ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅಂತರಾಷ್ಟ್ರೀಯ ಪಾಪ್ ಗಾಯಕಿ ತಿರುಗೇಟು ನೀಡಿದ್ದಾರೆ ಎನ್ನುವ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಿಹಾನ್ನ ಅವರು ಟ್ವೀಟ್ ಮಾಡಿದ್ದಾರೆ ಎಂದು ಹೇಳುವ ಸ್ಕ್ರೀನ್ಶಾಟ್ಗಳನ್ನು ಹಲವರು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹದು. ಈಗ ಈ ಪೋಸ್ಟ್ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕಂಗನಾ ರಣಾವತ್ ಬಗ್ಗೆ ರಿಹಾನ್ನಾ ಟ್ವೀಟ್ ಮಾಡಿದ್ದಾರೆ.
ಸತ್ಯಾಂಶ: ಕಂಗನಾ ಮತ್ತು ಬಾಲಿವುಡ್ ಬಗ್ಗೆ ರಿಹಾನ್ನಾ ಟ್ವೀಟ್ ಮಾಡಿಲ್ಲ. ರಿಹಾನ್ನ ಅವರ ಟೈಮ್ಲೈನ್ನಲ್ಲಿ ಅಂತಹ ಯಾವುದೇ ಟ್ವೀಟ್ಗಳು ಪತ್ತೆಯಾಗಿಲ್ಲ. ಈ ಟ್ವೀಟ್ಗಳನ್ನು ಕೆಲವು ನಕಲಿ ಖಾತೆಗಳು ಮಾಡಿವೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.
ವಾಸ್ತವದಲ್ಲಿ ರಿಹಾನ್ನಾ, ಕಂಗನಾ ಮತ್ತು ಬಾಲಿವುಡ್ ಬಗ್ಗೆ ಟ್ವೀಟ್ ಮಾಡಿಲ್ಲ. ರಿಹಾನ್ನಾ ಅವರ ಅಧಿಕೃತ ಟ್ವಿಟ್ಟರ್ ಖಾತೆಯ ಟೈಮ್ಲೈನ್ನಲ್ಲಿ, ಅಂತಹ ಯಾವುದೇ ಟ್ವೀಟ್ಗಳು ಪತ್ತೆಯಾಗಿಲ್ಲ. ಅಲ್ಲದೆ, ಈ ಟ್ವೀಟ್ ಮಾಡಿರುವ ಖಾತೆಯಲ್ಲಿ ರಿಹಾನ್ನಾ ಅವರ ಟ್ವಿಟರ್ ಪ್ರೊಫೈಲ್ನಲ್ಲಿ ‘ಪರಿಶೀಲಿಸಿದ ಚಿಹ್ನೆ’ (ಬ್ಲೂಟಿಕ್) ಕಾಣಿಸುವುದಿಲ್ಲ. ನಾವು ಈ ಟ್ವೀಟ್ಗಳನ್ನು ರಿಹಾನ್ನಾ ಅವರ ಅಧಿಕೃತ ಖಾತೆಯ ಮೂಲ ಟ್ವೀಟ್ನೊಂದಿಗೆ ಹೋಲಿಸಿದಾಗ, ಸುಲಭವಾಗಿ ವ್ಯತ್ಯಾಸಗಳನ್ನು ಗುರುತಿಸಬಹುದು. ಹಾಗಾಗಿ ಈ ಟ್ವೀಟ್ಗಳನ್ನು ರಿಹಾನ್ನ ಮಾಡಿಲ್ಲ.

ಫ್ಯಾಕ್ಟ್ಲಿ ಸಂಸ್ಥೆಯು ಈ ಹಿಂದೆ ರಿಹಾನ್ನಾ ಅವರಿಗೆ ಸಂಬಂಧಿಸಿದ ಮತ್ತೊಂದು ಸುಳ್ಳು ಸುದ್ದಿಯನ್ನು ಬಹಿರಂಗಗೊಳಿಸಿತ್ತು. ಅದನ್ನು ಇಲ್ಲಿ ಓದಬಹುದು.
ರೈತರ ಪ್ರತಿಭಟನೆಯ ಬಗ್ಗೆ ರಿಹಾನ್ನಾ ಮಾಡಿದ ಟ್ವೀಟ್ ಹಿನ್ನೆಲೆಯಲ್ಲಿ, ಈ ರೀತಿಯ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಿಹಾನ್ನಾ ಕಂಗನಾ ರಣಾವತ್ ಬಗ್ಗೆ ಮತ್ತು ಬಾಲಿವುಡ್ ಬಗ್ಗೆ ಟ್ವೀಟ್ ಮಾಡಿಲ್ಲ.