ಜಗನ್ನಾಥ ರಥಯಾತ್ರೆಯ ದೃಶ್ಯಾವಳಿಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದ ವಾಸ್ತವ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ : ಜಗನ್ನಾಥನ ರಥಯಾತ್ರೆಯ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ.
ನಿಜಾಂಶ : ಪೋಸ್ಟ್ ಮಾಡಿದ ವೀಡಿಯೊ ಜಗನ್ನಾಥನ ರಥಯಾತ್ರೆಗೆ ಸಂಬಂಧಿಸಿಲ್ಲ. ಇದು ಮಧುರೈ ಚಿತ್ತಿರೈ ಹಬ್ಬಕ್ಕೆ ಸಂಬಂಧಿಸಿದ ಹಳೆಯ ವಿಡಿಯೋ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅಂತಹ ಅನೇಕ ವೀಡಿಯೊಗಳು ಕಂಡುಬಂದಿವೆ. ಟ್ವಿಟ್ಟರ್ ಬಳಕೆದಾರರು ಏಪ್ರಿಲ್ 2022 ರಲ್ಲಿ ಇದೇ ರೀತಿಯ ವೀಡಿಯೊವನ್ನು ವಿವರಣೆಯೊಂದಿಗೆ ಪೋಸ್ಟ್ ಮಾಡಿದ್ದಾರೆ – “#ಚಿತ್ತಿರೈ ತಿರುವಿಜಾ ದಿ ವಾರ್ಷಿಕ ರಥ-ಉತ್ಸವ #ಮಧುರೈ #ಮೀನಾಕ್ಷಿಅಮ್ಮನ್ ದೇವಸ್ಥಾನ, #ತಮಿಳುನಾಡು #ಮಧುರೈಚಿತ್ತಿರೈಫೆಸ್ಟಿವಲ್2022”. ಆದರೂ, ಅದೇ ವೀಡಿಯೊವನ್ನು 2018 ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ .
ಅಲ್ಲದೆ, 2018 ರ ಮಧುರೈ ಚಿತ್ತಿರೈ ಉತ್ಸವಕ್ಕೆ ಸಂಬಂಧಿಸಿದ ಮತ್ತೊಂದು ವೀಡಿಯೊದಲ್ಲಿ, ಇದೇ ರೀತಿಯ ರಥವನ್ನು ಕಾಣಬಹುದು. ಮಧುರೈ ಚಿತ್ತಿರೈ ಉತ್ಸವದ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಪುರಿಯಲ್ಲಿ ಇತ್ತೀಚೆಗೆ ನಡೆದ ಜಗನ್ನಾಥ ರಥಯಾತ್ರೆಗೆ ಸಂಬಂಧಿಸಿದ ನೈಜ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಮಧುರೈ ಚಿತ್ತಿರೈ ಉತ್ಸವಕ್ಕೆ ಸಂಬಂಧಿಸಿದ ಹಳೆಯ ವೀಡಿಯೊವನ್ನು ಜಗನ್ನಾಥನ ರಥಯಾತ್ರೆಯ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.