Fake News - Kannada
 

ಮನೋರಂಜನೆಗಾಗಿ ಮಾಡಿದ ಸ್ಕ್ರಿಪ್ಟೆಡ್ ವಿಡಿಯೋವನ್ನು ಪಾನಿಪುರಿ ಮಾರಾಟ ಮಾಡುತ್ತಿರುವ ವ್ಯಕ್ತಿಯ ಅನೈರ್ಮಲ್ಯತೆಗೆ ಹೋಲಿಸಿ ತಪ್ಪಾಗಿ ಶೇರ್ ಮಾಡಲಾಗಿದೆ

0

ವ್ಯಕ್ತಿಯೊಬ್ಬ ‘ಹಲಾಲ್ ಪಾನಿಪುರಿ’ ಮಾರಾಟ ಮಾಡುತ್ತಿದ್ದಾನೆ ಎಎನ್ನುವ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ; ಮುಸ್ಲಿಂ ವ್ಯಕ್ತಿಯನ್ನು ಇಲ್ಲಿ ಹಲಾಲ್ ಮಾರಾಟಗಾರನೆಂದು ಹೇಳಲಾಗಿದೆ. ಈ ವೈರಲ್ ವೀಡಿಯೊದಲ್ಲಿ, ಆತ ತನ್ನ ಕೈಗಳನ್ನು ತೊಳೆದು,  ಪಾನಿಪುರಿ ನೀರಿಗೆ ಬೆವರು ಎಸೆಯುತ್ತಿರುವುದನ್ನು ಕಾಣಬಹುದು. ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್:  ವಿಡಿಯೋದಲ್ಲಿ ಮುಸ್ಲಿಂ  ಮಾರಾಟಗಾರನ  ಕಲುಷಿತವಾದ ಪಾನಿಪುರಿ  ನೀರನ್ನು ತನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾನೆ.

ಫ್ಯಾಕ್ಟ್ : ಇದು ಮನರಂಜನೆಗಾಗಿ ಮಾಡಿದ ಸ್ಕ್ರಿಪ್ಟ್  ವೀಡಿಯೊವಾಗಿದೆ, ಹೊರತು  ನಿಜವಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಈ ವೈರಲ್ ವೀಡಿಯೊದ ಕುರಿತು ಪರಿಶೀಲಿಸಲು, ನಾವು ವೀಡಿಯೊದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಗಳನ್ನಾಗಿ ಬಳಸಿದೆವು.  ಈ ಮೂಲಕ ನಾವು, ನಟಿ ಸಂಜನಾ ಗಲ್ರಾನಿಯ  ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೊವನ್ನು ಕಂಡುಕೊಂಡೆವು. ಈ  ವೈರಲ್ ವೀಡಿಯೊದ ಮುಂದಿನ ತುಣುಕುಗಳನ್ನು ಮೇ 8, 2024 ರಂದು ಪೋಸ್ಟ್ ಮಾಡಲಾಗಿದೆ.

ಪೋಸ್ಟ್‌ನಲ್ಲಿನ ಶೀರ್ಷಿಕೆಯನ್ನು ಗಮನಿಸಿದಾಗ ಇದು ಮನರಂಜನೆ ಮತ್ತು ಜಾಗೃತಿ ಮೂಡಿಸುವ ಉದ್ದೇಶಗಳಿಗಾಗಿ ಮಾಡಿದ ಸ್ಕ್ರಿಪ್ಟ್  ಡ್ರಾಮಾ  ಹಾಗೂ  ವಿಡಂಬನಾತ್ಮಕ ವೀಡಿಯೊವಾಗಿದೆ ಎಂದು ತಿಳಿಸಲಾಗಿದೆ. ಇದು ವೈರಲ್ ವೀಡಿಯೊದ ಸತ್ಯ ಘಟನೆಯಾಗಿದೆ,  ಎಂಬ ಹೇಳಿಕೆಗೆ ವಿರುದ್ಧವಾಗಿದೆ.

ಇಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವು ಇಂತಹ ಮಾರಾಟಗಾರರ ಬಗ್ಗೆ ವೀಕ್ಷಕರಿಗೆ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸುವಂತಹ  ಸಂದೇಶವನ್ನು ನೀಡುತ್ತಿದೆ.  ಆದರೆ ಇಲ್ಲಿ ಆ ವ್ಯಕ್ತಿಯ ಧರ್ಮದ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪಾನಿಪುರಿ ಮಾರಾಟಗಾರನು ಮಾರಾಟ ಮಾಡುವ ಮೊದಲು ಆಹಾರವನ್ನು ಕಲುಷಿತಗೊಳಿಸುವ ಈ ವೈರಲ್ ವೀಡಿಯೊ  ಸ್ಕ್ರಿಪ್ಟೆಡ್ ಆಗಿದೆ ಹೊರತು ನಿಜವಲ್ಲ.

Share.

Comments are closed.

scroll