ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ಉದ್ಯಮಿ ರತನ್ ಟಾಟಾ ಹೇಳಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದಾರೆ.
ನಿಜಾಂಶ: ಟಾಟಾ ಗ್ರೂಪ್‌ನ ಅಧ್ಯಕ್ಷರಾದ ಉದ್ಯಮಿ ರತನ್ ಟಾಟಾರವರು ಇತ್ತೀಚೆಗೆ ಯಾವುದೇ ಹೇಳಿಕೆಯನ್ನು ಯಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿಲ್ಲ. ಈ ಹಿಂದೆಯೂ ಸಹ ರತನ್ ಟಾಟಾರವರ ಹೆಸರಿನಲ್ಲಿ ಹಲವು ಫೇಕ್‌ನ್ಯೂಸ್‌ಗಳು ಹರಿದಾಡುತ್ತಿದ್ದವು. ಅವುಗಳೆಲ್ಲ ಸುಳ್ಳು ಎಂದು ಸ್ವತಃ ರತನ್ ಟಾಟಾರವರು ಸ್ಪಷ್ಟನೆ ನೀಡಿದ್ದರು. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಉದ್ಯಮಿ ರತನ್ ಟಾಟಾರವರು ಭಾರತದ ಕೋವಿಡ್ ಬಿಕ್ಕಟ್ಟಿನ ಕುರಿತು ಯಾವುದಾದರೂ ಹೇಳಿಕೆ ನೀಡಿದ್ದಾರೆಯೇ ಎಂದು ಹುಡುಕಿದಾಗ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ಯಾವುದೇ ಹೇಳಿಕೆಗಳು ದೊರೆತಿಲ್ಲ. ಒಂದು ವೇಳೆ ಅವರು ಯಾವುದೇ ಹೇಳಿಕೆ ನೀಡಿದರೆ ಮುಖ್ಯವಾಹಿನಿ ಮಾಧ್ಯಮಗಳು ಅದನ್ನು ಪ್ರಕಟಿಸಬೇಕಿತ್ತು. ಆದರೆ ಈ ಮೇಲಿನ ಪ್ರತಿಪಾದನೆಯ ಕುರಿತು ಒಂದೇ ಒಂದು ಮಾಧ್ಯಮವು ಸಹ ಯಾವುದೆ ಸುದ್ದಿ, ವರದಿ ಮಾಡಿಲ್ಲ.
ಟಾಟಾ ಟ್ರಸ್ಟ್ ವತಿಯಿಂದ ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ಭಾರತ ಸರ್ಕಾರಕ್ಕೆ 1500 ಕೋಟಿ ರೂಗಳ ದೇಣಿಗೆ ನೀಡುವುದಾಗಿ 2020ರ ಮಾರ್ಚ್‌ನಲ್ಲಿ ರತನ್ ಟಾಟಾ ಘೋಷಿಸಿದ್ದರು. ಇತ್ತೀಚೆಗೆ, ಟಾಟಾ ಗ್ರೂಪ್ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಸಹಾಯ ಮಾಡುವುದಾಗಿ ಘೋಷಿಸಿತ್ತು. ಆದರೆ, ರತನ್ ಟಾಟಾ ಅಥವಾ ದಿ ಟಾಟಾ ಗ್ರೂಪ್ ಮೇಲಿನ ಪೋಸ್ಟ್‌ನಲ್ಲಿನ ಹೇಳೀಕೆಯಲ್ಲಿ ಎಲ್ಲಿಯೂ ಹಂಚಿಕೊಂಡಿಲ್ಲ.
ಈ ಹಿಂದೆಯೇ ಇದೇ ರೀತಿಯ ಬೇರೆ ಬೇರೆ ಹೇಳಿಕೆಗಳನ್ನು ರತನ್ ಟಾಟಾರವರ ಹೆಸರಿನಲ್ಲಿ ಹರಿಯಬಿಡಲಾಗಿತ್ತು. ಅವುಗಳೆಲ್ಲ ಸುಳ್ಳು ಎಂದು ಸ್ವತಃ ರತನ್ ಟಾಟಾರವರು ಸ್ಪಷ್ಟನೆ ನೀಡಿದ್ದರು. ರತನ್ ಟಾಟಾರವರ ಕುರಿತಾದ ಸುಳ್ಳುಗಳನ್ನು ಫ್ಯಾಕ್ಟ್ಲಿ ಬಯಲುಗೊಳಿಸಿತ್ತು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಒಟ್ಟಿನಲ್ಲಿ ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಯಾವುದೇ ಹೇಳಿಕೆ ನೀಡಿಲ್ಲ.