Fake News - Kannada
 

ಅಯೋಧ್ಯೆಯ ರಾಮ್ ದೇವಾಲಯದ ವಿನ್ಯಾಸವಾಗಿ ಸ್ವಾಮಿನಾರಾಯಣ್ ಅಕ್ಷರ್ಧಮ್ ದೇವಾಲಯದ ಫೋಟೋವನ್ನು ಹಂಚಿಕೊಳ್ಳಲಾಗಿದೆ

1

ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮ ದೇವಾಲಯದ ವಿನ್ಯಾಸ ಇದಾಗಿದೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಹಕ್ಕಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸಲು ಪ್ರಯತ್ನಿಸೋಣ.

ಪೋಸ್ಟ್ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆಯಲ್ಲಿ: ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮ ದೇವಾಲಯದ ವಿನ್ಯಾಸ.

ಸತ್ಯ: ಪೋಸ್ಟ್ ಮಾಡಿದ ಚಿತ್ರದಲ್ಲಿ ತೋರಿಸಿರುವ ದೇವಾಲಯವು ದೆಹಲಿಯ ಸ್ವಾಮಿನಾರಾಯಣ್ ಅಕ್ಷರ್ಧಮ್ ದೇವಾಲಯವಾಗಿದೆ. ಅಲ್ಲದೆ, ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣ ವಿನ್ಯಾಸ ಇನ್ನೂ ಅಂತಿಮಗೊಂಡಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾಧಾನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ತಂತ್ರವನ್ನು ಬಳಸಿ ಪೋಸ್ಟ್ ಮಾಡಿದ ಚಿತ್ರವನ್ನು ಹುಡುಕಿದಾಗ, ಫೋಟೋ ದೆಹಲಿಯ ಸ್ವಾಮಿನಾರಾಯಣ್ ಅಕ್ಷರ್ಧಮ್ ದೇವಾಲಯದದ್ದಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ, ಗೂಗಲ್ ನಕ್ಷೆಗಳಲ್ಲಿ ಆ ದೇವಾಲಯದ ಬಗ್ಗೆ ಹುಡುಕಿದಾಗ, ಪೋಸ್ಟ್‌ನಲ್ಲಿ ಹಂಚಿಕೊಂಡ ಅದೇ ಫೋಟೋ ಕಂಡುಬಂದಿದೆ. ಆ ದೇವಸ್ಥಾನಕ್ಕೆ ಸಂಬಂಧಿಸಿದ ಹೆಚ್ಚಿನ ಫೋಟೋಗಳನ್ನು ಇಲ್ಲಿ ನೋಡಬಹುದು. ಆದ್ದರಿಂದ, ಪೋಸ್ಟ್ನಲ್ಲಿ ತೋರಿಸಿರುವ ಫೋಟೋ ಅಯೋಧ್ಯೆಯ ರಾಮ್ ದೇವಾಲಯದ ನಿರ್ಮಾಣ ವಿನ್ಯಾಸವಲ್ಲ, ಇದು ದೆಹಲಿಯ ಸ್ವಾಮಿನಾರಾಯಣ್ ಅಕ್ಷರ್ಧಮ್ ದೇವಾಲಯದ ಫೋಟೋ.

ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣ ಯೋಜನೆಯನ್ನು ಅಂತಿಮಗೊಳಿಸಲಾಗಿದೆಯೇ ಎಂದು ಗೂಗಲ್‌ನಲ್ಲಿ ಹುಡುಕಿದಾಗ, ಅದನ್ನು ದೃಡಿಕರಿಸಲು ಯಾವುದೇ ಮಾಹಿತಿ ಕಂಡುಬಂದಿಲ್ಲ. ಫೆಬ್ರವರಿ 29, 2020 ರಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ಲೇಖನದಿಂದ, ಲಾರ್ಸೆನ್ ಮತ್ತು ಟೌಬ್ರೊ (ಎಲ್ & ಟಿ) ಎಂಬ ಸಂಸ್ಥೆ ರಾಮ್ ದೇವಾಲಯದ ನಿರ್ಮಾಣ ಮತ್ತು ವಿನ್ಯಾಸ ಯೋಜನೆಯನ್ನು ನೀಡಲು ಮುಂದೆ ಬಂದಿತು ಎಂದು ತಿಳಿದುಬಂದಿದೆ. ಆದರೆ, ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣದ ಜವಾಬ್ದಾರಿಯನ್ನು ಯಾರಿಗೆ ವಹಿಸಿಕೊಡಬೇಕು ಎಂದು ನಿರ್ಧರಿಸಲು ಮಾರ್ಚ್ ಮೊದಲ ವಾರದಲ್ಲಿ ಮಂಡಳಿಯ ಸಭೆ ನಡೆಸಲಾಗುವುದು ಎಂದು ‘ಶ್ರೀರಾಮ್ ತೀರ್ಥ ಕ್ಷೇತ್ರ ಟ್ರಸ್ಟ್’ ಸದಸ್ಯರೊಬ್ಬರು ಹೇಳಿದ್ದಾರೆ. ಹಾಗಾಗಿ, ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣ ಯೋಜನೆಯನ್ನು ಯಾರು ವಿನ್ಯಾಸಗೊಳಿಸುತ್ತಾರೆ ಎಂಬ ಬಗ್ಗೆ ಮಂಡಳಿ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾದೆಗಿ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ನಲ್ಲಿ ಹಂಚಿಕೊಂಡಿರುವ ದೇವಾಲಯದ ಫೋಟೋ ದೆಹಲಿಯ ಸ್ವಾಮಿನಾರಾಯಣ್ ಅಕ್ಷರ್ಧಮ್ ದೇವಾಲಯವಾಗಿದೆ. ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣ ಯೋಜನೆ ಇನ್ನೂ ಅಂತಿಮಗೊಂಡಿಲ್ಲ.

Share.

About Author

scroll