ಜನವರಿ 13, 2025 ರಂದು ಪ್ರಾರಂಭವಾಗಿ ಫೆಬ್ರವರಿ 26, 2025 ರವರೆಗೆ ಭಾರತದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ನಡೆಯಲಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಭವ್ಯ ಆಧ್ಯಾತ್ಮಿಕ ಕಾರ್ಯಕ್ರಮದ ಮಧ್ಯೆ, ಹರಿದ್ವಾರ ಮಹಾ ಕುಂಭದಲ್ಲಿ ಹಿಂದೂ ಸಂತ, ಸಿದ್ಧ ಎಂದು ಹೇಳಲಾದ, ಯಾವುದೇ ಹಾನಿಯಾಗದಂತೆ ಮರದ ಮೇಲೆ ಮಲಗಿ “ಬೆಂಕಿ ಸ್ನಾನ” ಮಾಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ (ಇಲ್ಲಿ) ಕಾಣಿಸಿಕೊಂಡಿದೆ. ಈ ವೀಡಿಯೊವನ್ನು ಬಿಬಿಸಿ ವರದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಹಿಂದೂ ಸಂತ, ಸಿದ್ಧ ಎಂದು ಹೇಳಲಾದ, ಬೆಂಕಿ ಸ್ನಾನ ಮಾಡುವ, ಬೆಂಕಿ ಹಚ್ಚುವ ಕಟ್ಟಿಗೆಯ ಮೇಲೆ ಯಾವುದೇ ಹಾನಿಯಾಗದಂತೆ ಮಲಗಿರುವ ಈ ವೈರಲ್ ವೀಡಿಯೊ 2025 ರ ಹರಿದ್ವಾರ ಮಹಾ ಕುಂಭಕ್ಕೆ ಸೇರಿದ್ದು, ಇದನ್ನು ಬಿಬಿಸಿ ವರದಿ ಮಾಡಿದೆ.
ಫ್ಯಾಕ್ಟ್: ವೈರಲ್ ವೀಡಿಯೊ ‘ದಿ ಫೈರ್ ಯೋಗಿ’ ಎಂಬ ಸಾಕ್ಷ್ಯಚಿತ್ರದ ತುಣುಕಾಗಿದ್ದು, ಇದು 2011 ರಲ್ಲಿ ಭಾರತದ ತಮಿಳುನಾಡಿನ ತಂಜಾವೂರಿನಲ್ಲಿ ರಂಬಾಹು ಸ್ವಾಮಿ ಅಪರೂಪದ ಅಗ್ನಿ ಆಚರಣೆಯನ್ನು ಮಾಡುವುದನ್ನು ಇದು ತೋರಿಸುತ್ತದೆ. ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಇದನ್ನು ಬಿಬಿಸಿ ವರದಿ ಮಾಡಿಲ್ಲ. ಆದ್ದರಿಂದ ಈ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ತಪ್ಪು.
ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮಾರ್ಚ್ 23, 2011 ರಂದು ಅಪ್‌ಲೋಡ್ ಮಾಡಲಾದ ‘ದಿ ಫೈರ್ ಯೋಗಿ’ ಎಂಬ ಕ್ಯಾಪ್ಶನ್ ನ ಯೂಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ಸಾಕ್ಷ್ಯಚಿತ್ರದ ಮೊದಲ ಮೂರು ನಿಮಿಷಗಳನ್ನು ಬಳಸಿ ವೈರಲ್ ಕ್ಲಿಪ್ ಅನ್ನು ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ವೀಡಿಯೊದ ವಿವರಣೆಯು ವಿಶೇಷ ಉಸಿರಾಟದ ತಂತ್ರವನ್ನು ಬಳಸಿಕೊಂಡು ಯೋಗಿಯೊಬ್ಬರು ಅಪರೂಪದ ಅಗ್ನಿ ಆಚರಣೆಯನ್ನು ಮಾಡುವುದನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಆದರೆ, ಇದು ಕುಂಭಮೇಳ ಅಥವಾ ಸಿದ್ಧ ಸಂತರನ್ನು ಚಿತ್ರೀಕರಿಸಿರುವ ಬಿಬಿಸಿ ತಂಡವನ್ನು ಇದರಲ್ಲಿ ಉಲ್ಲೇಖಿಸಿಲ್ಲ. ಇದಲ್ಲದೆ, ‘ದಿ ಫೈರ್ ಯೋಗಿ’ ಕುರಿತ ವೀಡಿಯೊಗಳು ಬಹಳ ಸಮಯದಿಂದ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ದಿ ಫೈರ್ ಯೋಗಿ’ ಎಂಬ ಹೆಸರಿನ ಗೂಗಲ್ ಹುಡುಕಾಟವು, ತಂಜಾವೂರಿನ ಹಿರಿಯ ಯೋಗಿ ರಂಬಾಹು ಸ್ವಾಮಿ ಅವರು ನಡೆಸಿದ ಅಪರೂಪದ ಅಗ್ನಿ ಆಚರಣೆಯನ್ನು ಸಾಕ್ಷ್ಯಚಿತ್ರವನ್ನು ತೋರಿಸುತ್ತದೆ. ಯೋಗಿಯ ಪ್ರಕಾರ, ಅವರು ಕಳೆದ 45 ವರ್ಷಗಳಿಂದ 1,000 ದಿನಗಳಿಗೂ ಹೆಚ್ಚು ಕಾಲ ಈ ಆಚರಣೆಯನ್ನು ಮಾಡುತಿದ್ದು,, ತೀವ್ರವಾದ ಜ್ವಾಲೆಗಳನ್ನು ತಡೆದುಕೊಳ್ಳಲು ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಹೆಚ್ಚಾಗಿ ಹೇಳುವುದಾದರೆ, ಆಜ್ ತಕ್ ರಂಬಾಹು ಸ್ವಾಮಿ ಮತ್ತು ಅವರ ಗಮನಾರ್ಹ ಅಗ್ನಿ ಆಚರಣೆಗಳ ಕುರಿತು ವೀಡಿಯೊ ವರದಿಯನ್ನು ಮಾಡಿದೆ. ಆದರೆ, ಕುಂಭಮೇಳದ ಸಮಯದಲ್ಲಿ ಸಿದ್ಧ ಸಂತರು ಯಾವುದೇ ಹಾನಿಗೊಳಗಾಗದೆ ಸುಡುವ ಮರದ ಮೇಲೆ ಮಲಗಿ “ಬೆಂಕಿ ಸ್ನಾನ” ಮಾಡುವುದನ್ನು ಬಿಬಿಸಿ ತಂಡವು ಚಿತ್ರೀಕರಿಸಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಬಿಬಿಸಿ ಕುಂಭಮೇಳದ ಕುರಿತು ಅನೇಕ ವರದಿಯನ್ನು ನೀಡುತ್ತಿದ್ದರು ಈ ಕ್ಲೇಮ್ ಮಾತ್ರ ತಪ್ಪಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಬಿಸಿ ಮತ್ತು ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ‘ದಿ ಫೈರ್ ಯೋಗಿ’ ಸಾಕ್ಷ್ಯಚಿತ್ರ ಕ್ಲಿಪ್‌ನ ಒಂದು ಕ್ಲಿಪ್ ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.