ಸಂಸ್ಕೃತದಲ್ಲಿ ಮೊದಲ ‘ಫ್ಲೈಟ್ ಅನೌನ್ಸ್‌ಮೆಂಟ್’ ಅನ್ನು ತೋರಿಸುವ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಆಕಾಶ ಏರ್’ಗೆ ಸೇರಿದ ವಿಮಾನದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಹಾಗಾದರೆ ಈ ಲೇಖನದಲ್ಲಿ, ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ನಾವು ವಾಸ್ತವವಾಗಿ ಪರಿಶೀಲಿಸುತ್ತೇವೆ.
ಕ್ಲೇಮ್ : ‘ಆಕಾಶ ಏರ್’ ವಿಮಾನದಲ್ಲಿ ಸಂಸ್ಕೃತದಲ್ಲಿ ವಿಮಾನ ಪ್ರಕಟಣೆಯನ್ನು ತೋರಿಸುತ್ತಿರುವ ವಿಡಿಯೋ.
ಫ್ಯಾಕ್ಟ್ : ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಸ್ಕೃತ ವಿಷಯಗಳಿಗೆ ಸಂಬಂದಿಸಿದ ವಿಡಿಯೋ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುವ ‘ಸಂಸ್ಕೃತ ಸ್ಪ್ಯಾರೋ’ ಎಂಬ ವೀಡಿಯೊ ರಚನೆಕಾರನ ಡಬ್ಬಿಂಗ್ ವೀಡಿಯೊ. ‘ಆಕಾಸ ಏರ್’ ಕೂಡ ವೀಡಿಯೋದಲ್ಲಿರುವ ಪ್ರಕಟಣೆ ಅಫೀಷಿಯಲ್ (ಅಧಿಕೃತವಲ್ಲ) ಅಲ್ಲ ಎಂದು ಸ್ಪಷ್ಟಪಡಿಸಿದೆ. ತಮ್ಮ ವಿಮಾನದ ಪ್ರಕಟಣೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರುವುದಾಗಿ ತಿಳಿಸಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದಲ್ಲಿಇನ್‌ಸ್ಟಾಗ್ರಾಮ್ ಖಾತೆಯ ‘ಸಂಸ್ಕೃತ ಸ್ಪ್ಯಾರೋ‘ ಹೆಸರಿನ ವಾಟರ್‌ಮಾರ್ಕ್ ಅನ್ನು ಪ್ರಾರಂಭದಲ್ಲಿ ಗಮನಿಸಿದ ನಂತರ, ನಾವು ಈ ಪುಟವನ್ನು ಆನ್‌ಲೈನ್‌ನಲ್ಲಿ ಹುಡುಕಿದ್ದೇವೆ ಮತ್ತು ಸಮಸ್ತಿ ಗುಬ್ಬಿ ಎನ್ನುವವರು ಇದನ್ನು ನೋಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇಲ್ಲಿ, ಅವರು ಸಂಸ್ಕೃತದಲ್ಲಿ ವಿಷಯವನ್ನು ಅಪ್‌ಲೋಡ್ ಮಾಡುತ್ತಾರೆ.
ಅವರು 6 ಜೂನ್ 2024 ರಂದು ಸಂಸ್ಕೃತ ವಿಮಾನ ಘೋಷಣೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. (ಆರ್ಕೈವ್ ಲಿಂಕ್)
ಪೋಸ್ಟ್‌ನ ವೀಡಿಯೊ ವಿವರಣೆಯಲ್ಲಿ, ವೀಡಿಯೊ ‘ಡಬ್ ಮಾಡಿದ ವಾಯ್ಸ್-ಓವರ್’ ಆಗಿದ್ದುಇದು ಯಾವುದೇ ವಿಮಾನದಲ್ಲಿ ಮಾಡಿದ ನಿಜವಾದ ಘೋಷಣೆಯಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ವೀಡಿಯೋಗೂ ‘ಆಕಾಶ ಏರ್’ಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕ್ಲೈಮ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಹುಡುಕಾಟದ ಮೂಲಕ, ಈ ವೀಡಿಯೊ (ಆರ್ಕೈವ್ ಲಿಂಕ್) ಬಗ್ಗೆ ‘ಆಕಾಶ ಏರ್’ ಸಹ ಸ್ಪಷ್ಟಪಡಿಸಿರುವುದು ನಮಗೆ ತಿಳಿದುಬಂದಿದೆ. ವೈರಲ್ ವೀಡಿಯೊದ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಅಡಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ‘ವೀಡಿಯೊದಲ್ಲಿನ ಪ್ರಕಟಣೆಯು ಅಫೀಷಿಯಲ್ (ಅಧಿಕೃತವಾಗಿಲ್ಲ) ಅಲ್ಲ ಮತ್ತು ಶೇರ್ ಮಾಡಿರುವ ವಿಡಿಯೋ ಡಬ್ಬಿಂಗ್ ವಾಯ್ಸ್ ಆಗಿದ್ದು, ಅವರ ಫ್ಲೈಟ್ ಪ್ರಕಟಣೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಲಭ್ಯವಿದೆ‘ ಎಂದು ತಿಳಿಸಿದ್ದಾರೆ.
ಆಕಾಶ ಏರ್ ಫ್ಲೈಟ್‌ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇಂತಹ ಪ್ರಕಟಣೆಗಳ ವೀಡಿಯೊಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ವೀಡಿಯೊದಲ್ಲಿ ‘ಆಕಾಶ ಏರ್’ ನಲ್ಲಿ ನ ಅನೌನ್ಸ್ಮೆಂಟ್ ಅನ್ನು ಸಂಸ್ಕೃತ ಕ್ಕೆ ಬಡ್ ಮಾಡಲಾಗಿದೆ.