ಜಮ್ಮು ಕಾಶ್ಮೀರದ ಸೋಪೋರ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿ ರಯೀಸ್ ಅಹ್ಮದ್ ಭಟ್ ಎಂಬ ಹೇಳಿಕೆಯೊಂದಿಗೆ ಕೊಲಾಜ್ ಮಾಡಲಾಗಿರುವ ಎರಡು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆತನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಸೋಪೋರ್ (ಜೆ&ಕೆ) ನಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾ ಧರಿಸಿರುವ ವ್ಯಕ್ತಿ ರಯೀಸ್ ಅಹ್ಮದ್ ಭಟ್.
ಸತ್ಯಾಂಶ: ಸೋಪೋರ್‌ನ (ಜೆ&ಕೆ) ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿ ಮಹಿಳೆಯೇ ಹೊರತು ಪುರುಷನಲ್ಲ. ಕಾಶ್ಮೀರ ವಲಯ ಪೊಲೀಸರು 2022 ರ ಮಾರ್ಚ್ 30 ರಂದು ರಯೀಸ್ ಅಹ್ಮದ್ ಭಟ್ ಎನ್‌ಕೌಂಟರ್‌ನಲ್ಲಿ ಹತ್ಯೆಯಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿಯು ಮಹಿಳೆಯಾಗಿದ್ದು ಆಕೆಯ ಹೆಸರು ಹಸೀನಾ ಅಖ್ತರ್. 31 ಮಾರ್ಚ್ 2022 ರಂದು ಅವರನ್ನು ಬಂಧಿಸಿರುವುದಾಗಿ ಐಜಿಪಿ ವಿಜಯ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಐಡಿ ಕಾರ್ಡ್ ಒಳಗೊಂಡಿರುವ ಫೋಟೋವನ್ನು ಕಾಶ್ಮೀರ ವಲಯ ಪೊಲೀಸರು 30 ಮಾರ್ಚ್ 2022 ರಂದು ಟ್ವೀಟ್ ಮಾಡಿರುವುದು ಕಂಡುಬಂದಿದೆ. ಅದರಲ್ಲಿ “ಹತ್ಯೆಯಾದ ಭಯೋತ್ಪಾದಕ (ರಯೀಸ್ ಅಹ್ಮದ್ ಭಟ್) ಈ ಹಿಂದೆ ಪತ್ರಕರ್ತರಾಗಿದ್ದರು ಮತ್ತು ಅನಂತನಾಗ್ ಜಿಲ್ಲೆಯಲ್ಲಿ ‘ವ್ಯಾಲಿ ನ್ಯೂಸ್ ಸರ್ವಿಸ್’ ಎನ್ನುವ ಆನ್‌ಲೈನ್ ನ್ಯೂಸ್ ಪೋರ್ಟಲ್ ನಡೆಸುತ್ತಿದ್ದರು ” ಎಂದು ಹೇಳಿದ್ದರೆ. ಸೋಪೋರ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿಯು ರಯೀಸ್ ಅಹ್ಮದ್ ಭಟ್ ಎಂದು ಅವರು ಎಲ್ಲಿಯೂ ಹೇಳಿಲ್ಲ. ರಯೀಸ್ ಅಹ್ಮದ್ ಭಟ್ ಅವರ ಎನ್‌ಕೌಂಟರ್‌ಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.
30 ಮಾರ್ಚ್ 2022 ರಂದು, ಸೋಪೋರ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು CRPF ಬಂಕರ್‌ಗೆ ಬಾಂಬ್ ಎಸೆದಿದ್ದಾರೆ ಎಂದು ಹಲವು ಮಾಧ್ಯಮ ಏಜೆನ್ಸಿಗಳು ವರದಿ ಮಾಡಿವೆ. ಅದೇ ದಿನ, ‘ANI’ ಜೊತೆ ಮಾತನಾಡಿರುವ ಕಾಶ್ಮೀರ IGP ವಿಜಯ್ ಕುಮಾರ್, ’ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಹಾಕಿರುವವರು ಮಹಿಳೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು’. ನಂತರ ಸುದ್ದಿಗೋಷ್ಠಿಯಲ್ಲಿ ಸೋಪೋರ್‌ನ CRPF ಬಂಕರ್‌ಗೆ ಬಾಂಬ್ ಎಸೆದ ಮಹಿಳೆಯನ್ನು ಗುರುತಿಸಿ ಆಕೆಯನ್ನು ಬಂಧಿಸಿರುವುದಾಗಿ ಐಜಿಪಿ ವಿಜಯ್ ಕುಮಾರ್ 31 ಮಾರ್ಚ್ 2022 ರಂದು ಮಾಧ್ಯಮಗಳಿಗೆ ತಿಳಿಸಿದರು. ಹಾಗಾಗಿ ಐಜಿಪಿ ವಿಜಯ್ ಕುಮಾರ್ ಹೇಳೀಕೆಯಂತೆ ಪೆಟ್ರೋಲ್ ಬಾಂಬ್ ಎಸೆದದ್ದು ರಯೀಸ್ ಅಹ್ಮದ್ ಭಟ್ ಅಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸೋಪೋರ್‌ನ (ಜೆ & ಕೆ) ಸಿಆರ್‌ಪಿಎಫ್ ಶಿಬಿರದ ಮೇಲೆ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿಯು ಹಸೀನಾ ಅಖ್ತರ್ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆದರೆ ರಯೀಸ್ ಅಹ್ಮದ್ ಭಟ್ ಎಂದು ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.