Fake News - Kannada
 

ಬ್ಯಾಂಕ್ ದರೋಡೆಕೋರರನ್ನು ಬಂಧಿಸುವ ಪೊಲೀಸರ ಅಣಕು ಪ್ರದರ್ಶನವನ್ನು ನಿಜ ಘಟನೆಯ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

“ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಹಿಡಿದ ಅಮದ್ ನಗರ ಪೊಲೀಸರ ವಿಡಿಯೋ ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪೊಲೀಸರು ಮೂವರನ್ನು ಬಂಧಿಸುತ್ತಿರುವುದನ್ನು ತೋರಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಗಲು ಹೊತ್ತಿನಲ್ಲಿ ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಪೊಲೀಸರು ಹಿಡಿಯುತ್ತಿರುವ ವಿಡಿಯೋ.

ನಿಜಾಂಶ: ಈ ವಿಡಿಯೋದಲ್ಲಿ ನಡೆದದ್ದು ನಿಜವಾದ ಕಳ್ಳತನವಲ್ಲ, ಅಣಕು ಪ್ರದರ್ಶನ ಮಾತ್ರ. ಅಹ್ಮದ್ ನಗರದ ಶೆಂಡಿ ಗ್ರಾಮದಲ್ಲಿ ಗ್ರಾಮ ಸುರಕ್ಷಾ ದಳದಿಂದ ಅಣಕು ಕಸರತ್ತು ನಡೆಸಲಾಯಿತು. ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಹಳ್ಳಿಯ ವಿವಿಧ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಪೊಲೀಸರು ಅಣಕು ಪ್ರದರ್ಶನ ನಡೆಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ನಾನು ವೀಡಿಯೊದ ಸ್ಕ್ರೀನ್‌ಶಾಟ್ ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ದೃಶ್ಯಗಳಿರುವ ಯೂಟ್ಯೂಬ್ ವೀಡಿಯೋವೊಂದು ಸಿಕ್ಕಿದೆ. 03 ಸೆಪ್ಟೆಂಬರ್ 2021 ರಂದು ಅಪ್‌ಲೋಡ್ ಮಾಡಿದ ಈ ಯೂಟ್ಯೂಬ್ ವೀಡಿಯೊದಲ್ಲಿ, ಈ ಘಟನೆಯು ಅಹ್ಮದ್‌ನಗರ ಪೊಲೀಸರಿಗೆ ಸಂಬಂಧಿಸಿದ ಅಣಕು ಪ್ರದರ್ಶನ ಎಂದು ವಿವರಿಸಲಾಗಿದೆ.

ಈ ವಿಡಿಯೋ ಅಹ್ಮದ್‌ನಗರ ಪೊಲೀಸರಿಗೆ ಸಂಬಂಧಿಸಿದೆ ಎಂಬ ಸುಳಿವಿನೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ ಮಹಾರಾಷ್ಟ್ರ ಟೈಮ್ಸ್ ಪ್ರಕಟಿಸಿದ ಲೇಖನ ದೊರಕಿದೆ. ಅದೇ ದೃಶ್ಯಗಳನ್ನು ಹೊಂದಿರುವ ವೀಡಿಯೊ ವರದಿಯನ್ನು ಸಹ ಆ ಲೇಖನದಲ್ಲಿ ಕಾಣಬಹುದು. 01 ಸೆಪ್ಟೆಂಬರ್ 2021 ರಂದು ಪ್ರಕಟವಾದ ಈ ಲೇಖನ, ಅಹ್ಮದ್ ನಗರದ ಶೆಂಡಿ ಗ್ರಾಮದಲ್ಲಿ ಗ್ರಾಮ ಸುರಕ್ಷಾ ದಳ ಅಣಕು ಕಸರತ್ತು ನಡೆದಿದೆ ಎಂದು ಹೇಳುತ್ತದೆ. ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಗ್ರಾಮದ ವಿವಿಧ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಪೊಲೀಸರು ಅಣಕು ಪ್ರದರ್ಶನ ನಡೆಸಿದರು ಎಂದು ತಿಳಿದುಬಂದಿದೆ. ಈ ವಿಷಯದ ಕುರಿತ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಅಹ್ಮದ್‌ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕಟ್ಕೆ ವಿಡಿಯೋ ವರದಿಯಲ್ಲಿ ಇದು ಜಿಲ್ಲೆಯ ಎರಡನೇ ಅಣಕು ಕಸರತ್ತು ಎಂದು ಹೇಳಿದರು. ಭದ್ರತಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಇಂತಹ ಅಣಕು ಕಸರತ್ತು ನಡೆಸಲಾಗಿದೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ, ಅಹ್ಮದ್ ನಗರ ಪೊಲೀಸರು ನಡೆಸಿದ ಅಣಕು ಪ್ರದರ್ಶನದ ವಿಡಿಯೋವನ್ನು ಬ್ಯಾಂಕ್ ಅನ್ನು ದರೋಡೆ ಮಾಡಲು ಬಂದ ದರೋಡೆಕೋರರನ್ನು ಪೊಲೀಸರು ಸೆರೆಹಿಡಿದರು ಎಂದು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll