ಪ್ರಸ್ತುತ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದಲ್ಲಿ “ರಷ್ಯಾ ಉಕ್ರೇನ್ ಮೇಲೆ ವೈಮಾನಿಕ ದಾಳಿ ನಡೆಸಿದೆ” ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ರಷ್ಯಾ ಇತ್ತೀಚೆಗೆ ಘೋಷಿಸಿದ ಸಂದರ್ಭದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ರಷ್ಯಾ ಉಕ್ರೇನ್ ವಿರುದ್ಧ ವಾಯುದಾಳಿ ನಡೆಸುತ್ತಿರುವ ಇತ್ತೀಚಿನ ವೀಡಿಯೊ.
ನಿಜಾಂಶ: ವೈರಲ್ ವಿಡಿಯೊ ರಷ್ಯಾ ಉಕ್ರೇನ್ ಮೇಲೆ ಮಾಡಿದ ವೈಮಾನಿಕ ದಾಳಿಯ ವಿಡಿಯೊ ಅಲ್ಲ. ಇದು ರಷ್ಯಾದ ಹಳೆಯ ವೀಡಿಯೊ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುತ್ತಿದೆ.
ವೈರಲ್ ವಿಡಿಯೋದ ಫೋಟೊವನ್ನು ಯಾಂಡೆಕ್ಸ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಸರ್ಚ್ ಮಾಡಿದಾಗ ಅನೇಕ ರೀತಿಯ ವೀಡಿಯೊಗಳು ಕಂಡುಬಂದಿವೆ. ಯೂಟ್ಯೂಬ್ ಚಾನೆಲ್ ಮೇ 2020 ರಲ್ಲಿ ಅದೇ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಪೋಸ್ಟ್ ಮಾಡಿದೆ ಮತ್ತು ಇದು ತುಶಿನೋ (ಮಾಸ್ಕೋ ಬಳಿ) ಮೇಲೆ ಏರ್‌ಕ್ರಾಫ್ಟ್ ಪೆರೇಡ್ ರಿಹರ್ಸಲ್‌ನ ದೃಶ್ಯಗಳು ಎಂದು ಉಲ್ಲೇಖಿಸಿದೆ.
ಆದಾಗ್ಯೂ, ಹಲವಾರು ಮಾಧ್ಯಮ ಸಂಸ್ಥೆಗಳು ಇಂದು ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ಪಡೆಗಳಿಂದ ಅನೇಕ ದಾಳಿಗಳನ್ನು ವರದಿ ಮಾಡಿದೆ. ಉಕ್ರೇನ್‌ನ ಇತ್ತೀಚಿನ ಕೆಲವು ದೃಶ್ಯಗಳನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ರಷ್ಯಾ ಉಕ್ರೇನ್ ವಿರುದ್ಧ ವೈಮಾನಿಕ ದಾಳಿಯನ್ನು ಮಾಡುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.