ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ಬೆಂಬಲಿತ ಮಾಧ್ಯಮಗಳನ್ನು ಟೀಕಿಸಿ, ರೈತಪರ ನಿಲುವು ತೆಗೆದುಕೊಂಡಿದ್ದಾರೆ ಎಂಬ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಫೋಟೊದಲ್ಲಿ ದೀಪಿಕಾ ಪಡುಕೋಣೆ ‘ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ (I Stand With Farmers)’ ಎಂಬ ಬರಹವುಳ್ಳ ಟೀ ಶರ್ಟ್ ಧರಿಸಿರುವುದನ್ನು ಕಾಣಬಹುದು. ಇದು ನಿಜವೆ ಪರಿಶೀಲಿಸೋಣ.
ಪ್ರತಿಪಾದನೆ: ದೀಪಿಕಾ ಪಡುಕೋಣೆ ಧರಿಸಿದ್ದ ಟೀಶರ್ಟ್ ಮೇಲೆ ‘ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರೆದಿತ್ತು.
ನಿಜಾಂಶ: ದೀಪಿಕಾ ಪಡುಕೋಣೆ ಧರಿಸಿದ್ದ ಟೀಶರ್ಟ್ ಮೇಲೆ ‘ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರದಿರುವ ಫೋಟೊ ಫೋಟೊಶಾಪ್ ಮಾಡಿರುವುದಾಗಿದೆ. ಮೂಲ ಚಿತ್ರದಲ್ಲಿ ದೀಪಿಕಾ ಪಡಕೋಣೆ ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದಾರೆ, ಅದರ ಮೇಲೆ ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರೆದಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಆ ಚಿತ್ರವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, 20 ಮಾರ್ಚ್ 2018 ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ವೆಬ್‌ಸೈಟ್ ಪ್ರಕಟಿಸಿರುವ ಲೇಖನದಲ್ಲಿ ಅದರ ಮೂಲ ಚಿತ್ರವನ್ನು ಕಾಣಬಹುದು. ಅದರಲ್ಲಿ ದೀಪಿಕಾ ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದಾರೆ. ಅದರ ಮೇಲೆ ಏನೂ ಬರೆದಿಲ್ಲ. ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದಿಂದ ಹೊರಬರುವಾಗಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.
ಅದೇ ಫೋಟೊವನ್ನು ‘ಇದಿವ’ ವೆಬ್‌ಸೈಟ್ 17 ಮಾರ್ಚ್ 2018 ರಂದು ತನ್ನ ಲೇಖನದಲ್ಲಿ ಪ್ರಕಟಿಸಿದೆ. ಈ ಫೋಟೊ ಹಳೆಯದಾಗಿದ್ದು, ಇದಕ್ಕೂ ಸದ್ಯ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ.
ಒಟ್ಟಿನಲ್ಲಿ ರೈತಪರ ಘೋಷಣೆ ಹೊಂದಿದ್ದ ಟೀ ಶರ್ಟ್ ಅನ್ನು ದೀಪಿಕಾ ಪಡುಕೋಣೆ ಧರಿಸಿದ್ದರು ಎಂದು ಹಂಚಿಕೊಂಡಿರುವುದು ಫೋಟೊಶಾಪ್ ಮಾಡಿದ ಪೋಟೊವಾಗಿದೆ.