Fake News - Kannada
 

ಜಗತ್ತಿನಲ್ಲಿನ ಸಿರಿವಂತರ ಪಟ್ಟಿಯಲ್ಲಿ ಸೋನಿಯಾಗಾಂಧಿ ನಾಲ್ಕನೆ ಸ್ಥಾನದಲ್ಲಿ ಇಲ್ಲ

0

ಜಗತ್ತಿನಲ್ಲಿನ ಸಿರಿವಂತರ  ಪಟ್ಟಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೆಸರು ನಾಲ್ಕನೇ ಸ್ಥಾನದಲ್ಲಿದೆಯೆಂದು  ಹೇಳಲಾಗುತ್ತಿರುವ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನ ಷೇರ್‌ ಮಾಡುತ್ತಿದ್ದಾರೆ. ಇದು ನಿಜವೇ ಪರಿಶೀಲಿಸೋಣ.

ಆ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ:‌ ಜಗತ್ತಿನಲ್ಲಿನ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಹೆಸರು ನಾಲ್ಕನೆ ಸ್ಥಾನದಲ್ಲಿ ಇದೆ.

ನಿಜಾಂಶ:‌ ʼಪೋರ್ಬ್ಸ್‌ ಸಂಸ್ಥೆ ಇತ್ತಿಚಿಗೆ ಬಿಡುಗಡೆ ಮಾಡಿದ ಪ್ರಪಂಚ ಬಿಲಿಯನಿಯರ್‌ ಗಳ ಪಟ್ಟಿಯಲ್ಲಿ ಸೋನಿಯಾ ಗಾಂಧಿಯವರ  ಹೆಸರೇ ಇಲ್ಲ . 2095 ಸಿರಿವಂತರ ಹೆಸರು ಇರುವ ಪಟ್ಟಿಯಲ್ಲಿಯೂ ಸಹ ಅವರ ಹೆಸರು ಇಲ್ಲ. ʼಬಿಜೆನೆಸ್‌  ಇನ್ಸೈಡರ್‌ʼ ನವರು ಬಿಡುಗಡೆ ಮಾಡಿದ  ‘Top 10 Richest women in India’ ಪಟ್ಟಿಯಲ್ಲಿಯೂ ಸಹ ಸಹ ಸೋನಿಯಾ ಗಾಂಧಿ ಇಲ್ಲ. 2019 ರ ಚುನಾವಣೆಯ ಅಫಿಡವಿಡಟ್‌ನಲ್ಲಿಯೂ ತನ್ನ ಆಸ್ತಿಗಳ ಬೆಲೆ ಸುಮಾರು 12 ಕೋಟಿ ರೂಪಾಯಿಗಳೆಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

2020 ವರ್ಷದ ʼಪೋರ್ಬ್ಸ್‌ʼ ಸಂಸ್ಥೆ ಬಿಡುಗಡೆ ಮಾಡಿದ ಪ್ರಪಂಚ ಬಿಲಿಯನೆರ್‌ಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ  ಹೆಸರು  ಸಹ  ಇದೆಯೆ ಎಂದು ಹುಡುಕಿದಾಗ, ಆ ಪಟ್ಟಿಯಲ್ಲಿ ಅವರು ಇಲ್ಲವೆಂದು ತಿಳಿದುಬಂದಿದೆ. 2095 ಮಂದಿಯ ಹೆಸರುಗಳು ಇರುವ ಈ ಪಟ್ಟಿಯಲ್ಲಿ  ಅವರು ಹೆಸರು ಇಲ್ಲ. ಇಂಡಿಯಾಗೆ ಸಂಬಂಧಿಸಿದಂತೆ  ಮುಖೇಶ್ ಅಂಬಾನಿ ಅತ್ತುತ್ತಮವಾಗಿ 21ನೇ ಸ್ಥಾನದಲ್ಲಿ ಇದ್ದಾರೆ. ಬಿಲಿಯನರ್‌ಗಳಿಗೆ  ಸಂಬಂಧಿಸಿದ  ರಿಯಲ್‌ –ಟೈಮ್‌ ಪಟ್ಟಿಯನ್ನು ಇಲ್ಲಿ ನೋಡಬಹುದು.

ʼಬಿಜೆನೆಸ್‌  ಇನ್ಸೈಡರ್‌ʼ ನವರು ಬಿಡುಗಡೆ ಮಾಡಿದ  ‘Top 10 Richest women in India’ ಪಟ್ಟಿಯಲ್ಲಿಯೂ ಸಹ ಸಹ ಸೋನಿಯಾ ಗಾಂಧಿ ಇಲ್ಲ. 2019 ರ ಚುನಾವಣೆಯ ಅಫಿಡವಿಡಟ್‌ನಲ್ಲಿ ತನ್ನ ಆಸ್ತಿಗಳ ಬೆಲೆ ಸುಮಾರು 12 ಕೋಟಿ ರೂಪಾಯಿಗಳೆಂದು ಸೋನಿಯಾಗಾಂಧಿ ಹೇಳಿದ್ದಾರೆ.

ಜಗತ್ತಿನಲ್ಲಿನ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಬ್ಬರು ಎಂದು ಹೇಳುತ್ತಾ, ʼಬಿಜೆನೆಸ್‌ ಇನ್ಸೈಡರ್‌ʼ ( ಸೋನಿಯಾ -4ನೇ ಸ್ಥಾನ) ಮತ್ತು ʼಹಾಫಿಂಗ್ಟನ್‌ ಪೋಸ್ಟ್‌ʼನವರು  ಈ ಹಿಂದೆ ಲೇಖನ ಪ್ರಕಟಿಸಿದ್ದರು. ಆದರೆ, ʼಬಿಜೆನೆಸ್‌ ಇನ್ಸೈಡರ್‌ʼನವರು ಸೋನಿಯಾಗೆ  ಸಂಬಂಧಿಸಿದಂತೆ ಡೇಟಾವನ್ನು ನಂಬಲಾರ್ಹ ವೆಬ್ಸೈಟ್‌ನಿಂದ ತೆಗೆದುಕೊಂಡಿಲ್ಲವೆಂದು 2018ರಲ್ಲಿ ʼಆಲ್ಟ್‌ ನ್ಯೂಸ್‌ʼನವರು  ಲೇಖನ ಬರೆದಿದ್ದಾರೆ.  ಅವರ ಪಟ್ಟಿಯನ್ನು ಕೆಲವರು ಪ್ರಶ್ನಿಸಿದ ಮೇಲೆ ʼಹಾಫಿಂಗ್ಟನ್‌ ಪೋಸ್ಟ್‌,ನವರು ಸೋನಿಯಾ ಗಾಂಧಿ ಹೆಸರನ್ನು ಪಟ್ಟಿಯಿಂದ ತೆದೆದುಹಾಕಿ, ತಾವು ಸೋನಿಯಾ ಗಾಂಧಿಯವರ ಆಸ್ತಿಗಳ ಬೆಲೆಯನ್ನು ಪರಿಶೀಲಿಸಲು ಆಗುವುದಿಲ್ಲವೆಂದು ವಿವರಣೆ ನೀಡಿದ್ದಾರೆ.

ಒಟ್ಟಿನಲ್ಲಿ, ಜಗತ್ತಿನಲ್ಲಿರುವ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಲ್ಕನೆ ಸ್ಥಾನದಲ್ಲಿ ಇಲ್ಲ.

Share.

About Author

Comments are closed.

scroll