ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಅವರು ‘ಲಾಕ್‌ಡೌನ್’ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತೋರಿಸುವುದರೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿಯವರ ವಾಹನವನ್ನು ಪೊಲೀಸರು ತಡೆದಿದ್ದಾರೆ ಮತ್ತು ನಿಷೇಧಿತ ಆದೇಶಗಳು ಮತ್ತು ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಅವರನ್ನು ಹಿಂತಿರುಗಲು ತಿಳಿಸಲಾಗಿದೆ ಎಂದು ತೋರಿಸಲಾಗಿದೆ. ವೀಡಿಯೊವು ಮೂರು ತಿಂಗಳ ಹಳೆಯದು ಎಂದು ಫ್ಯಾಕ್ಟ್‌ಲಿಯ ಕಂಡುಹಿಡಿದಿದೆ. 2019 ರ ಡಿಸೆಂಬರ್‌ನಲ್ಲಿ ಮೀರತ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳನ್ನು ಭೇಟಿಯಾಗಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಯತ್ನಿಸಿದಾಗ, ಉತ್ತರ ಪ್ರದೇಶ ಪೊಲೀಸರು ಅವರನ್ನು ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಿದ್ದಾರೆ.
ಮೂಲಗಳು:
ಪ್ರತಿಪಾದನೆ: Facebook post (archived)
ಸತ್ಯ:
1. YouTube video – https://www.youtube.com/watch?v=6vYxToAaVlY
2. News article- https://indianexpress.com/article/india/rahul-priyanka-stopped-from-entering-meerut-caa-violence-6183564/