ಹತ್ರಾಸ್ ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಹೇಳಿಕೆ ನೀಡಿದ್ದಾರೆ ಎಂದು ‘ಆಜ್ ತಕ್’ ನ್ಯೂಸ್ ಚಾನೆಲ್ನ ವಿಡಿಯೋ ಫೂಟೇಜ್ ಒಂದರ ಸ್ಕ್ರೀನ್ಶಾಟ್ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಯೋಗಿ ಆದಿತ್ಯನಾಥ್ ಅವರು ‘ठाकुरों का खून गर्म होता है। ठाकुरों से गलतियां हो जाती है।’ (“ಠಾಕೂರರ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ”) ಎಂದು ಹೇಳಿದ್ದಾರೆ ಎನ್ನಲಾಗಿದೆ. ಪೋಸ್ಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಅತ್ಯಾಚಾರ ಆರೋಪಿಗಳು ಮತ್ತು ಠಾಕೂರ್ ಸಮುದಾಯವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ನಿಜಾಂಶ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್, ‘02 ಅಕ್ಟೋಬರ್ 2020’ರಂದು‘ಆಜ್ ತಕ್’ಸುದ್ದಿ ಚಾನೆಲ್ನಲ್ಲಿ ಪ್ರಸಾರವಾದ ಮೂಲ ತುಣುಕಿನ ಎಡಿಟ್ ಮಾಡಲಾದ ಆವೃತ್ತಿಯಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಅತ್ಯಾಚಾರ ಆರೋಪಿಗಳನ್ನು ಅಥವಾ ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯಾವುದೇ ಹೇಳಿಕೆ ನೀಡಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.
ಈ ಆರೋಪಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ‘ಆಜ್ ತಕ್’ ಸುದ್ದಿ ಚಾನೆಲ್ ಕ್ಲಿಪ್ನ ಮೂಲ ವಿಡಿಯೋವನ್ನು ಟ್ವಿಟರ್ನಲ್ಲಿ ‘ಆಜ್ ತಕ್’ ಸುದ್ದಿ ಚಾನೆಲ್ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಮೂಲ ವಿಡಿಯೋ ತುಣುಕಿನಲ್ಲಿ, ಹತ್ರಾಸ್ ಅತ್ಯಾಚಾರ ಆರೋಪಿ ಮತ್ತು ಠಾಕೂರ್ ಸಮುದಾಯದವರನ್ನು ಬೆಂಬಲಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಯಾವುದೇ ಹೇಳಿಕೆ ಪ್ರಸಾರವಾಗಲಿಲ್ಲ. ಈ ವಿಡಿಯೋ ಕ್ಲಿಪ್ನ 0.56 ಸೆಕೆಂಡ್ನಲ್ಲಿರುವ ಖಾಲಿ ಕ್ಲಿಪ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಖಾಲಿ ಜಾಗದಲ್ಲಿ “ಠಾಕೂರರ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ”: ಯೋಗಿ ಎಂದು ಬರೆಯಲಾಗಿದೆ. (ಮೂಲ ಕ್ಲಿಪ್ ಅನ್ನು ನೋಡಬಹುದು). ಅಲ್ಲದೆ, ಪೋಸ್ಟ್ನಲ್ಲಿನ ಪಠ್ಯ ಮತ್ತು ಸ್ಕ್ರೀನ್ಶಾಟ್ನ ಹಿನ್ನೆಲೆ ‘ಆಜ್ ತಕ್’ ಸುದ್ದಿ ಚಾನೆಲ್ ಪ್ರಸಾರದ ಪಠ್ಯಕ್ಕಿಂತ ಭಿನ್ನವಾಗಿದೆ.

‘ಆಜ್ ತಕ್’ ಫ್ಯಾಕ್ಟ್-ಚೆಕಿಂಗ್ ಗ್ರೂಪ್ ಪ್ರಕಟಿಸಿದ ಫ್ಯಾಕ್ಟ್-ಚೆಕ್ ಲೇಖನದಲ್ಲಿ, ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯ ಸ್ಕ್ರೀನ್ಶಾಟ್ ಪೋಸ್ಟ್, ‘ಆಜ್ ತಕ್’ ಸುದ್ದಿ ವಾಹಿನಿಯಲ್ಲಿ ’02 ಅಕ್ಟೋಬರ್ 2020 ರಂದು’ ಪ್ರಸಾರವಾದ ಮೂಲ ತುಣುಕಿನ ಫೋಟೊಶಾಪ್ ಮಾಡಿದ ಆವೃತ್ತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಆಜ್ ತಕ್’ ಸುದ್ದಿ ಚಾನೆಲ್ ಸ್ಕ್ರೀನ್ಶಾಟ್ ಅನ್ನು ಬಳಸಿಕೊಂಡು ಎಡಿಟ್ ಮಾಡಿ, ಠಾಕೂರ್ ಸಮುದಾಯವನ್ನು ಬೆಂಬಲಿಸುವ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಎಂದು ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ.