ಇತ್ತೀಚಿಗೆ ಒಂದು ಚಿತ್ರ ಫೇಸ್ಬುಕ್ ನಲ್ಲಿ ಹರಡಿಸಲಾಗಿದೆ ಮತ್ತು ಶೇರ್ ಮಾಡಲಾಗಿದೆ ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ನಮ್ಮ ಸೈನಿಕರ ಮಾರಣಹೋಮದ ಚಿತ್ರ ಹರಿದಾಡ್ತಾಯಿದೆ. ಆ ಸೈನಿಕರ ದೇಹವು ಕಾರ್ಟೂನ್ ಬಾಕ್ಸ್ ನಲ್ಲಿ ಇಡಲಾಗಿದೆ ಎಂದು ಬಿಂಬಿಸಲಾಗದಿ ಇದು ನಮ್ಮ ದೇಶದ ಪರಸ್ಥಿತಿ ಎಂದು ಹೆಳೆಯಲಾಗಿದೆ. ಇವಳು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಜನವರಿ ೬ ನೇ ತಾರೀಕಿನಂದು ಹಾಕಿಕೊಂಡಿದ್ದಾರೆ. ಹಾಗಾದರೆ ಈ ಆರೋಪವನ್ನು ನಾವು ಕೂಲಂಕುಷವಾಗಿ ಪರಿಶೀಲಿಸಿ ನೋಡೋಣ

ಪ್ರತಿಪಾದನೆಯಲ್ಲಿ: ಈ ಪೋಸ್ಟ್ನಲ್ಲಿ ಅವರು ಹೇಳುವುದೇನೆಂದರೆ ಇತ್ತೀಚಿಗೆ ಕಾಶ್ಮೀರದಲ್ಲಿ ನಮ್ಮ ಸೈನಿಕರ ಮರಣ ಹೊಂದಿದ ಮೇಲೆ ಅವರಿಗೆ ಅವಮಾನ ಮಾಡಲಾಗಿದೆ ಅಂತ ಹೇಳಿಕೊಂಡಿದ್ದಾರೆ.
ಸತ್ಯ: ಈ ಘಟನೆಯು ಸತ್ಯಕ್ಕೆ ದೂರವಾದದ್ದು , ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆ ಇದಲ್ಲ. ಇದು ಬಹಳ ವರ್ಷದ ಹಳೆಯ ಚಿತ್ರ ಇದಾಗಿದ್ದು ೨೦೧೭ ನೇ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆದ ಘಟನೆ ಯಾಗಿದೆ ಹಾಗಾಗಿ ಇದು ಒಂದು ಸುಳ್ಳು ಸುದ್ದಿಯಾಗಿದೆ . ಇದು ತವಾಂಗ್ ಎಂಬ ಪ್ರದೇಶದಲ್ಲಿ ನಡೆದ ಘಟಟನೆಯಾಗಿದೆ .ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಪರಿಶೀಲಿಸಿದಾಗ ಈ ಘಟನೆ ಬಗ್ಗೆ ಬೆಳಕಿಗೆ ಬಂತು.
ಇದರ ಬಗ್ಗೆ ನಮ್ಮ ದೇಶದ ದೊಡ್ಡ ನ್ಯೂಸ್ ನೆಟ್ವರ್ಕ್ ಆದ ಎಂಡಿಟಿವ್ ತನ್ನ ಮುಖಪಟದಲ್ಲಿ ಇದರ ಬಗ್ಗೆ ಪ್ರಕಟಮಾಡಿದೆ ಅದೇನೆಂದರೆ ಈ ಘಟನೆ ನಡೆದಿರೋದು ೨೦೧೭ ನೇ ಅಕ್ಟೋಬರ್ ತಿಂಗಳಲ್ಲಿ ತವಾಂಗ್ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ತನ್ನ ಪತ್ರಿಕೆಯಲ್ಲಿ ಹೇಳಿಕೊಂಡಿದೆ.

ಈ ಘಟನೆ ಬಗ್ಗೆ ಪಂಜಾಬ್ ನ ಮುಖ್ಯಮಂತ್ರಿ ಆದ ಕ್ಯಾಪ್ಟನ್ ಅಮರೇಂದ್ರ್ ಸಿಂಗ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹೇಳಿಕೊಂಡಿದೆ ಈ ಘಟನೆ ನಡೆದಿದ್ದು ತವಾಂಗ್ ಪ್ರದೇಶದಲ್ಲಿ ಅಂತ. ಜನವರಿ ಯಲ್ಲಿ ಫೇಸ್ಬುಕ್ ಪೋಸ್ಟ್ ಮಾಡಿದ್ದೂ ಏನಕ್ಕೆ ಇವಾಗ ಇದು ಸುಳ್ಳು ಎಂದು ನಾವು ಸಾದಿಸುತ್ತಿದ್ದೇವೆ ಎಂದರೆ ಈಗಲೂ ಈ ಪೋಸ್ಟ್ ಗಳು ಫೇಸ್ಬುಕ್ ಅಲ್ಲಿ ಪೋಸ್ಟ್ ಶೇರ್ ಆಗ್ತಿವೆ.
Shocked to see bodies of 7 @IAF_MCC & @adgpi Tawang crash victims brought in cartons. Is this how we treat our brave men? pic.twitter.com/dP5HGsRvTH
— Capt.Amarinder Singh (@capt_amarinder) October 8, 2017
ಒಟ್ಟಾರೆಯಾಗಿ ಹೇಳುವುದಾದರೆ, ಚಿತ್ರದಲ್ಲಿರುವ ಸೈನಿಕರ ಮರಣದ ಚಿತ್ರ ನಡೆದಿರೋದು ಅರುಣಾಚಲ ಪ್ರದೇಶದ ತವಾಂಗ್ ಎಂಬ ಪ್ರದೇಶದಲ್ಲಿ ಅದು ಕಾಶ್ಮೀರದಲ್ಲಲ್ಲ ಹೀಗಾಗಿ ಇದು ಒಂದು ಸುಳ್ಳು ಭರಿತ ಚಿತ್ರ ವಾಗಿದೆ.