Fake News - Kannada
 

2004ರ ಅಮೆರಿಕಾ –ಇರಾಕ್ ಯುದ್ಧದ ವಿಡಿಯೋವನ್ನು ಇಸ್ರೇಲ್ ಸೈನ್ಯ ಅಲ್-ಅಕ್ಸಾ ಮಸೀದಿಯನ್ನು ವಶಪಡಿಸಿಕೊಂಡಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ

0

ಇಸ್ರೇಲ್ ಸೈನ್ಯ ಅಲ್-ಅಕ್ಸಾ ಮಸೀದಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಒಂದು  ಸಾಮಾಜಿಕ ಜಾಲತಾಣದಲ್ಲಿ ಷೇರ್ ಆಗುತ್ತಿದೆ. ಅಷ್ಟೇ ಅಲ್ಲದೇ, ಪ್ಯಾಲೇಸ್ತೇನ್ ಯುದ್ಧ ಮುಗಿಯುವ ಹೊತ್ತಿಗೆ ತಮ್ಮ ಸೈನ್ಯ ಎಲ್ಲಿಯವರೆಗೂ ತಲಪುತ್ತದೆಯೋ ಅಲ್ಲಿಯವರೆಗೂ ಹೊಸ ಗಡಿ ಇರುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆಂಬ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಲೇಖನದ ಮೂಲಕ ಈ ಪ್ರತಿಪಾದನೆಗಳನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಇಸ್ರೇಲ್ ಸೈನ್ಯ ಜೆರೂಸೆಲಂ ನಗರದಲ್ಲಿನ ಅಲ್ –ಅಕ್ಸಾ ಮಸೀದಿಯನ್ನು ವಶಪಡಿಸಿಕೊಂಡಿರುವ ದೃಶ್ಯಗಳು.

ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೋ ಅಮೆರಿಕಾ ಸೈನ್ಯವು 2004 ಇರಾಕ್ ದೇಶದಲ್ಲಿನ ಅಲ್‌- ಅಸಕರಿ ಮಸೀದಿ ಮೇಲೆ ಮಾಡಿದ ದಾಳಿಯ ದೃಶ್ಯಗಳನ್ನು ತೋರಿಸುತ್ತಿವೆ. 2004ರ ಇರಾಕ್ ಮೇಲಿನ ಯುದ್ದದ ಭಾಗವಾಗಿ ಅಮೆರಿಕ ಸೈನಿಕರು ಸಮರ್‌ನ ನಗರದಲ್ಲಿನ ಗೋಲ್ಡೆನ್ ಮಸೀದಿ (ಅಲ್- ಅಸಕರಿ ಮಸೀದಿಯನ್ನು ಗೋಲ್ಡೆನ್ ಮಸೀದಿ ಎಂದು ಸಹ ಕರೆಯುತ್ತಾರೆ) ಮೇಲೆ ದಾಳಿ ಮಾಡಿದ್ದರು. ಈ ವಿಡಿಯೋಗೂ ಅಲ್- ಅಕ್ಸ್ ಮಸೀದಿ ಮೇಲೆ ಇಸ್ರೇಲ್‌ ಇತ್ತೀಚಿಗೆ ನಡೆಸಿದ ದಾಳಿಗಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿನ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿ ನೋಡಿದಾಗ, ಇದೇ ದೃಶ್ಯಗಳಿರುವ ವಿಡಿಯೋವನ್ನು ಯೂಟ್ಯೂಬ್ ಬಳಕೆದಾರನೊಬ್ಬ 2014ರಲ್ಲಿ ಪೋಸ್ಟ್‌ ಮಾಡಿರುವುದಾಗಿ ತಿಳಿಯುತ್ತದೆ. ಅಮೆರಿಕ ಸ್ಪೆಷಲ್ ಪೋರ್ಸ್ ತಂಡಗಳು ಗೋಲ್ಡೆನ್ ಮಸೀದಿ ಮೇಲೆ ದಾಳಿ ಮಾಡುತ್ತಿರುವ ದೃಶ್ಯಗಳನ್ನು ಈ ವಿಡಿಯೋ ವಿವರದಲ್ಲಿ ತಿಳಿಸಿದ್ದಾರೆ. ಇದೇ ವಿಡಿಯೋವನ್ನು ಮತ್ತೊಬ್ಬ ಬಳಕೆದಾರ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಾ, ಇರಾಕ್ ದೇಶದಲ್ಲಿನ ಅಲ್-ಅಸಕರಿ ಮಸೀದಿ (ಅಲ್- ಅಸಕರಿ ಮಸೀದಿಯನ್ನು ಗೋಲ್ಡೆನ್ ಮಸೀದಿ ಎಂದು ಸಹ ಕರೆಯುತ್ತಾರೆ ) ಮೇಲೆ ಅಮೆರಿಕಾ ಸೈನ್ಯದ ದಳಗಳು ದಾಳಿ ಮಾಡುತ್ತಿರುವ ದೃಶ್ಯಗಳೆಂದು ಹೇಳಿದ್ದಾರೆ.

ಈ ವಿವರಗಳ ಆಧಾರದ ಮೇಲೆ ಈ ವಿಡಿಯೋಗೆ ಸಂಬಂಧಿಸಿದ ಸಂಪೂರ್ಣ ವಿವರಗಳ ಬಗ್ಗೆ  ಹುಡುಕಿದಾಗ, ಯುದ್ಧ ಸಮಯದಲ್ಲಿ ಚಿತ್ರಿಕರಣ ಮಾಡಿದ ವಿಡಿಯೋಗಳನ್ನು ಮತ್ತು ಮಿಲಿಟರಿ ಸಮಾಚಾರಗಳನ್ನು ಸುದ್ದಿ ಮಾಡುವ  ‘funker530 ವೆಬ್ಸೈಟ್ , ಇದೇ ದೃಶ್ಯಗಳಿರುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. 2004ರ ಇರಾಕ್ ಯುದ್ದದ ಭಾಗವಾಗಿ 36 ನೇ ಇರಾಕಿ ಕಮಾಂಡೋ ಬೆಟಾಲಿಯನ್‌ಗೆ ಸೇರಿದ ಅಮೆರಿಕಾ ಸೈನಿಕರು ಸಮರ್‌ನ ನಗರದಲ್ಲಿನ ಗೋಲ್ಡೆನ್ ಮಸೀದಿ ಮೇಲೆ ದಾಳಿ ಮಾಡಿದ ದೃಶ್ಯಗಳನ್ನು ಈ ವಿಡಿಯೋ ವಿವರದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಇದೆ ವಿವರದೊಂದಿಗೆ military-footage.com ಎಂಬ ವೆಬ್ಸೈಟ್‌ ಸಹ ಪ್ರಕಟಣೆ ಮಾಡಿದೆ.

ಅಮೆರಿಕ ಸೈನಿಕರು 2004ರ ಸಮರ್ರಾ ನಗರದಲ್ಲಿನ ಗೋಲ್ಡೆನ್ ಮಸೀದಿ ಮೇಲೆ ನಡೆಸಿದ ದಾಳಿ ಬಗ್ಗೆ The Guardianನ್ಯೂಸ್ ಸಂಸ್ಥೆ ವರದಿ ಮಾಡಿದ. ಆ ಸುದ್ದಿ ವರದಿಯನ್ನು ಇಲ್ಲಿ ನೋಡಬಹದು. ಈ ವಿವರಗಳ ಆಧಾರದಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಜೆರೂಸೆಲೆಂ ನಗರದಲ್ಲಿನ ಅಲ್‌- ಅಕ್ಸಾ ಮಸೀದಿಗೆ ಸಂಬಂಧಿಸಿದ್ದಲ್ಲವೆಂದು ಖಚಿತವಾಗಿ ಹೇಳಬಹುದು.

07 ಮೇ 2021ರಂದು ಜೆರೂಸೆಲಂ ನಗರದಲ್ಲಿನ ಅಲ್‌-ಅಕ್ಸಾ ಮಸೀದಿ ಪ್ರಾಂಗಣದಲ್ಲಿ ಇಸ್ರೇಲ್ ಪೋಲೀಸರು ಮತ್ತು ಪ್ಯಾಲೇಸ್ತೇನ್ ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆಗಳು ನಡೆದಿವೆ. ಈ ಘರ್ಷಣೆಯಲ್ಲಿ 300 ಕ್ಕೂ ಹೆಚ್ಚು ಪ್ಯಾಲೇಸ್ತೇನಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಆದರೆ, ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೋಗೂ, ಅಲ್‌- ಅಕ್ಸಾ ಮಸೀದಿ ಪ್ರಾಂಗಣದಲ್ಲಿ ಇತ್ತಿಚಿಗೆ ನಡೆದ ಘರ್ಷಣೆಗಳಿಗೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆಯಾಗಿ 2004ರ ಅಮೆರಿಕಾ ಇರಾಕ್ ಯುದ್ಧದ ವಿಡಿಯೋವನ್ನು ಇಸ್ರೇಲ್ ಸೈನ್ಯ ಅಲ್-ಅಕ್ಸಾ ಮಸೀದಿಯನ್ನು ವಶಪಡಿಸಿಕೊಂಡಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.

Share.

About Author

Comments are closed.

scroll