ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪೋಸ್ಟ್ನ ಸತ್ಯವನ್ನು ಈ ಲೇಖನದಲ್ಲಿ ತಿಳಿಯೋಣ.

ಪ್ರತಿಪಾದನೆ: ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ವೇಳೆ ಸಾವನ್ನಪ್ಪಿದ ವ್ಯಕ್ತಿಯ ವಿಡಿಯೋ.
ಸತ್ಯ: ಈ ವೀಡಿಯೊ ನಿಜವಲ್ಲ, ಇದು ಪೂರ್ವಯೋಜಿತ (ಸ್ಕ್ರಿಪ್ಟೆಡ್) ವಿಡಿಯೋವಾಗಿದೆ. ಈ ವಿಡಿಯೋ 21 ನವೆಂಬರ್ 2021ರಿಂದ ವೈರಲ್ ಆಗುತ್ತಿದ್ದರೂ, ಇದೇ ವೀಡಿಯೊವನ್ನು ನಟಿ ಹಂಸಾ ನಂದಿನಿ ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ 02 ಮಾರ್ಚ್ 2020 ರಂದು ಪೋಸ್ಟ್ ಮಾಡಲಾಗಿದೆ. ಹಂಸಾ ಅವರು ಪೋಸ್ಟ್ನಲ್ಲಿ ವಿಡಿಯೋದ ಬಗ್ಗೆ ವಿಡಂಬನೆಗಳನ್ನು ಸಹ ಬರೆಯಲಾಗಿದೆ. “ಈ ಕಿರುಚಿತ್ರಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ” ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ವಿಡಿಯೋದಲ್ಲಿರುವ ಅದೇ ದೃಶ್ಯಗಳನ್ನು ಹಿಂದಿರುವ ಫೇಸ್ಬುಕ್ ವೀಡಿಯೊ ದೊರೆತಿದೆ. 02 ಮಾರ್ಚ್ 2020 ರಂದು ನಟಿ ಹಂಸಾ ನಂದಿನಿ ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಹೊಂದಿದ್ದು, “ಈ ಕಿರುಚಿತ್ರಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ” ಎಂದು ಬರೆಯಲಾಗಿದೆ.
ವೀಡಿಯೊದ ಕೆಳಗಿನ ಬಲ ಮೂಲೆಯಲ್ಲಿ, ದಿನಾಂಕವು 21 ನವೆಂಬರ್ 2021 ಎಂದು ಹಾಕಲಾಗಿದೆ. ಆದರೆ, ವೀಡಿಯೊವನ್ನು ಪೋಸ್ಟ್ ಮಾಡಿದ ದಿನಾಂಕವು 02 ಮಾರ್ಚ್ 2020 ಆಗಿದೆ. ಆದ್ದರಿಂದ, ಹಳೆಯ ವೀಡಿಯೊಗೆ ಇತ್ತೀಚಿನ ದಿನಾಂಕವನ್ನು ಸೇರಿಸಿ ಹಂಚಿಕೊಳ್ಳಲಾಗಿದೆ.

ವಿಡಿಯೋದ ಕೊನೆಯಲ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿದಂತೆ ವಿವರಣೆ ನೀಡಲಾಗಿದೆ. “ಇಂತಹ ವಿಡಿಯೋಗಳು ಕೇವಲ ಜಾಗೃತಿಗಾಗಿ ಮಾತ್ರ” ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುವಕನೊಬ್ಬ ಗೆಳೆಯರೊಂದಿಗೆ ತನ್ನ ಬರ್ತಡೇ ಆಚರಣೆಯ ವೇಳೆ ಸಾವನ್ನಪ್ಪಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ಘಟನೆ ನಿಜವಾಗಿ ನಡೆದಿದ್ದಲ್ಲ, ಅದೊಂದು ಸ್ಕ್ರಿಪ್ಟೆಡ್ ವಿಡಿಯೋ ಆಗಿದೆ.