Fake News - Kannada
 

2022ರ ಚುನಾವಣೆಯಲ್ಲಿ ಟಿಕೆಟ್ ಸಿಗದವರು ಬಿಜೆಪಿ ಬಾವುಟ ಸುಟ್ಟಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಮಣಿಪುರದ ಸದ್ಯದ ಪರಿಸ್ಥಿತಿಗೆ ತಳುಕು ಹಾಕುತ್ತಿದ್ದಾರೆ

0

ಮಣಿಪುರದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ, ಮಣಿಪುರದ ಜನರು ಬಿಜೆಪಿ ಧ್ವಜಗಳನ್ನು ಭಾರೀ ಪ್ರಮಾಣದಲ್ಲಿ ಸುಟ್ಟುಹಾಕಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜನರಲ್ಲಿನ ಈ ಆಕ್ರೋಶಗಳನ್ನು ನೋಡಿಯೇ ಮೋದಿ ಹೊರಬಂದರು ಎಂದು ಈ ವಿಡಿಯೋವನ್ನು ಕೂಡ ಶೇರ್ ಮಾಡುತ್ತಿದ್ದಾರೆ. ಆದರೆ ಈ ಲೇಖನದ ಮೂಲಕ ಆ ವೀಡಿಯೊದ ನಿಜಾಂಶವನ್ನು ತಿಳಿಯೋಣ.

ಕ್ಲೇಮ್: ಮಣಿಪುರದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಜನರು ಆಕ್ರೋಶದಿಂದ ಬಿಜೆಪಿ ಧ್ವಜಗಳನ್ನು ದೊಡ್ಡ ಪ್ರಮಾಣದಲ್ಲಿ ಸುಟ್ಟು ಹಾಕಿರುವ ವಿಡಿಯೋ.

ಫ್ಯಾಕ್ಟ್ : 2022 ರ ಜನವರಿಯಲ್ಲಿ ನಡೆದ ಮಣಿಪುರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದವರು ಪಕ್ಷದ ಧ್ವಜ ಮತ್ತು ಪ್ರತಿಕೃತಿಗಳನ್ನು ಸುಟ್ಟ ಘಟನೆಗೆ ಈ ವೀಡಿಯೊ ಸಂಬಂಧಿಸಿದೆ. ಮಣಿಪುರದ ಪ್ರಸ್ತುತ ಪರಿಸ್ಥಿತಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಬಿಜೆಪಿ ಧ್ವಜಗಳನ್ನು ಸುಡುವ ಈ ವೀಡಿಯೊ ಮಣಿಪುರಕ್ಕೆ ಸಂಬಂಧಿಸಿದೆ ಆದರೆ ಈ ಘಟನೆ ಇತ್ತೀಚಿನದಲ್ಲ. ಹಾಗಾಗಿ ಮಣಿಪುರದ ಪ್ರಸ್ತುತ ಪರಿಸ್ಥಿತಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಈ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ವೀಡಿಯೊ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಜನವರಿ 2022 ರಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡ ಟ್ವೀಟ್ ಅನ್ನು ಬಹಿರಂಗಪಡಿಸಿದೆ. ‘ಬಿಜೆಪಿ ಮಣಿಪುರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ನಂತರ ಬಿಜೆಪಿಯಲ್ಲಿ ಬಂಡಾಯ’ ಎಂದು ಕಾಂಗ್ರೆಸ್ ಸೇವಾದಳ ಈ ವಿಡಿಯೋವನ್ನು ಹಂಚಿಕೊಂಡಿದೆ.

ಈ ಟ್ವೀಟ್ ಅನ್ನು ಆಧರಿಸಿದ ಹುಡುಕಾಡಿದಾಗ ಜನವರಿ 2022 ರಲ್ಲಿ ಮಣಿಪುರ ಚುನಾವಣೆಯ ಹಿನ್ನೆಲೆಯಲ್ಲಿ ಅನೇಕ ರೀತಿಯ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ನಮಗೆ ಕಂಡುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರಿಲ್ಲದವರು ಬಿಜೆಪಿ ಧ್ವಜ, ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ಈ ಘಟನೆಗಳ ಸುದ್ದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ  ಕಾಣಬಹುದು.

ಪ್ರಸ್ತುತ  ಶೇರ್ ಆಗಿರುವ ವಿಡಿಯೋ ಈ ಘಟನೆಗೆ ಸಂಬಂಧಿಸಿದ್ದು. ಈ ವೀಡಿಯೋ ಎಲ್ಲಿಂದ ಬಂದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗದಿದ್ದರೂ, ಮಣಿಪುರದ ಪ್ರಸ್ತುತ ಪರಿಸ್ಥಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈ ವೀಡಿಯೊ ಅಂತರ್ಜಾಲದಲ್ಲಿ ಲಭ್ಯವಿರುವ ಸಮಯದಿಂದ ಸ್ಪಷ್ಟಪಡಿಸುತ್ತದೆ.

ಕೊನೆದಾಗಿ ಹೇಳುವುದಾದರೆ 2022ರ ಚುನಾವಣೆಯಲ್ಲಿ ಟಿಕೆಟ್ ಸಿಗದವರು ಬಿಜೆಪಿ ಬಾವುಟ ಸುಟ್ಟಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಮಣಿಪುರದ ಸದ್ಯದ ಪರಿಸ್ಥಿತಿಗೆ ತಳುಕು ಹಾಕುತ್ತಿದ್ದಾರೆ.

Share.

Comments are closed.

scroll