Fake News - Kannada
 

ಮಮತಾ ಬ್ಯಾನರ್ಜಿಯವರ ಬ್ಯಾಂಡೇಜ್ ಎಡಗಾಲಿನಿಂದ ಬಲಗಾಲಿಗೆ ಬದಲಾಗಿದೆ? ಇಲ್ಲ, ಇದು ಪ್ರತಿಬಿಂಬ

0

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬ್ಯಾಂಡೇಜ್  ಎಡಗಾಲಿನಿಂದ ಬಲಗಾಲಿಗೆ ಬದಲಾಯಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಒಂದೆರಡು ಫೋಟೋಗಳನ್ನು ಹೊಂದಿರುವ ಚಿತ್ರಗಳನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಹೇಳಲಾಗಿರುವ ವಿಷಯ ಸತ್ಯವೇ ಎಂಬುದನ್ನು ಪರಿಶೀಲಿಸೋಣ.

ಈ ಚಿತ್ರದ ಆಕ್ರೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಮಮತಾ ಬ್ಯಾನರ್ಜಿಯವರ  ಬ್ಯಾಂಡೇಜ್ ತಮ್ಮ ಎಡಗಾಲಿನಿಂದ ಬಲಗಾಲಿಗೆ ಬದಲಾಗಿದೆ ಎಂದು ಫೋಟೋಗಳು ತೋರಿಸುತ್ತವೆ.

ನಿಜಾಂಶ: ಗಾಲಿಕುರ್ಚಿಯಲ್ಲಿರುವ ಮಮತಾ ಬ್ಯಾನರ್ಜಿಯವರ ಛಾಯಾಚಿತ್ರವೊಂದರ ಪ್ರತಿಬಿಂಬದ ಚಿತ್ರ ಇದಾಗಿದೆ. ಬ್ಯಾಂಡೇಜ್ ಅವರ ಬಲಗಾಲಿನಲ್ಲಿದೆ ಎಂದು ತಪ್ಪಾಗಿ ತೋರಿಸಲು ಮೂಲ ಫೋಟೋವನ್ನು ಮಾರ್ಪಡಿಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.

ಪೋಸ್ಟ್‌ನಲ್ಲಿನ ಮೊದಲ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ  ಹುಡುಕಾಡಿದಾಗ, ಅದೇ ಫೋಟೋವನ್ನು ಅನೇಕ ಸುದ್ದಿ ಸಂಸ್ಥೆಗಳು ತಮ್ಮ ಲೇಖನಗಳಲ್ಲಿ ಪ್ರಕಟಿಸುತ್ತಿರುವುದು ಕಂಡುಬಂದಿದೆ. ಅವುಗಳಲ್ಲಿ ಕೆಲವು ಇಲ್ಲಿವೆ. ಇದೇ ಫೋಟೋವನ್ನು ಎಐಟಿಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರು 11 ಮಾರ್ಚ್ 2021 ರಂದು ಟ್ವೀಟ್ ಮಾಡಿದ್ದಾರೆ. ಮಮತಾ ಬ್ಯಾನರ್ಜಿಯವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಫೋಟೋ ತೆಗೆಯಲಾಗಿದೆ ಎಂದು ಗಮನಿಸಬಹುದು. ಬ್ಯಾಂಡೇಜ್ ಅನ್ನು ಮಮತಾ ಬ್ಯಾನರ್ಜಿಯ ಎಡಗಾಲಿನಲ್ಲಿ ಕಾಣಬಹುದು.

ಮಾರ್ಚ್ 21, 2021 ರಂದು ಮಮತಾ ಬ್ಯಾನರ್ಜಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದಾಗ ಎರಡನೇ ಫೋಟೋ ತೆಗೆಯಲಾಗಿದೆ. ಪೋಸ್ಟ್‌ನಲ್ಲಿರುವ ಫೋಟೋ, ಮೂಲ ಚಿತ್ರದ  ಪ್ರತಿಬಿಂಬ ಎಂಬುದು ಗಮನಿಸಬಹುದು. ‘ಬಾಂಗ್ಲರ್ ಗೋರ್ಬೊ ಮಮತಾ’ ಎಂಬ ಟ್ವಿಟರ್‍ ಹ್ಯಾಂಡಲ್  ಪೋಸ್ಟ್ ಮಾಡಿರುವ ಮೂಲ ಫೋಟೋದಲ್ಲಿ, ಬ್ಯಾಂಡೇಜ್ ಅವರ ಎಡಗಾಲಿನಲ್ಲಿರುವುದನ್ನು ಕಾಣಬಹುದು. ಆದರೆ ಬ್ಯಾಂಡೇಜ್ ಅವರ ಬಲಗಾಲಿನಲ್ಲಿದೆ ಎಂದು ತಪ್ಪಾಗಿ ತೋರಿಸಲು ಫೋಟೋವನ್ನು ಮಾರ್ಪಡಿಸಲಾಗಿದೆ.

ಅಲ್ಲದೆ, ಇದೇ ರೀತಿಯ ದೃಶ್ಯಗಳೊಂದಿಗೆ ‘ಎಎನ್‌ಐ ನ್ಯೂಸ್’ ಪ್ರಕಟಿಸಿದ ವೀಡಿಯೊದಲ್ಲಿ, ಮಮತಾ ಬ್ಯಾನರ್ಜಿಯವರ  ಎಡಗಾಲಿನಲ್ಲಿ ಬ್ಯಾಂಡೇಜ್ ಇರುವುದನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಗಾಲಿಕುರ್ಚಿಯಲ್ಲಿ ಬಲಗಾಲಿಗೆ ಬ್ಯಾಂಡೇಜ್ ಹೊಂದಿರುವ ಮಮತಾ ಬ್ಯಾನರ್ಜಿ ಅವರ ಫೋಟೋ ಮೂಲ ಫೋಟೋದ ಪ್ರತಿಬಿಂಬವಾಗಿದೆ.

Share.

About Author

Comments are closed.

scroll