11, 2024 ರಂದು “Brother taking bayah with Shaykh | Bedford U.K. June 2024” ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇಲ್ಲಿ ವೈರಲ್ ವೀಡಿಯೊದಲ್ಲಿ ಸ್ವಾಗತಿಸಲ್ಪಟ್ಟ ವ್ಯಕ್ತಿಯನ್ನು ಅದೇ ಡ್ರೆಸ್ ನಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ಸ್ಪೆಕ್ಸ್, ಹಸಿರು ಸ್ಕಾರ್ಫ್ ಧರಿಸಿರುವ ವ್ಯಕ್ತಿ ಮತ್ತು ನೀಲಿ ಶಾಲು ಧರಿಸಿರುವ ವ್ಯಕ್ತಿಯನ್ನು ಯೂಟ್ಯೂಬ್ ವಿಡಿಯೋದಲ್ಲಿ ನೋಡಬಹುದು. ವೈರಲ್ ವಿಡಿಯೋ ಮತ್ತು ಯೂಟ್ಯೂಬ್ ವಿಡಿಯೋದ ತುಲನೆಯನ್ನು ಈ ಕೆಳಗೆ ನೀಡಲಾಗಿದೆ.

ಯೂಟ್ಯೂಬ್ ಚಾನೆಲ್ ಕುರಿತು ಮತ್ತಷ್ಟು ಪರಿಶೀಲಿಸಿದಾಗ, “Promoting Peace, Love & Guidance to Excellence. Naqashbandiya Aslamiya – Shadpur Sharif & Gulshan E Aslamiya Sharif, Jhelum, Pakistan & England U.K.” ಎನ್ನುವ ಟೈಟಲ್ ಅನ್ನು ಯೂ ಟ್ಯೂಬ್ ನಲ್ಲಿ ಈ ವಿಡಿಯೋಗೆ ನೀಡಲಾಗಿದೆ. ಈ ಮೂಲಕ ವೈರಲ್ ವೀಡಿಯೊದಲ್ಲಿ ತೋರಿಸಿರುವ ವ್ಯಕ್ತಿಯನ್ನು ನಾವು ಶೇಖ್ ಸೂಫಿ ಮುಹಮ್ಮದ್ ಅಸ್ಗರ್ ಎಂದು ಗುರುತಿಸಿದ್ದೇವೆ. ಇದರ ಕೋಟೆಗೆ ನಮಗೆ ಹಲವಾರು ಸಾಮಾಜಿಕ ಜಾಲತಾಣಗಳ ಲಿಂಕ್ ಸಹ ದೊರಕಿದ್ದು, ಅಲ್ಲಿ ನಾವು ಟಿಕ್‌ಟಾಕ್‌ನಲ್ಲಿ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಜೂನ್ 6, 2024 ರಂದು  ಬೆಡ್‌ಫೋರ್ಡ್‌ನಲ್ಲಿರುವ ಸಮುದಾಯ ಕೇಂದ್ರದಲ್ಲಿ ಈ ಸನ್ನಿವೇಶ ನಡೆದಿದೆ ಎಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊ ತಿಳಿಸುತ್ತದೆ.

ಇದಲ್ಲದೆ, ನಾವು ಸೂಫಿ ಮುಹಮ್ಮದ್ ಅವರ ಅಫೀಷಿಯಲ್ ಫೇಸ್‌ಬುಕ್ ಪೇಜ್ ಅನ್ನು (ಆರ್ಕೈವ್ ಮಾಡಲಾಗಿದೆ) ಕಂಡುಕೊಂಡಿದ್ದೇವೆ, ಅಲ್ಲಿ ಅವರು U.K. ನಲ್ಲಿ ವಿವಿಧ ಧಾರ್ಮಿಕ ಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಬ್ರೈಟನ್ ಮತ್ತು ಹೋವ್ ಸಿಟಿ ಕೌನ್ಸಿಲ್ ವೆಬ್‌ಸೈಟ್ ಪ್ರಕಾರ, ಮೊಹಮ್ಮದ್ ಅಸಾದುಝಮಾನ್ ಮೇ 2024 ರಲ್ಲಿ ಬ್ರೈಟನ್ ಸಿಟಿಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಅವರು ನಗರದ ಉಪಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಬಾಂಗ್ಲಾದೇಶದಲ್ಲಿ ಜನಿಸಿದ ಅವರು 1995 ರಲ್ಲಿ ಯುಕೆಗೆ ಹೋಗಿ, ಬ್ರೈಟನ್‌ನಲ್ಲಿ 30 ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ. ಅವರ ಬಗ್ಗೆ (ಇಲ್ಲಿ ಮತ್ತು ಇಲ್ಲಿ) ಸುದ್ದಿ ವರದಿಗಳು  ಪ್ರಕಟವಾಗಿದೆ. ಸೂಫಿ ಮುಹಮ್ಮದ್ ಮತ್ತು ಹೊಸದಾಗಿ ಚುನಾಯಿತರಾದ ಮೇಯರ್ ಮೊಹಮ್ಮದ್ ಅಸಾದುಝಮಾನ್ ಅವರ ಫೋಟೋಗಳ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೊದಲ್ಲಿ ಜನರು ಸ್ವಾಗತ ಮಾಡುತ್ತಿರುವ ವ್ಯಕ್ತಿ ಬ್ರೈಟನ್ ಮತ್ತು ಹೋವ್‌ನ ನೂತನ ಚುನಾಯಿತ ಮೇಯರ್ ಅಲ್ಲ.

Share.

Comments are closed.

scroll