Fake News - Kannada
 

ನಾನು ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ ಎಂದು ನೆಹರೂ ಹೇಳಿಲ್ಲ

0

‘ಶಿಕ್ಷಣದಿಂದ ನಾನು ಇಂಗ್ಲಿಷ್ ವ್ಯಕ್ತಿ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ’ ಎಂದು ಜವಾಹರಲಾಲ್‌ ನೆಹರು ಹೇಳಿದ್ದಾರೆ ಎಂದಿರುವ ದಿನಪತ್ರಿಕೆಯ ಚಿತ್ರ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆ ಪೋಸ್ಟ್‌ ನ ಸತ್ಯಾಸತ್ಯತ್ಯೆ ಏನೆಂದು ಪರಿಶೀಲಿಸೋಣ.

ಪೋಸ್ಟ್ನನಲ್ಲಿ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಮಂಡನೆ: ಶಿಕ್ಷಣದಿಂದ ನಾನು ಇಂಗ್ಲಿಷ್ ವ್ಯಕ್ತಿ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ ಎಂದು ಜವಾಹರಲಾಲ್ ನೆಹರು ಹೇಳಿದ್ದಾರೆ.

ನಿಜಾಂಶ: ಈ ಹೇಳಿಕೆ ನೆಹರೂ ಅವರದ್ದಲ್ಲ. ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಈ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಹಿಂದೂ ಮಹಾಸಭಾ ನಾಯಕರಾದ ಎನ್.ಬಿ.ಖರೆ ಅವರು ಮೊದಲು ಇದನ್ನು ಹರಿಬಿಟ್ಟಿದ್ದರು. ಆದರೆ ನೆಹರೂ ಅವರ ಆತ್ಮಚರಿತ್ರೆಯಲ್ಲಿ ಅಂತಹ ಯಾವುದೇ ಹೇಳಿಕೆ ಕಂಡುಬಂದಿಲ್ಲ. ‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆ ಕೂಡ ನೆಹರು ಅವರ ಹೆಸರಿನಲ್ಲಿ ಹಾಕಿರುವ ಉಲ್ಲೇಖ ತಪ್ಪಾಗಿದೆ ಎಂದು ತಿದ್ದುಪಡಿಯನ್ನೂ ಪ್ರಕಟಿಸಿದೆ. ಇದು ಖರೆ ಮಾಡಿದ ಆರೋಪ ಎಂದು ಕೂಡ ಅವರು ಉಲ್ಲೇಖಿಸಿದ್ದಾರೆ. ಆದ್ದರಿಂದ, ಪೋಸ್ಟ್‌ ನಲ್ಲಿ ನೆಹರು ಅವರ ಹೆಸರಿನಲ್ಲಿ ಹಾಕಿರುವ ಉಲ್ಲೇಖ ಸುಳ್ಳು.

ಕೀವರ್ಡ್ ಗಳ ಮೂಲಕ ಹುಡುಕಿದಾಗ, ಕಾಂಗ್ರೆಸ್ ಮುಖಂಡ ಗೌರವ್ ಪಾಂಡಿ ಅವರು 24 ನವೆಂಬರ್ 2018 ರಂದು ‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆಯ ಅದೇ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅವರು ತಮ್ಮ ಟ್ವೀಟ್ ನಲ್ಲಿ ‘ಡೆಕ್ಕನ್ ಕ್ರಾನಿಕಲ್’ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದರು. ನೆಹರು ಅವರ ಹೆಸರಿನೊಂದಿಗೆ ತಪ್ಪು ಉಲ್ಲೇಖ ಪ್ರಕಟಿಸಿದ್ದಕ್ಕಾಗಿ ಮಾರನೆಯ ದಿನ ತಿದ್ದುಪಡಿಯನ್ನು ಪತ್ರಿಕೆ ಪ್ರಕಟಿಸಿತ್ತು. 25 ನವೆಂಬರ್ 2018 ರಂದು ‘ಡೆಕ್ಕನ್ ಕ್ರಾನಿಕಲ್’ ಪ್ರಕಟಿಸಿದ ‘ತಿದ್ದುಪಡಿ’ಯ ಫೋಟೋಗಳನ್ನು ಅವರು ಟ್ವೀಟ್ ಮಾಡಿದ್ದಾರೆ. ತಿದ್ದುಪಡಿಯಲ್ಲಿ ‘ಡೆಕ್ಕನ್ ಕ್ರಾನಿಕಲ್’ ಹೀಗೆ ಬರೆದಿದೆ – ‘ಈ ಉಲ್ಲೇಖವನ್ನು ನವೆಂಬರ್ 19 ರಂದು ಪ್ರಕಟವಾದ ‘360’ ಪೇಜ್ ಸಂಚಿಕೆಯಲ್ಲಿ ಜವಾಹರಲಾಲ್ ನೆಹರೂ ಅವರ ಹೆಸರಿಗೆ ತಪ್ಪಾಗಿ ಆರೋಪಿಸಲಾಗಿದೆ. ಇದು ಹಿಂದೂ ಮಹಾಸಭಾ ನಾಯಕ ಎನ್.ಬಿ.ಖರೆ ಅವರು 1959 ರಲ್ಲಿ ಮಾಡಿದ್ದ ದೂಷಣೆ. ಇದಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ’

1959 ರಲ್ಲಿ ಹಿಂದೂ ಮಹಾಸಭಾ ನಾಯಕ ಎನ್‌.ಬಿ. ಖರೆ ಅವರ ಲೇಖನದಲ್ಲಿ (ದಿ ಆಂಗ್ರಿ ಅರಿಸ್ಟೋಕ್ರಾಟ್ – ಇದು ‘ಎ ಸ್ಟಡಿ ಆಫ್ ನೆಹರು’ ಸಂಗ್ರಹದ ಭಾಗ) ಈ ಉಲ್ಲೇಖ ಮೊದಲು ಪ್ರಕಟವಾಗಿದೆ ಎಂದು ಫ್ಯಾಕ್ಟ್ಲಿ ಕಂಡುಹಿಡಿದಿದೆ. ನೆಹರೂ ತಮ್ಮ ಆತ್ಮಚರಿತ್ರೆಯಲ್ಲಿ ತಮ್ಮ ಬಗ್ಗೆ ವಿವರಿಸಿಕೊಳ್ಳುತ್ತಾ ಈ ವಾಕ್ಯಗಳನ್ನು ಬರೆದುಕೊಂಡಿದ್ದಾರೆ ಎಂದು ಈ ಲೇಖನದಲ್ಲಿ ಅವರು ಹೇಳಿದ್ದಾರೆ. ಆದರೆ, ನೆಹರೂ ಅವರ ‘ಎನ್ ಆಟೋಬಯಾಗ್ರಫಿ’ ಯಲ್ಲಿ ಈ ಬಗ್ಗೆ ಹುಡುಕಿದಾಗ, ಅದರಲ್ಲಿ ಎನ್‌.ಬಿ.ಖರೆಯವರು ಆರೋಪಿಸಿರುವ ಯಾವುದೇ ಹೇಳಿಕೆ ಕಂಡುಬಂದಿಲ್ಲ.  ಆದ್ದರಿಂದ, ಇದು ನೆಹರೂ ಅವರ ಹೇಳಿಕೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.

ಅಲ್ಲದೆ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ತಮ್ಮ ‘ನೆಹರು: ದಿ ಇನ್ವೆನ್ಷನ್ ಆಫ್ ಇಂಡಿಯಾ’ ಪುಸ್ತಕ ದಲ್ಲಿ ಈ ಹೇಳಿಕೆಯನ್ನು ಉಲ್ಲೇಖಿಸಿ, ನೆಹರೂ ಅವರನ್ನು ಅವಮಾನಿಸಲು ಎನ್.ಬಿ.ಖರೆ ಅವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ, ಆದರೂ ಅದು ನಿಜವಾದ ಗೌರವ ಎಂದಿದ್ದಾರೆ.

ಒಟ್ಟಾರೆಯಾಗಿ, ನೆಹರೂ ಅವರ ಹೆಸರಿಗೆ ಆರೋಪಿಸಲಾಗುತ್ತಿರುವ (ಶಿಕ್ಷಣದಿಂದ ನಾನು ಇಂಗ್ಲಿಷ್ ವ್ಯಕ್ತಿ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ’), ಹೇಳಿಕೆಯು ವಾಸ್ತವವಾಗಿ ಎನ್.ಬಿ.ಖರೆ ಅವರ 1959ರ ‘ದಿ ಆಂಗ್ರಿ ಅರಿಸ್ಟೋಕ್ರಾಟ್’ ಲೇಖನದಲ್ಲಿ ನೆಹರೂ ಅವರ ಮೇಲೆ ಮಾಡಿರುವ ಆರೋಪವಷ್ಟೇ.

Share.

Comments are closed.

scroll