Fake News - Kannada
 

ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

0

ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವ ಪ್ರತಿಭಟನಾಕಾರರ ವೀಡಿಯೊ ಇರುವ ಪೋಸ್ಟ್ ಅನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪ್ರತ್ಯೇಕ ಖಲಿಸ್ತಾನವನ್ನು ಕೋರಿ ಪ್ರತಿಭಟನಾಕಾರರು ಫಲಕಗಳನ್ನು ಹಿಡಿದ ಚಿತ್ರವಿರುವ ಮತ್ತೊಂದು ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ಅನ್ನು ರೈತರ ಪ್ರತಿಭಟನೆಯೊಂದಿಗೆ ಲಿಂಕ್ ಮಾಡಲಾಗುತ್ತಿದೆ. ಈ ಲೇಖನದ ಮೂಲಕ ಈ ಪೋಸ್ಟ್‌ಗಳಲ್ಲಿನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಖಲಿಸ್ತಾನ್ ಪರ ಪ್ರತಿಭಟನಾಕಾರರು ಪ್ರತ್ಯೇಕ ಖಲಿಸ್ತಾನಕ್ಕೆ ಒತ್ತಾಯಿಸಿ ಫಲಕಗಳನ್ನು ಹಿಡಿದಿದ್ದಾರೆ.

ನಿಜಾಂಶ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಪ್ರತಿಭಟನೆಯ ಈ ವೀಡಿಯೊವನ್ನು 2018 ರಿಂದ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಹೋರಾಟಗಾರರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುತ್ತಿರುವಂತೆ ತೋರಿಸಲಾಗುತ್ತಿದೆ. ಮತ್ತೊಂದು ಪೋಸ್ಟ್‌ನಲ್ಲಿರುವ ಚಿತ್ರವು, 2013 ರಲ್ಲಿ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ನ 29 ನೇ ವಾರ್ಷಿಕೋತ್ಸವದಲ್ಲಿ ಪ್ರತ್ಯೇಕ ಖಲಿಸ್ತಾನವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಫಲಕಗಳನ್ನು ಪ್ರದರ್ಶಿಸುತ್ತಿರುವ ಚಿತ್ರವಾಗಿದೆ. ಹಾಗಾಗಿ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಈ ವೀಡಿಯೊ ಮತ್ತು ಚಿತ್ರಗಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

“गली गली में शोर है भारत माता key keywords” ಎಂಬ ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹುಡುಕಾಟ ನಡೆಸಿದಾಗ ಇದೇ ವೀಡಿಯೊವನ್ನು 2018 ಹಂಚಿಕೊಂಡ ಕೆಲವು ಪೋಸ್ಟ್‌ಗಳು ಪತ್ತೆಯಾದವು. ಈ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದರ ಕುರಿತ ಹೆಚ್ಚಿನ ಹುಡುಕಾಟವು ನಮ್ಮನ್ನು ಫೇಸ್‌ಬುಕ್ ಪೋಸ್ಟ್‌ಗೆ ಕರೆದೊಯ್ಯಿತು. ಅಲ್ಲಿಯೂ ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ ಇದು ಉತ್ತಮ ಗುಣಮಟ್ಟ ಹೊಂದಿದೆ. ಈ ವೀಡಿಯೊದಲ್ಲಿ, ಪ್ರತಿಭಟನಾಕಾರರ ಟೀ ಶರ್ಟ್‌ಗಳ ಹಿಂಭಾಗದಲ್ಲಿ ‘ಸ್ಯಾನ್ ಫ್ರಾನ್ಸಿಸ್ಕೋ’ ಎಂದು ಬರೆದಿರುವುದನ್ನು ನಾವು ಕಾಣಬಹುದು. ಇದರಿಂದ ಒಂದು ಕ್ಯೂ ತೆಗೆದುಕೊಂಡು ‘Proper Hotel San Francisco’ಕೀವರ್ಡ್‌ ಮೂಲಕ ಗೂಗಲ್ ನಕ್ಷೆಯಲ್ಲಿ ಹುಡುಕಾಟ ನಡೆಸಿದಾಗ, ವೀಡಿಯೊದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋದ ನಿಖರವಾದ ಸ್ಥಳ ಪತ್ತೆಯಾಯಿತು. ಈ ವೀಡಿಯೊ ಕನಿಷ್ಠ ಎರಡು ವರ್ಷ ಹಳೆಯದಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಖಲಿಸ್ತಾನ್ ಪರ ಪ್ರತಿಭಟನಾ ಮೆರವಣಿಗೆಯ ವೀಡಿಯೋವಾಗಿದೆ. ಇದನ್ನು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯೊಂದಿಗೆ ತಪ್ಪಾಗಿ ಸಂಬಂಧೀಕರಿಸಲಾಗಿದೆ.

ಪೋಸ್ಟ್‌ನಲ್ಲಿನ ಫೋಟೋದ ರಿವರ್ಸ್‌ ಇಮೇಜ್ ಹುಡುಕಾಟವು ಅದೇ ಚಿತ್ರವನ್ನು ಹೊಂದಿರುವ ಸುದ್ದಿ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು. ಲೇಖನದಲ್ಲಿ ಪ್ರಕಟವಾದ ಚಿತ್ರವು ಎಎಫ್‌ಪಿಯದ್ದಾಗಿದೆ.

ಸುದ್ದಿ ಲೇಖನದಲ್ಲಿನ ಇಮೇಜ್ ಕ್ರೆಡಿಟ್‌ನಿಂದ ಒಂದು ಕ್ಯೂ ತೆಗೆದುಕೊಂಡು, ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್‌ನಲ್ಲಿ ನಡೆಸಿದ ಎಎಫ್‌ಪಿಯ ಚಿತ್ರಗಳ ಹುಡುಕಾಟದಿಂದ ಗೆಟ್ಟಿ ಇಮೇಜಸ್‌ನಲ್ಲಿ ಅದೇ ಚಿತ್ರ ಪತ್ತೆಯಾಯಿತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ನೀಡಿದ ವಿವರಣೆಯ ಪ್ರಕಾರ, “ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ನ 29 ನೇ ವಾರ್ಷಿಕೋತ್ಸವದಂದು ಈ ಚಿತ್ರವನ್ನು 2013 ರಲ್ಲಿ ಕ್ಲಿಕ್ ಮಾಡಲಾಗಿದೆ. ಹಾಗಾಗಿ ಈ ಚಿತ್ರವು ಹಳೆಯದಾಗಿದ್ದು, ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು.

ಕೃಷಿ ಮಸೂದೆಗಳ ಬಗ್ಗೆ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಈ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ಪ್ರತಿಪಾದನೆಗಳೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊಗಳು ಮತ್ತು ಚಿತ್ರಗಳನ್ನು ಪ್ರಸ್ತುತ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll