ಅಮೆರಿಕಾ ಡಾಲರ್‌ನ 100 ರ ನೋಟ್‌ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವಿರುವ ಪೋಸ್ಟ್ ಅನ್ನು ಕೆಲವು ಫೇಸ್‌ಬುಕ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‌ನಲ್ಲಿ ಅಮೆರಿಕಾ ಸರ್ಕಾರವು ಅಂಬೇಡ್ಕರ್ ಅವರ ಚಿತ್ರವನ್ನು ಅಮೆರಿಕನ್ ಡಾಲರ್‌ನ 100 ರ ನೋಟ್‌ನಲ್ಲಿ ಮುದ್ರಿಸಿದೆ ಎಂದು ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಅಮೆರಿಕ ಸರ್ಕಾರವು ತಮ್ಮ ದೇಶದ ಅಮೆರಿಕನ್ ಡಾಲರ್‌ನ 100 ರ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಿದೆ.
ಸತ್ಯಾಂಶ: ಅಮರಿಕನ್ ಡಾಲರ್ 100 ರ ನೋಟಿನ ಮೇಲೆ ಬೆಂಜಮಿನ್ ಫ್ರಾಂಕ್ಲಿನ್ ಅವರ ಚಿತ್ರವಿದೆ. ಅಮೇರಿಕಾ ಸರ್ಕಾರವು ತನ್ನ ಅಮೆರಿಕಾ ಡಾಲರ್‌ನ 100 ರ ಕರೆನ್ಸಿ ನೋಟಿನಲ್ಲಿ ಬೇರೆ ಯಾವುದೇ ವ್ಯಕ್ತಿಯ ಚಿತ್ರವನ್ನು ಎಂದಿಗೂ ಮುದ್ರಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.
ಅಮೆರಿಕಾದಲ್ಲಿ ಪ್ರಕಟವಾದ ವಿವಿಧ ಕರೆನ್ಸಿ ನೋಟುಗಳ ವಿವರಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದಾಗ, ಕರೆನ್ಸಿ ಕುರಿತು ಮಾಹಿತಿ ನೀಡುವ ವೆಬ್‌ಸೈಟ್ uscurrency.gov ನಮಗೆ ಸಿಕ್ಕಿದೆ. ಈ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ಅಮೆರಿಕನ್ ಡಾಲರ್‌ನ ವಿನ್ಯಾಸವು 4 ಬಾರಿ ಬದಲಾಗಿದೆ. ಆದರೆ ಅವೆಲ್ಲವೂ ಬೆಂಜಮಿನ್ ಫ್ರಾಂಕ್ಲಿನ್ ಅವರ ಚಿತ್ರವನ್ನು ಹೊಂದಿವೆ. ಆದ್ದರಿಂದ, ಅಮೆರಿಕಾ ಸರ್ಕಾರವು ಅಂಬೇಡ್ಕರ್ ಅವರ ಚಿತ್ರವನ್ನು ತಮ್ಮ ದೇಶದ ಕರೆನ್ಸಿ ನೋಟಿನಲ್ಲಿ ಎಂದಿಗೂ ಮುದ್ರಿಸಿಲ್ಲ.
ಅಮೆರಿಕನ್ ಡಾಲರ್ 100 ರ ನೋಟಿನಲ್ಲಿರುವ ಚಿತ್ರವನ್ನು ನಮ್ಮ ಆಯ್ಕೆಯ ಚಿತ್ರದೊಂದಿಗೆ ಬದಲಾಯಿಸಲು ನಮಗೆ ಅನುಮತಿಸುವ ಕೆಲವು ವೆಬ್‌ಸೈಟ್‌ಗಳಿವೆ. ಒಬಾಮಾ ಚಿತ್ರದೊಂದಿಗಿನ ಅಂತಹ 100 ಡಾಲರ್‌ನ ನೋಟನ್ನು ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ರೀತಿಯಲ್ಲಿಯೆ ಇರುವುದನ್ನು ನೀವು ಗಮನಿಸಬಹುದು.
ಆದ್ದರಿಂದ, 100 ಅಮೆರಿಕನ್ ಡಾಲರ್‌ನ ನೋಟ್‌ನಲ್ಲಿ ಕಾಣುವ ಅಂಬೇಡ್ಕರ್ ಅವರ ಚಿತ್ರವು ಎಡಿಟ್ ಮಾಡಿರುವುದಾಗಿದೆ.