Fake News - Kannada
 

ಭೀಮಾವರಂ ದೇವಸ್ಥಾನದ ಬಳಿ ಮಾನಸಿಕ ರೋಗಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋವನ್ನು, ಮುಸ್ಲಿಂ ವ್ಯಕ್ತಿ ದೇವರ ವಿಗ್ರಹವನ್ನು ಧ್ವಂಸ ಮಾಡಲು ಯತ್ನಿಸುತ್ತಿದ್ದ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ

0

ಭೀಮಾವರಂ ಪ್ರದೇಶದಲ್ಲಿ ಹಿಂದೂ ದೇವತೆಯ ವಿಗ್ರಹಗಳನ್ನು ಧ್ವಂಸ ಮಾಡಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವನ ಬಳಿ ಹಿಟ್ ಲಿಸ್ಟ್ ಕೂಡ ಇದೆ ಮತ್ತು ದೇವಸ್ಥಾನಗಳ ಮೇಲೆ ದಾಳಿ ಮಾಡುವ ದೊಡ್ಡ ಗ್ಯಾಂಗ್‌ಗೆ ಸೇರಿದವನು ಎಂದು ವಿಡಿಯೋದ ವಿವರಣೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಭೀಮಾವರಂನಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಧ್ವಂಸ ಮಾಡಲು ಯತ್ನಿಸಿದ ಮುಸ್ಲಿಂ ವ್ಯಕ್ತಿಗೆ ಸ್ಥಳೀಯರು ಥಳಿಸಿದ ವಿಡಿಯೋ. 

ಫ್ಯಾಕ್ಟ್: ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ.  01 ನವೆಂಬರ್ 2024 ರಂದು ಭೀಮಾವರಂ ಬಳಿಯ ಕೋದಂಡ ರಾಮ ದೇವಾಲಯದ ಬಳಿ ಮಧ್ಯಾಹ್ನ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದಿಲೀಪ್ ಎಂಬ ವ್ಯಕ್ತಿ ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ಮೂಲದವನಾಗಿದ್ದು, ಮೂರು ವರ್ಷಗಳಿಂದ ಭೀಮಾವರಂ ಸುತ್ತಮುತ್ತ ಕಾಗದ ಮತ್ತು ಖಾಲಿ ನೀರಿನ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದಾನೆ. 30 ಅಕ್ಟೋಬರ್ 2024 ರಂದು, ಕೆಲವರು ಅವನನ್ನು ಗದರಿಸಿ, ಚುಡಾಯಿಸಿದ್ದರಿಂದ ವಿಚಲಿತರಾದ ದಿಲೀಪ್ ಅವರು ಅಮ್ಮನಿಗೆ ಒಂದು ಪತ್ರ ಬರೆದಿದ್ದಾನೆ. 01 ನವೆಂಬರ್ 2024 ರಂದು, ದೇವಾಲಯದ ಬಳಿ ಅಲೆದಾಡುತ್ತಿದ್ದಾಗ ಅರ್ಚಕರು ದಿಲೀಪ್ ನನ್ನು ಪ್ರಶ್ನಿಸಿದಾಗ, ದಿಲೀಪ್ ಸೊಕ್ಕಿನಿಂದ ಪ್ರತಿಕ್ರಿಯಿಸಿದರು ಮತ್ತು ವಿವರಿಸಲು ನಿರಾಕರಿಸಿದರು. ಈ ವರ್ತನೆಗೆ ಸ್ಥಳೀಯರು ಥಳಿಸಿದ್ದಾರೆ. ಆತ ಮಾನಸಿಕ ರೋಗಿಯಾಗಿದ್ದು, ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ವಿಶಾಖಪಟ್ಟಂನ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ ಮತ್ತು ತಾನು ಹಿಂದೂ ಎಂದು ಸ್ಪಷ್ಟಪಡಿಸಿದರು. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿರುವಾಗ, ಘಟನೆಯನ್ನು ವಿವರಿಸುವ ಡೈಲಿಹಂಟ್ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಈ ಕಥೆಯ ಪ್ರಕಾರ, 01 ನವೆಂಬರ್ 2024 ರ ಮಧ್ಯಾಹ್ನ, ಭೀಮಾವರಂ ಬಳಿಯ ಕೋದಂಡ ರಾಮ ದೇವಾಲಯದಲ್ಲಿ ಶಂಕಿತ ವ್ಯಕ್ತಿಯೊಬ್ಬರು ತಿರುಗಾಡುತ್ತಿದ್ದರು. ಸ್ಥಳೀಯರು ಅವನನ್ನು ಗಮನಿಸಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಆತ ಅರ್ಥವಾಗದ ಭಾಷೆಯಲ್ಲಿ ಮಾತನಾಡಿದಾಗ ಅಲ್ಲಿನ ಜನರಿಗೆ ಅನುಮಾನವಾಗಿದೆ. ಈತ ರಾಮ ಮಂದಿರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡ ಸ್ಥಳೀಯರು ಆತನೇ ವಿಗ್ರಹಗಳನ್ನು ಧ್ವಂಸ ಮಾಡಿರುವ ಶಂಕೆ ವ್ಯಕ್ತಪಡಿಸಿ ಚೀರಾಡಿದ್ದಾರೆ. ಈ ವೇಳೆ ಆತನ ಮೇಲೆ ಕೆಲವರು ಹಲ್ಲೆ ಕೂಡ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಭೀಮಾವರಂ ಪೇಟೆ ಪೊಲೀಸರು ಅಲ್ಲಿಗೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನ ಪ್ರತಿ ಸಲಭಿಸಿದೆ. ಈ ವ್ಯಕ್ತಿಯ ಹೆಸರು ಪೋಲುಮತಿ ದಿಲೀಪ, ವಯಸ್ಸು-35 ವರ್ಷ, ಜಾತಿ-ಎಸ್.ಸಿ-ಮಾಲಾ. ಇದರಿಂದ ಆತ ಮುಸ್ಲಿಂ ಅಲ್ಲ ಎಂಬುದು ಸ್ಪಷ್ಟವಾಯಿತು.

ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಭೀಮಾವರಂ ಟು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. ಅವರು ನೀಡಿದ ಮಾಹಿತಿ ಪ್ರಕಾರ, ದಿಲೀಪ್ ಪೂರ್ವ ಗೋದಾವರಿ ಜಿಲ್ಲೆಯ ರಾವುಲಪಾಲೆಂ ಮೂಲದವರಾಗಿದ್ದು, ಮೂರು ವರ್ಷಗಳಿಂದ ಭೀಮಾವರಂ ಸುತ್ತಮುತ್ತ ಕಾಗದ ಮತ್ತು ಖಾಲಿ ನೀರಿನ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದಾರೆ. 30 ಅಕ್ಟೋಬರ್ 2024 ರಂದು, ಕೆಲವರು ಅವನನ್ನು ಚುಡಾಯಿಸಿದ್ದರಿಂದ ವಿಚಲಿತರಾದ ದಿಲೀಪ್ ತನ್ನ ಅಮ್ಮನಿಗೆ ಪತ್ರ ಬರೆದಿದ್ದಾನೆ. 01 ನವೆಂಬರ್ 2024 ರಂದು, ದೇವಾಲಯದ ಬಳಿ ಅಲೆದಾಡುತ್ತಿದ್ದಾಗ ಅರ್ಚಕರು ದಿಲೀಪ್ನನ್ನ  ಪ್ರಶ್ನಿಸಿದಾಗ, ದಿಲೀಪ್ ಸೊಕ್ಕಿನಿಂದ ಪ್ರತಿಕ್ರಿಯಿಸಿದ್ದಲ್ಲದೇ ವಿವರಿಸಲು ನಿರಾಕರಿಸಿದ್ದಾನೆ. ಈ ವರ್ತನೆಗೆ ಸ್ಥಳೀಯರು ಥಳಿಸಿದ್ದಾರೆ. ಆತ ಮಾನಸಿಕ ರೋಗಿಯಾಗಿದ್ದು, ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ವಿಶಾಖಪಟ್ಟಂನ  ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ ಮತ್ತು ಆತ ಹಿಂದೂ ಎಂದು ಸ್ಪಷ್ಟಪಡಿಸಿದ್ದಾರೆ. 

ಕೊನೆಯದಾಗಿ ಹೇಳುವುದಾದರೆ, ಭೀಮಾವರಂ ದೇವಸ್ಥಾನದ ಬಳಿ ಮಾನಸಿಕ ಅಸ್ವಸ್ಥನೊಬ್ಬನಿಗೆ ಥಳಿಸಿರುವ ವಿಡಿಯೋವನ್ನು ಮುಸ್ಲಿಂ ವ್ಯಕ್ತಿಯೊಬ್ಬ ದೇವರ ಮೂರ್ತಿಯನ್ನು ಧ್ವಂಸ ಮಾಡಲು ಯತ್ನಿಸುತ್ತಿದ್ದಾನೆ ಎಂದು ತಪ್ಪಾಗಿ ಶೇರ್ ಮಾಡಲಾಗುತ್ತಿದೆ.

Share.

Comments are closed.

scroll