Fake News - Kannada
 

ಬುರ್ಖಾಧಾರಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಪುರುಷನ ನೈಜ ಘಟನೆಯಂತೆ ಸ್ಕ್ರಿಪ್ಟ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

ಫೂಟ್ ಓವರ್‌ಬ್ರಿಡ್ಜ್‌ನಲ್ಲಿ ಮುಸ್ಲಿಮ್ ಪುರುಷನೊಬ್ಬ ಬುರ್ಖಾ ಧರಿಸಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವ ವೀಡಿಯೊ ನೈಜ ಘಟನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಮುಸ್ಲಿಂ ಪುರುಷನೊಬ್ಬ ಫೂಟ್ ಓವರ್ ಬ್ರಿಡ್ಜ್ ನಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.

ಫ್ಯಾಕ್ಟ್ : ಇದು ಬಾಂಗ್ಲಾದೇಶದಿಂದ ಸ್ಕ್ರಿಪ್ಟ್ ಮಾಡಿದ ವೀಡಿಯೊ. ಇದು ಯಾವುದೇ ನೈಜ ಘಟನೆಯನ್ನು ಚಿತ್ರಿಸುವುದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ರಿವೆರ್ಸೆ ಇಮೇಜ್  ಹುಡುಕಾಟವು 05 ಸೆಪ್ಟೆಂಬರ್ 2024 ರಂದು ಅಜಿಜುಲ್ 2.0 ನ Facebook ಪೇಜ್ನಲ್ಲಿ ಅಪ್‌ಲೋಡ್ ಮಾಡಲಾದ ಫುಲ್ ಲೆಂಥ್ ವರ್ಷನ್ಗೆ (ಆರ್ಕೈವ್) ನಮ್ಮನ್ನು ಕರೆದೊಯ್ಯಿತು. ಈ ಪೇಜ್ ಹಲವಾರು ಇತರ ಹಾಸ್ಯ ಸ್ಕ್ರಿಪ್ಟ್ಗಳ್ಲನ್ನು  ಸಹ ಒಳಗೊಂಡಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮತ್ತು ವೃದ್ಧ, ಈ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ತನಿಖೆ ನಡೆಸಿದಾಗ ಈ ವೀಡಿಯೊಗಳನ್ನು ಅಜೀಜುಲ್ ಹಕ್ ಮೊರಾದ್ ಅವರು ರಚಿಸಿದ್ದಾರೆ ಎಂದು ತಿಳಿದುಬಂದಿದೆ, ಅವರು ಬಾಂಗ್ಲಾದೇಶ ಮೂಲದ ವೀಡಿಯೊ ಕ್ರಿಯೇಟರ್ ಎಂದು ಗುರುತಿಸಿಕೊಂಡಿದ್ದಾರೆ. ಮೇಲಿನ ಪುರಾವೆಗಳ ಆಧಾರದ ಮೇಲೆ, ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದ್ದು,  ನೈಜ ಘಟನೆಗಳನ್ನು ಚಿತ್ರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬುರ್ಖಾ ಧರಿಸಿದ ಮಹಿಳೆಯೊಂದಿಗೆ ವಯಸ್ಸಾದ ಮುಸ್ಲಿಂ ವ್ಯಕ್ತಿ ಅಸಭ್ಯವಾಗಿ ವರ್ತಿಸುವುದನ್ನು ಒಳಗೊಂಡ  ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. 

Share.

Comments are closed.

scroll