Fake News - Kannada
 

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಿಕರಿಗೆ ಯಾವುದೇ ದೇಣಿಗೆ ನೀಡಿಲ್ಲ

0

ಶಿರಡಿ ಸಾಯಿಬಾಬಾ ಟ್ರಸ್ಟ್ ಹಜ್ ಯಾತ್ರಿಕರಿಗೆ ₹35 ಕೋಟಿ ದೇಣಿಗೆ ನೀಡಿದೆ ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಹೋಳ್ಳಲಾಗುತ್ತಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಿಕರಿಗೆ ₹35 ಕೋಟಿ ದೇಣಿಗೆ ನೀಡಿದೆ, ಆದರೆ ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ದೇಣಿಗೆ ನೀಡಿಲ್ಲ.

ಫ್ಯಾಕ್ಟ್: ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಅದರ ಮಾಜಿ ಸಿಇಒ ರಾಹುಲ್ ಜಾಧವ್ ಸ್ಪಷ್ಟಪಡಿಸಿದಂತೆ, ಹಜ್ ಯಾತ್ರಿಕರಿಗೆ ಯಾವುದೇ ದೇಣಿಗೆ ನೀಡಿಲ್ಲ. ಹೆಚ್ಚುವರಿಯಾಗಿ, ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕಾಗಿ ಯಾರೂ ದೇಣಿಗೆಗಾಗಿ ತಮ್ಮನ್ನು ಸಂಪರ್ಕಿಸಿಲ್ಲ. ಆದ್ದರಿಂದ ಟ್ರಸ್ಟ್ ಅದರ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಜಾಧವ್ ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪು.

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಿಕರಿಗೆ ದೇಣಿಗೆ ನೀಡುತ್ತಿರುವ ಬಗ್ಗೆ ಇಂಟರ್ನೆಟ್ ಹುಡುಕಾಟ ನಡೆಸಿದಾಗ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡು ಬಂದಿಲ್ಲ. ಅಂತಹ ದೇಣಿಗೆ ನಿಜಕ್ಕೂ ನಡೆದಿದ್ದರೆ, ಅದು ಪ್ರಮುಖ ಪತ್ರಿಕೆಗಳಿಳ್ಳಿ ವರದಿಯಾಗುತ್ತಿತ್ತು. ಹೆಚ್ಚುವರಿಯಾಗಿ, ಶಿರಡಿ ಟ್ರಸ್ಟ್‌ನ ಅಫೀಷಿಯಲ್ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳು ಮತ್ತು ವೆಬ್‌ಸೈಟ್ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಏಪ್ರಿಲ್ 2023 ರಲ್ಲಿ, ಈ ವದಂತಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಟ್ರಸ್ಟ್‌ನ ಆಗಿನ ಸಿಇಒ ರಾಹುಲ್ ಜಾದವ್ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಹಜ್ ಯಾತ್ರಿಕರಿಗೆ ಯಾವುದೇ ದೇಣಿಗೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಗಾಗಿ ಟ್ರಸ್ಟ್‌ಗೆ ಯಾವುದೇ ವಿನಂತಿಗಳನ್ನು ಮಾಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದರ ಸಲುವಾಗಿ, ಸಂಸ್ಥಾನ ನಿಯಮಗಳಿಗೆ ಅನುಸಾರವಾಗಿ ಅಂತಹ ನಿಧಿಗಳಿಗೆ ಯಾವುದೇ ನಿಬಂಧನೆಗಳು ಇಲ್ಲದ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಹೆಚ್ಚುವರಿಯಾಗಿ, ಶಿರಡಿ ದೇವಾಲಯದ ಪ್ರತಿಷ್ಠೆಯನ್ನು ಹಾಳುಮಾಡುವ ಸುಳ್ಳು ಮಾಹಿತಿಯನ್ನು ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಒತ್ತಿ ಹೇಳಿದರು.

ಗೂಗಲ್ ಹುಡುಕಾಟ ಫಲಿತಾಂಶಗಳ ವೈರಲ್ ಸ್ಕ್ರೀನ್‌ಶಾಟ್ ಅನ್ನು ಸರಿಯಾಗಿ  ಪರಿಶೀಲಿಸಿದಾಗ, ಈ ಮಾಹಿತಿಯನ್ನು ಕವಿತಾ ತಿವಾರಿ ಎಂಬ ಟ್ವಿಟರ್ ಬಳಕೆದಾರರು ಏಪ್ರಿಲ್ 20, 2023 ರಂದು ಮಾಡಿದ ಟ್ವೀಟ್‌ನಿಂದ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಮಾಹಿತಿ ತಪ್ಪಾಗಿದೆ ಎಂದು ಕಂಡುಬಂದ ಕಾರಣ ಅವರು ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ ಎಂದು ನಂತರ ಗಮನಿಸಲಾಯಿತು. ಇದಲ್ಲದೆ, ವೈರಲ್ ಫೋಟೋದಲ್ಲಿ ಚಿತ್ರಿಸಲಾದ ‘ಇತ್ತೀಚಿನ’ ವೆಬ್‌ಸೈಟ್‌ನ ಪೂರ್ಣ ಲೇಖನವು ಈ ಮಾಹಿತಿಯನ್ನು ಸುಳ್ಳು ಎಂದು ತಿಳಿಸಿದೆ. 

2020 ರಲ್ಲಿ, COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ಶಿರಡಿ ಟ್ರಸ್ಟ್ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹51 ಕೋಟಿ ದೇಣಿಗೆ ನೀಡಿತ್ತು. ಹೆಚ್ಚುವರಿಯಾಗಿ, ಶಿರಡಿ ದೇವಾಲಯ ಟ್ರಸ್ಟ್ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ನಿರಂತರವಾಗಿ ಕೊಡುಗೆ ನೀಡಿದೆ. ಡಿಸೆಂಬರ್ 2021 ರಲ್ಲಿ ಮಸೀದಿಗಳಿಗೆ ₹96 ಕೋಟಿ ದೇಣಿಗೆ ನೀಡಿದ ಸಾಯಿ ಟ್ರಸ್ಟ್‌ನ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ಫ್ಯಾಕ್ಟ್ಲಿ ಈಗಾಗಲೇ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಿಕರಿಗೆ ಹಣವನ್ನು ದೇಣಿಗೆ ನೀಡುವಲ್ಲಿ ಟ್ರಸ್ಟ್ ಭಾಗಿಯಾಗಿದೆ ಎಂದು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಲ್ಲಿ ತಪ್ಪು ಮಾಹಿತಿಯನ್ನು ಹಂಚಿಕೊಂಡ ವ್ಯಕ್ತಿಗಳ ವಿರುದ್ಧ 20 ಜೂನ್ 2023 ರಂದು ಶಿರಡಿ ಪೊಲೀಸರಿಗೆ ದೂರು ನೀಡಲಾಗಿದೆ. ಶಿರಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರ ಎಫ್‌ಐಆರ್ ಪ್ರತಿಯನ್ನು ಇಲ್ಲಿ ಪ್ರವೇಶಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹಜ್ ಯಾತ್ರಿಕರಿಗೆ ಯಾವುದೇ ದೇಣಿಗೆ ನೀಡಿಲ್ಲ, ಈ ಹೇಳಿಕೆ ತಪ್ಪಾಗಿದೆ. 

Share.

Comments are closed.

scroll