ಸೇನಾ ಸಿಬ್ಬಂದಿ ನೃತ್ಯಮಾಡುವ ವಿಡಿಯೋವನ್ನು, ಚೀನಾ ಸೈನ್ಯವು ಪೂರ್ವ ಲಡಾಕ್‌ನಲ್ಲಿ ಆಕ್ರಮಿಸಿಕೊಂಡಿದ್ದ ಭಾರತದ ಭೂ ಪ್ರದೇಶವನ್ನು ಮರುವಶಪಡಿಸಿಕೊಂಡ ನಂತರ ವಿಶೇಷ ಗಡಿನಾಡು ಪಡೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಪೂರ್ವ ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಭೂ ಪ್ರದೇಶವನ್ನು ಮರುವಶಪಡಿಸಿಕೊಂಡ ನಂತರ ವಿಶೇಷ ಗಡಿನಾಡು ಪಡೆ (ಸ್ಪೆಷಲ್ ಫ್ರಾಂಟಿಯರ್ ಫೋರ್ಸ್) ಸಿಬ್ಬಂದಿ ನೃತ್ಯ ಮಾಡುತ್ತಿರುವ ವಿಡಿಯೋ.
ನಿಜಾಂಶ: ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2020ರ ಆಗಸ್ಟ್ 29/30 ರ ರಾತ್ರಿ ಪೂರ್ವ ಲಡಾಕ್ ನಲ್ಲಿ ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಭಾರತದ ಭೂಪ್ರದೇಶದ ಒಳಗೆ ನುಗ್ಗುವುದನ್ನು ತಡೆದಿದೆ. ಆದರೆ, ಪೋಸ್ಟ್ ಮಾಡಿದ ವಿಡಿಯೋ 27 ಆಗಸ್ಟ್ 2020ಕ್ಕೂ ಮುಂಚಿನಿಂದ ಅಂತರ್ಜಾಲದಲ್ಲಿ ಇದೆ. ಆದ್ದರಿಂದ, ವಿಡಿಯೋ ಉಲ್ಲೇಖಿತ ಘಟನೆಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವಿಡಿಯೋದ ಸ್ಕ್ರೀನ್ ಶಾಟ್ ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ಯಾವುದೇ ನಿರ್ದಿಷ್ಟ ಫಲಿತಾಂಶಗಳು ಕಂಡುಬಂದಿಲ್ಲ. ಆದರೆ ಟಿಬೆಟಿಯನ್ ಧ್ವಜವನ್ನು ಹೋಲುವ ಧ್ವಜವನ್ನು ವಿಡಿಯೋದಲ್ಲಿ ಕಾಣಬಹುದು. ಆದ್ದರಿಂದ,ಕೀವರ್ಡ್ ಗಳೊಂದಿಗೆ ಹುಡುಕಿದಾಗ, ಅದೇ ವಿಡಿಯೋದ ವಿಸ್ತೃತ ಆವೃತ್ತಿ ಯೂಟ್ಯೂಬ್ ನಲ್ಲಿ ಕಂಡುಬಂದಿದೆ. ಈ ವಿಡಿಯೋವನ್ನು 27 ಆಗಸ್ಟ್ 2020 ರಂದು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಇನ್ನೂ ಅನೇಕರು ಅದೇ ವಿಡಿಯೋವನ್ನು 27 ಆಗಸ್ಟ್ 2020 ರಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ರಕ್ಷಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಪಡೆಗಳು ಪೀಪಲ್ ಲಿಬರೇಶನ್ ಆರ್ಮಿಯು ಪೂರ್ವ ಲಡಾಖ್ ನಲ್ಲಿ ಭಾರತದ ಗಡಿ ಒಳಗೆ ನುಗ್ಗುವುನ್ನು ಆಗಸ್ಟ್ 29/30, 2020ರ ರಾತ್ರಿ ತಡೆದಿವೆ. ಅಲ್ಲದೆ, ಈ ಘಟನೆ ಸಂಭವಿಸುವ ಮೊದಲೇ ಈ ವಿಡೀಯೋ ಅಂತರ್ಜಾಲದಲ್ಲಿ ಲಭ್ಯವಿತ್ತು.

ಅಲ್ಲದೆ, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ ಎ ಸಿ) ಉದ್ದಕ್ಕೂ ಕೆಲವು ಪ್ರಮುಖ ಶ್ರೇಣಿಗಳನ್ನು ವಿಶೇಷ ಗಡಿನಾಡು ಪಡೆ (ಎಸ್ ಎಫ್ ಎಫ್) ವಶಪಡಿಸಿಕೊಂಡಿದೆ ಎಂದು ಅನೇಕ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ವಿಶೇಷ ಗಡಿನಾಡು ಪಡೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2020ರ ಆಗಸ್ಟ್ 29/30 ರಂದು ಪೂರ್ವ ಲಡಾಕ್ ನಲ್ಲಿ ನಡೆದ ಘರ್ಷಣೆಗೂ ಸೇನಾಸಿಬ್ಬಂದಿ ನೃತ್ಯ ಮಾಡುವ ಈ ವಿಡಿಯೋಗೂ ಸಂಬಂಧವಿಲ್ಲ.