Coronavirus Kannada, Fake News - Kannada
 

ಈ ವೀಡಿಯೊ ವುಹಾನ್ (ಚೀನಾ) ನಲ್ಲಿ ಅಲ್ಲ, ಲ್ಯಾಂಗೋವಾನ್ (ಇಂಡೋನೇಷ್ಯಾ) ನ ಮಾರುಕಟ್ಟೆಯನ್ನು ತೋರಿಸುತ್ತದೆ.

0

ಕೊರೊನಾವೈರಸ್ನ ಹಠಾತನೆ ಶುರುವಾದ ಕಥೆಯ ಶಂಕಿತ ಮೂಲವಾದ ವುಹಾನ್ (ಚೀನಾ) ನ ಮಾರುಕಟ್ಟೆಯನ್ನು ತೋರಿಸುತ್ತದೆ ಎಂಬ ಪ್ರತಿಪಾಧಾನೆಯೊದಿಗೆ ಪ್ರಾಣಿ ಮಾರುಕಟ್ಟೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ನಲ್ಲಿ ಮಾಡಿದ ಪ್ರತಿಪಾಧಾನೆಯನ್ನು ವಿಶ್ಲೇಷಿಸಲು ಪ್ರಯತ್ನಿಸೋಣ.

ಪೋಸ್ಟ್ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆಯಲ್ಲಿ: ವುಹಾನ್ (ಚೀನಾ) ನ ಪ್ರಾಣಿ ಮಾರುಕಟ್ಟೆಯ ವಿಡಿಯೋ.

ಸತ್ಯ: ಈ ವೀಡಿಯೊವನ್ನು ಲ್ಯಾಂಗೋವನ್ನ (ಇಂಡೋನೇಷ್ಯಾ) ಪ್ರಾಣಿ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.

ಈ ವೀಡಿಯೊದ ಆರಂಭದಲ್ಲಿ, ‘ಪಸರ್ ಎಕ್ಸ್‌ಟ್ರೀಮ್ ಲ್ಯಾಂಗೋವನ್’ (ಇಂಗ್ಲಿಷ್ ಅನುವಾದ – ‘ಮಾರ್ಕೆಟ್ ಎಕ್ಸ್‌ಟ್ರೀಮ್ ಲ್ಯಾಂಗೋವನ್’) ಪದಗಳನ್ನು ನೋಡಬಹುದು. ಆದ್ದರಿಂದ, ಗೂಗಲ್‌ನಲ್ಲಿ ಆ ಪದಗಳೊಂದಿಗೆ ಹುಡುಕಿದಾಗ, ಹುಡುಕಾಟ ಫಲಿತಾಂಶಗಳಲ್ಲಿ ಇದೇ ರೀತಿಯ ಅನೇಕ ವೀಡಿಯೊಗಳು ಕಂಡುಬಂದಿವೆ. ‘ವಿರಾಲ್ ಪಸರ್ ಎಕ್ಸ್‌ಟ್ರೀಮ್ ಲ್ಯಾಂಗೋವನ್ ಇಂಡೋನೇಷಿಯಾ’ ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಅದೇ ವೀಡಿಯೊವನ್ನು ಡಿಸೆಂಬರ್ -2019 ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಲ್ಯಾಂಗೋವನ್ ಎನ್ನುವ ಸ್ಥಳ ಇಂಡೋನೇಷ್ಯಾದಲ್ಲಿದೆ.


0:20 ಸೆಕೆಂಡುಗಳ ಈ ವೀಡಿಯೊದಲ್ಲಿ, ಗೋಡೆಯ ಮೇಲೆ ನೇತುಹಾಕಿರುವ ಪೋಸ್ಟರ್‌ನಲ್ಲಿ ‘KANTOR PASAR LANGOWAN’ ಪದಗಳನ್ನು ಕಾಣಬಹುದು. ಈ ಪದಗಳ ಇಂಗ್ಲಿಷ್ ಅನುವಾದ- ‘ಆಫೀಸ್ ಆಫ್ ದಿ ಲ್ಯಾಂಗೋವನ್ ಮಾರ್ಕೆಟ್’. ಆದ್ದರಿಂದ ಈ ವೀಡಿಯೊವನ್ನು ವುಹಾನ್ ಮಾರುಕಟ್ಟೆಯಲ್ಲಿ (ಚೀನಾ) ಅಲ್ಲ, ಲ್ಯಾಂಗೋವಾನ್ ಮಾರುಕಟ್ಟೆಯಲ್ಲಿ (ಇಂಡೋನೇಷ್ಯಾ) ತೆಗೆದುಕೊಳ್ಳಲಾಗಿದೆ ಎಂದು ಇದು ಸೂಚಿಸುತ್ತದೆ.

ಅಲ್ಲದೆ, ‘ಗೆಟ್ಟಿ ಇಮೇಜಸ್’ ವೆಬ್‌ಸೈಟ್‌ನಲ್ಲಿನ ಲ್ಯಾಂಗೋವನ್ ಮಾರುಕಟ್ಟೆಯ ಫೋಟೋಗಳನ್ನು ಪೋಸ್ಟ್ ಮಾಡಿದ ವೀಡಿಯೊದಲ್ಲಿನ ದೃಶ್ಯಗಳೊಂದಿಗೆ ಹೋಲಿಸಿದಾಗ ಇನ್ನೂ ಅನೇಕ ಹೋಲಿಕೆಗಳನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೊ ವಿಹಾನ್ (ಚೀನಾ) ನಲ್ಲಿ ಅಲ್ಲ, ಲ್ಯಾಂಗೋವನ್ (ಇಂಡೋನೇಷ್ಯಾ) ಮಾರುಕಟ್ಟೆಯ ವೀಡಿಯೊವನ್ನು ತೋರಿಸುತ್ತದೆ.

Share.

About Author

Comments are closed.

scroll