ಜೂನ್ 4, 2024 ರಂದು ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಯಶಸ್ವಿಯಾಗಿ ಗೆದ್ದು 2024 ರ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಕ್ಷ ಎಂದೆನಿಸಿಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಪಡೆದುಕೊಂಡು ಸರ್ಕಾರ ರಚನೆಗೆ ಸಜ್ಜಾಗಿದೆ. ಇದೇ ಸಮಯದಲ್ಲಿ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 500 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 30 ಸ್ಥಾನಗಳನ್ನು ಮತ್ತು 100 ಕ್ಕೂ ಹೆಚ್ಚು ಸ್ಥಾನಗಳನ್ನು 1000ಕ್ಕಿಂತ ಕಡಿಮೆ ಮತಗಳೊಂದಿಗೆ ಗೆದ್ದಿದೆ ಎಂದು ಹಲವಾರು ಪೋಸ್ಟ್‌ಗಳು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಕೊಂಡಿರುವ ಈ ವಿಚಾರದ ಕುರಿತಾದ ಈ ಲೇಖನದ ಮೂಲಕ, ಈ ಪೋಸ್ಟ್‌ಗಳಲ್ಲಿ ಮಾಡಲಾದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 500 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 30 ಸ್ಥಾನಗಳನ್ನು ಮತ್ತು 1000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.
ಫ್ಯಾಕ್ಟ್: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಕನಿಷ್ಠ ಗೆಲುವಿನ ಅಂತರ 1,587 ಮತಗಳು. ಒಡಿಶಾದ ಜಾಜ್‌ಪುರ ಕ್ಷೇತ್ರದಿಂದ ಬಿಜೆಪಿಯ ರವೀಂದ್ರ ನಾರಾಯಣ ಬೆಹೆರಾ 5,34,239 ಮತಗಳನ್ನು ಪಡೆದಿದ್ದು, 5,32,652 ಮತಗಳನ್ನು ಪಡೆದ ಬಿಜೆಡಿಯ ಸರ್ಮಿಷ್ಠಾ ಸೇಥಿ ಅವರನ್ನು 1,587 ಮತಗಳ ಅಂತರದಿಂದ ಸೋಲಿಸಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ 240 ಬಿಜೆಪಿ ಅಭ್ಯರ್ಥಿಗಳ ಪೈಕಿ ಕೇವಲ 8 ಜನರು 10,000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಮತ್ತು 14 ಬಿಜೆಪಿ ಅಭ್ಯರ್ಥಿಗಳು 20,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.
ವೈರಲ್ ಕ್ಲೈಮ್‌ನ ನಿಜಾಂಶವನ್ನು ತಿಳಿಯಲು ನಾವು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ನಲ್ಲಿ 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಿದೆವು. ಪ್ರತಿ ಅಭ್ಯರ್ಥಿಯ ಗೆಲುವಿನ ಅಂತರ ಸೇರಿದಂತೆ ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಕ್ಷವಾರು ಫಲಿತಾಂಶಗಳು ಲಭ್ಯವಿವೆ. ಪೂರ್ತಿ 543 ಸಂಸದೀಯ ಕ್ಷೇತ್ರಗಳ ಫಲಿತಾಂಶಗಳನ್ನು ವಿಶ್ಲೇಷಿಸಿದ ನಂತರ, ಶಿವಸೇನೆಯ ರವೀಂದ್ರ ದತ್ತಾರಾಮ್ ವೈಕರ್, ಮುಂಬೈ ವಾಯುವ್ಯ ಕ್ಷೇತ್ರದಲ್ಲಿ 48 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿರುವುದನ್ನು ನಾವು ಗಮನಿಸಿದ್ದೇವೆ. ವೈಕರ್ ಒಟ್ಟು 4,52,644 ಮತಗಳನ್ನು ಪಡೆದರೆ, ಹಿಂದುಳಿದ ಅಭ್ಯರ್ಥಿ ಶಿವಸೇನಾ (ಯುಬಿಟಿ) ಅಮೋಲ್ ಗಜಾನನ್ ಕೀರ್ತಿಕರ್ 4,52,596 ಮತಗಳನ್ನು ಪಡೆಡಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ 240 ಬಿಜೆಪಿ ಅಭ್ಯರ್ಥಿಗಳ ಪೈಕಿ, 1,587 ಬಿಜೆಪಿ ಅಭ್ಯರ್ಥಿಗೆ ಕಡಿಮೆ ಗೆಲುವಿನ ಅಂತರದ ಮತಗಳು ಎಂದು ನಾವು ಕಂಡುಕೊಂಡಿದ್ದೇವೆ. ಒಡಿಶಾದ ಜಾಜ್‌ಪುರ ಕ್ಷೇತ್ರದಿಂದ ಬಿಜೆಪಿಯ ರವೀಂದ್ರ ನಾರಾಯಣ ಬೆಹೆರಾ ಅವರು 5,34,239 ಮತಗಳನ್ನು ಪಡೆದಿದ್ದು, 5,32,652 ಮತಗಳನ್ನು ಪಡೆದ ಬಿಜೆಡಿಯ ಸರ್ಮಿಷ್ಠಾ ಸೇಥಿ ಅವರನ್ನು 1,587 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಎರಡನೇ ಅತಿ ಕಡಿಮೆ ಗೆಲುವಿನ ಅಂತರ ಎಂದರೆ ಅದು 1,615 ಮತಗಳು. ರಾಜಸ್ಥಾನದ ಜೈಪುರ ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ 6,17,877 ಮತಗಳನ್ನು ಪಡೆದಿದ್ದು, 6,16,262 ಮತಗಳನ್ನು ಪಡೆದ ಐಎನ್‌ಸಿಯ ಅನಿಲ್ ಚೋಪ್ರಾ ಅವರನ್ನು 1,615 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಎಂಟು ಬಿಜೆಪಿ ಅಭ್ಯರ್ಥಿಗಳು 10,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಜಯಗಳಿಸಿದ್ದು, 14 ಬಿಜೆಪಿ ಅಭ್ಯರ್ಥಿಗಳು 20 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು, ಕೇವಲ 7 ಬಿಜೆಪಿ ಅಭ್ಯರ್ಥಿಗಳು 5 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದ ಅತೀ ಕಡಿಮೆ ಮತಗಳ ಅಂತರವೆಂದರೆ ಅದು 1,587 ಮತಗಳು.
ಈ ಡೇಟಾಸೆಟ್‌ನಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಏರಿಕೆಯ ಕ್ರಮದಲ್ಲಿ ನೋಡುವುದಾದರೆ ಈ ಕೆಳಗಿನ ಕೋಷ್ಟಕ (ಟೇಬಲ್ ) ದಲ್ಲಿ ನೋಡಬಹುದು. ಲೋಕಸಭೆ-2024 ರ ಸಾರ್ವತ್ರಿಕ ಚುನಾವಣೆಯ ಸಮಗ್ರ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಸಬ್ಯಸಾಚಿ ದಾಸ್ ಅವರು ಹರಿಯಾಣದ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. 2023 ರಲ್ಲಿ, ಅವರು ”ಡೆಮಾಕ್ರಟಿಕ್ ಬ್ಯಾಕ್‌ಸ್ಲೈಡಿಂಗ್ ಇನ್ ದಿ ವರ್ಲ್ಡ್ಸ್ ಡೆಮೊಗ್ರಾಸಿ” ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧವನ್ನು ಬಿಡುಗಡೆ ಮಾಡಿದ್ದಾರೆ. ಈ ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ),ಸಬ್ಯಸಾಚಿ ಈ ಪ್ರಬಂಧದಲ್ಲಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ತನ್ನ ಬಲ ಪ್ರಯೋಗದ ಮೂಲಕ ಸ್ಪರ್ಧಿಸಿದ ಸ್ಥಾನಗಳನ್ನು ಗೆದ್ದಿರಬಹುದು ಎಂದು ಹೇಳಿದ್ದಾರೆ. ಈ ಪತ್ರಿಕೆಯ ಬಿಡುಗಡೆಯು ಹಲವಾರು ಕೋಲಾಹಲಗಳಿಗೆ ಕಾರಣವಾದದಲ್ಲದೆ ಅಶೋಕ ವಿಶ್ವವಿದ್ಯಾಲಯವು ಈ ಪತ್ರಿಕೆಯಿಂದ ದೂರವಿರುವ ನಿಲುವನ್ನು ತೆಗೆದುಕೊಂಡಿತು. ಇದಾದ ನಂತರ ಸಬ್ಯಸಾಚಿ ರಾಜೀನಾಮೆ ನೀಡಿದ್ದು, ವಿಶ್ವವಿದ್ಯಾಲಯವು ಅವರ ರಾಜೀನಾಮೆಯನ್ನು ಸ್ವೀಕರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಳಿಸಿದ ಅತಿ ಕಡಿಮೆ ಅಂತರ 1,587 ಮತಗಳು ಮತ್ತು ಕೇವಲ 14 ಬಿಜೆಪಿ ಅಭ್ಯರ್ಥಿಗಳು 20,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.