Fake News - Kannada
 

AI ಪರಿಕರಗಳನ್ನು ಬಳಸಿಕೊಂಡು ರಚಿಸಲಾದ ಫೋಟೋಗಳನ್ನು ಅಯೋಧ್ಯೆ ರೈಲ್ವೆ ನಿಲ್ದಾಣದ ಫೋಟೋಗಳೆಂದು ಶೇರ್ ಮಾಡಲಾಗಿದೆ

0

ಅಯೋಧ್ಯೆ ರೈಲು ನಿಲ್ದಾಣದ ಫೋಟೋಗಳು ಎಂದು ಹೇಳಿಕೊಳ್ಳಲಾದ ಸುಂದರವಾದ ರೈಲು ನಿಲ್ದಾಣದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  ಈ ಲೇಖನದ ಮೂಲಕ ಈ ಹೇಳಿಕೆಯ ಹಿಂದಿನ ಸತ್ಯಗಳನ್ನು ತಿಳಿಯೋಣ.

ಕ್ಲೇಮ್: ಅಯೋಧ್ಯೆ ರೈಲು ನಿಲ್ದಾಣದ ಫೋಟೋಗಳು.

ಫ್ಯಾಕ್ಟ್ : ಇದು AI ರಚಿತವಾದ ಫೋಟೋಗಳು, ನಿಜವಾದ ಅಯೋಧ್ಯೆ ರೈಲು ನಿಲ್ದಾಣದ ಫೋಟೋಗಳಲ್ಲ. ಅಯೋಧ್ಯೆ ರೈಲು ನಿಲ್ದಾಣವನ್ನು ಪ್ರಸ್ತುತ ಮರುಅಭಿವೃದ್ಧಿ ಮಾಡಲಾಗುತ್ತಿದೆ ಮತ್ತು ಜನವರಿ 2024 ರಲ್ಲಿ ತೆರೆಯಲಾಗುವುದು ಎಂದು ವರದಿಯಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳಾಗಿದೆ.

ಮೊದಲನೆಯದಾಗಿ, 4 ನವೆಂಬರ್ 2023 ರಂದು ಅಯೋಧ್ಯೆಯಲ್ಲಿ ರೈಲು ನಿಲ್ದಾಣವನ್ನು ನಿಜವಾಗಿ ತೆರೆಯಲಾಗಿದೆಯೇ ಎಂದು ನಿರ್ಧರಿಸಲು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಇಂಟರ್ನೆಟ್‌ನಲ್ಲಿ ಹುಡುಕಿದೆವು, ಆದರೆ ಈ ಕ್ಲೇಮ್ ಅನ್ನು  ದೃಢೀಕರಿಸುವ ಯಾವುದೇ ಮಾಹಿತಿ/ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಆದಾಗ್ಯೂ, ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳ ಸುದ್ದಿ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ), ಅಯೋಧ್ಯೆ ರಾಮಮಂದಿರದ ಥೀಮ್‌ನೊಂದಿಗೆ ಮರುಅಭಿವೃದ್ಧಿಯಾಗುತ್ತಿರುವ ಅಯೋಧ್ಯೆ ರೈಲು ನಿಲ್ದಾಣವು ಜನವರಿ 2024 ರಲ್ಲಿ ತೆರೆಯುತ್ತದೆ ಎಂದು ತಿಳಿದಿದೆ.

ಹೆಚ್ಚಿನ ಹುಡುಕಾಟವು ರೈಲ್ವೇ ನಿಲ್ದಾಣದ ಪ್ರಗತಿಯನ್ನು ತೋರಿಸುವ ಕೆಲವು ಫೋಟೋಗಳೊಂದಿಗೆ ಜುಲೈ 2023 ರಲ್ಲಿ ರೈಲ್ವೆ ಸಚಿವಾಲಯವು ಬಿಡುಗಡೆ ಮಾಡಿದ ನವೀಕರಣಕ್ಕೆ ನಮ್ಮನ್ನು ಕರೆದೊಯ್ಯಿತು. ಈ ಫೋಟೋಗಳು ವೈರಲ್ ಫೋಟೋಗಳಂತಿಲ್ಲ.

ಮೂಲ ವೈರಲ್ ಫೋಟೋಗಳ ಕುರಿತು ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ರಿವರ್ಸ್ ಇಮೇಜ್ ಸರ್ಚ್ ಮಾಡಿದ ನಂತರ, ಮೋಹಿತ್ ಮತ್ತು ಅಮರ್ (ಇಲ್ಲಿ, ಇಲ್ಲಿ) ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ  AI ಬಳಸಿ ಅವುಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಮೋಹಿತ್, ಬಿಂಗ್ ಇಮೇಜ್ ಕ್ರಿಯೇಟರ್ ಬಳಸಿ ಈ ಫೋಟೋಗಳನ್ನು ತಯಾರಿಸಿರುವುದಾಗಿ ಹೇಳಿದ್ದಾರೆ.

ಕೆಲವು ವೈರಲ್ ಫೋಟೋಗಳನ್ನು ಅಮರ್ ಎಂಬ ವ್ಯಕ್ತಿಯಿಂದ ರಚಿಸಲಾಗಿದೆ; ಇವುಗಳನ್ನು ಮಧ್ಯಪ್ರದೇಶ ಅಮರ್ ಎಂಬ ವ್ಯಕ್ತಿಯ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ .

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ಫೋಟೋಗಳು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ ಮತ್ತು ಅಯೋಧ್ಯೆ ನಿಲ್ದಾಣದ ನಿಜವಾದ  ಫೋಟೋಗಳಲ್ಲ.

Share.

Comments are closed.

scroll