09 ಆಗಸ್ಟ್ 2024 ರಂದು ಕೋಲ್ಕತ್ತಾದ ಆರ್ಜಿ ಕಾರ್ ಮೆಡಿಕಲ್ ಕಾಲೇಜು ಅಂಡ್ ಹಾಸ್ಪಿಟಲ್ ನಲ್ಲಿ ಟ್ರೈನಿ ಡಾಕ್ಟರ್ ಅತ್ಯಾಚಾರ ಮತ್ತು ಕೊಲೆಯ ಹಿನ್ನೆಲೆಯಲ್ಲಿ, “ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಮನೆಗೆ / ತಮ್ಮ ಗಮ್ಯಸ್ಥಾನಗಳಿಗೆ ಹೋಗಲು ವಾಹನವನ್ನು ಕಂಡುಹಿಡಿಯದಿದ್ದರೆ, ಅವರು ಪೊಲೀಸ್ ಸಹಾಯವಾಣಿ ಸಂಖ್ಯೆ 1091 ಅಥವಾ 7837018555 ಅನ್ನು ಸಂಪರ್ಕಿಸಬಹುದು ಮತ್ತು ವಾಹನಕ್ಕಾಗಿ ವಿನಂತಿಸಬಹುದು, ಕಂಟ್ರೋಲ್ ರೂಮ್ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ / ಎಸ್ಎಚ್ಒ ವಾಹನವು ಬಂದು ಅವರನ್ನು ಸುರಕ್ಷಿತವಾಗಿ ತಮ್ಮ ಪ್ರದೇಶಗಳಿಗೆ ಕರೆದೊಯ್ಯುತ್ತದೆ. ದೇಶಾದ್ಯಂತ ಪೊಲೀಸರು ಮಹಿಳೆಯರಿಗಾಗಿ ಈ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ” ಎಂದು ಹೇಳುವ ಅನೇಕ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಲೇಖನದ ಮೂಲಕ ಇದರಲ್ಲಿರುವ ನಿಜಾಂಶವನ್ನು ಪರಿಶೀಲಿಸೋಣ.

ಕ್ಲೇಮ್: ರಾತ್ರಿಯಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ದೇಶಾದ್ಯಂತ ಪೊಲೀಸರು ‘ಉಚಿತ ಸವಾರಿ’ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಇದರ ಸಹಾಯವಾಣಿ ಸಂಖ್ಯೆಗಳು 1091 ಮತ್ತು 7837018555.
ಫ್ಯಾಕ್ಟ್: 7837018555 ಸಹಾಯವಾಣಿ ಸಂಖ್ಯೆ ಪಂಜಾಬ್ನ ಲುಧಿಯಾನದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪರಿಚಯಿಸಲಾದ ‘ಉಚಿತ ಸವಾರಿ’ ಯೋಜನೆಗೆ ಸಂಬಂಧಿಸಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಲುಧಿಯಾನ ನಗರ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಮಹಿಳೆಯರು ತಮ್ಮ ಮನೆ / ಗಮ್ಯಸ್ಥಾನಗಳಿಗೆ ಹೋಗಲು ವಾಹನ ಸಿಗದಿದ್ದರೆ 1091 ಅಥವಾ 783701855 ಅಥವಾ 100 ಗೆ ಕರೆ ಮಾಡಿ ಪೊಲೀಸ್ ಸಹಾಯ ಕೇಳಬಹುದು. ಈ ಯೋಜನೆಯನ್ನು ಲುಧಿಯಾನ ಪೊಲೀಸರು 2019 ರಲ್ಲಿ ಪ್ರಾರಂಭಿಸಿದ್ದಾರೆ. 1091 ಎಂಬುದು ರಾಷ್ಟ್ರೀಯ ಮಹಿಳಾ ಆಯೋಗವು ನಿರ್ವಹಿಸುವ ಪ್ಯಾನ್-ಇಂಡಿಯಾ ಮಹಿಳಾ ಸಹಾಯವಾಣಿ ಸಂಖ್ಯೆಯಾಗಿದೆ. ತೊಂದರೆಯಲ್ಲಿರುವ ಯಾವುದೇ ಮಹಿಳೆ ಈ ಸಂಖ್ಯೆಗೆ ಕರೆ ಮಾಡಬಹುದು ಮತ್ತು ಸಹಾಯವನ್ನು ಕೇಳಬಹುದು. ನೀವು 1091 ಗೆ ಕರೆ ಮಾಡಿದರೆ, ನಿಮ್ಮ ಕರೆಯನ್ನು ನೀವು ಇರುವ ರಾಜ್ಯದ ಮಹಿಳಾ ಸುರಕ್ಷತಾ ಪೊಲೀಸ್ ವಿಭಾಗಕ್ಕೆ ರವಾನಿಸಲಾಗುತ್ತದೆ. ರಾತ್ರಿಯಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಹಲವಾರು ರಾಜ್ಯಗಳು ಇದೇ ರೀತಿಯ ‘ಉಚಿತ ಸವಾರಿ’ ಯೋಜನೆಯನ್ನು ಕೈಗೊಂಡಿವೆ. ಈ ಯೋಜನೆಯನ್ನು ದೇಶಾದ್ಯಂತ ಜಾರಿಯಾಗಿಲ್ಲ. ಆದ್ದರಿಂದ ಈ ಪೋಸ್ಟ್ನಲ್ಲಿ ಹೇಳಿರುವುದು ತಪ್ಪಾಗಿದೆ.
ಈ ವೈರಲ್ ಪೋಸ್ಟ್ನಲ್ಲಿ ಹೇಳಿದಂತೆ ರಾತ್ರಿಯಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ‘ಉಚಿತ ರೈಡ್’ ಯೋಜನೆಯನ್ನು ಪ್ರಾರಂಭಿಸುವಾಗ 1091 ಮತ್ತು 7837018555 ಸಹಾಯವಾಣಿ ಸಂಖ್ಯೆಗಳನ್ನು ಪ್ರಾರಂಭಿಸಿದ್ದಾರೆಯೇ? ಎಂದು ತಿಳಿಯಲು ನಾವು ಗೂಗಲ್ನಲ್ಲಿ ಕೀವರ್ಡ್ ಅನ್ನು ಹುಡುಕಿದಾಗ, ಇದಕ್ಕೆ ಸಂಬಂದಿಸಿದ ಒಂದು ಪೋಸ್ಟ್ನಲ್ಲಿ ನ್ಯೂಸ್ ರಿಪೋರ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯ ಪ್ರಕಾರ, ಲುಧಿಯಾನ ಪೊಲೀಸರು 2019 ರ ಡಿಸೆಂಬರ್ ನಲ್ಲಿ ಮಹಿಳೆಯರಿಗೆ ರಾತ್ರಿಯಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ‘ಉಚಿತ ರೈಡ್’ ಯೋಜನೆಯನ್ನು ಪ್ರಾರಂಭಿಸಿದ್ದರು ಇದು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಪ್ರಯಾಣಿಸುವ ಯಾವುದೇ ಮಹಿಳೆಗೆ ತಮ್ಮ ಮನೆಗೆ ತಲುಪಲು ವಾಹನ ಸಿಗದಿದ್ದರೆ, ಅವರು ಸಹಾಯವಾಣಿ ಸಂಖ್ಯೆಗಳಾದ 1091, 112 ಅಥವಾ 783701855 ಗೆ ಕರೆ ಮಾಡಿ ಉಚಿತ ರೈಡ್ ಪಡೆಯಬಹುದು.

ಪೋಸ್ಟ್ ನಲ್ಲಿ ಉಲ್ಲೇಖಿಸಲಾದ ಸಂಖ್ಯೆ 7837018555 ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ? ಎಂದು ತಿಳಿಯಲು ಲುಧಿಯಾನ ಪೊಲೀಸ್ ಕಂಟ್ರೋಲ್ ರೂಂ ಪ್ರತಿಕ್ರಿಯಿಸಿದಾಗ, ಉಚಿತ ರೈಡ್ ಯೋಜನೆಯು ಲುಧಿಯಾನ ನಗರ ವ್ಯಾಪ್ತಿಯಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ, ಇದರಿಂದಾಗಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ತಮ್ಮ ಮನೆ / ಗಮ್ಯಸ್ಥಾನಗಳಿಗೆ ಹೋಗಲು ವಾಹನ ಸಿಗದಿದ್ದರೆ 1091 ಅಥವಾ 783701855 ಅಥವಾ 112 ಅಥವಾ 100 ಗೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ಹೇಳಿದ್ದಾರೆ.
ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಮತ್ತೊಂದು ಸಂಖ್ಯೆ 1091, ಇದು ರಾಷ್ಟ್ರೀಯ ಮಹಿಳಾ ಆಯೋಗ ನಿರ್ವಹಿಸುವ ಪ್ಯಾನ್-ಇಂಡಿಯಾ ಮಹಿಳಾ ಸಹಾಯವಾಣಿ ಸಂಖ್ಯೆಯಾಗಿದೆ. ತೊಂದರೆಯಲ್ಲಿರುವ ಯಾವುದೇ ಮಹಿಳೆ ಈ ಸಂಖ್ಯೆಗೆ ಕರೆ ಮಾಡಬಹುದು ಮತ್ತು ಸಹಾಯವನ್ನು ಕೇಳಬಹುದು. ನೀವು 1091 ಗೆ ಕರೆ ಮಾಡಿದರೆ, ನಿಮ್ಮ ಕರೆಯನ್ನು ನೀವು ಇರುವ ರಾಜ್ಯದ ಮಹಿಳಾ ಸುರಕ್ಷತಾ ಪೊಲೀಸ್ ವಿಭಾಗಕ್ಕೆ ರವಾನಿಸಲಾಗುತ್ತದೆ. ಇದರಿಂದ ಸಂಬಂಧಪಟ್ಟ ರಾಜ್ಯ ಪೊಲೀಸರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅಗತ್ಯ ನೆರವು ನೀಡುತ್ತಾರೆ.
ಕೆಲವು ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಇಲ್ಲಿ), ಇದೇ ರೀತಿಯ ‘ಉಚಿತ ರೈಡ್’ ಸ್ಕೀಮ್ ಅನ್ನು ಆಂಧ್ರಪ್ರದೇಶ ಪೊಲೀಸರು 2019 ರಲ್ಲಿ ಪ್ರಕಾಶಂ ಜಿಲ್ಲೆಯಲ್ಲಿ ಮತ್ತು ಜನವರಿ 2020 ರಲ್ಲಿ ರಾಜ್ಯದಾದ್ಯಂತ ಪ್ರಾರಂಭಿಸಿದರು. ಈ ಯೋಜನೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆಯೇ, ಇಲ್ಲವೇ? ಎಂದು ತಿಳಿಯಲು ನಾವು ಆಂಧ್ರಪ್ರದೇಶ ರಾಜ್ಯ ಡಿಜಿಪಿ ಕಚೇರಿಯನ್ನು ಸಂಪರ್ಕಿಸಿದಾಗ, ಈ ಯೋಜನೆ 2020 ರಿಂದ ಆಂಧ್ರಪ್ರದೇಶದಾದ್ಯಂತ ಜಾರಿಯಲ್ಲಿದೆ ಹಾಗೂ ಮಹಿಳೆಯರು ತಮ್ಮ ಸಹಾಯಕ್ಕಾಗಿ 100, 112, 1091 ಗೆ ಕರೆ ಮಾಡಬಹುದು ಅಥವಾ ಮಹಿಳಾ ಸುರಕ್ಷತಾ ಅಪ್ಲಿಕೇಶನ್ (ದಿಶಾ ಅಪ್ಲಿಕೇಶನ್) ನಲ್ಲಿ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಇದೇ ರೀತಿಯ ‘ಉಚಿತ ರೈಡ್ ‘ ಯೋಜನೆಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಡಿಸೆಂಬರ್ 2019 ಪ್ರಾರಂಭಿಸಿದರು. ಈ ಯೋಜನೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆಯೇ, ಇಲ್ಲವೇ? ಎಂಬುದನ್ನು ತಿಳಿಯಲು ನಾವು ನಾಗ್ಪುರ ಪೊಲೀಸರನ್ನು ಸಂಪರ್ಕಿಸಿದಾಗ, ಈ ಯೋಜನೆಯನ್ನು ನಾಗ್ಪುರ ನಗರದ ವ್ಯಾಪ್ತಿಯಲ್ಲಿ ಮಾತ್ರ ಜಾರಿಗೆ ತರಲಾಗಿದ್ದು, ಯಾವುದೇ ಮಹಿಳೆ ಸಹಾಯಕ್ಕಾಗಿ 100, 112, 1091, 07122561103, 07122561222 ಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.
ಇನ್ನು, ತೆಲಂಗಾಣ ಪೊಲೀಸರನ್ನು ಸಂಪರ್ಕಿಸಿದಾಗ, ಇಂತಹ ಯೋಜನೆ ತೆಲಂಗಾಣ ರಾಜ್ಯದಲ್ಲಿ ಇದೆಯಾ? ಎಂದು ತಿಳಿಯಲು ತೆಲಂಗಾಣ ಪೊಲೀಸರನ್ನು ಸಂಪರ್ಕಿಸಿದಾಗ ಇಂಥಹ ಯಾವುದೇ ಪ್ರತ್ಯೇಕ ಯೋಜನೆ ಇಲ್ಲವೆಂದು ಆದರೆ, ಆಪತ್ತಿನಲ್ಲಿರುವ ಮಹಿಳೆಯರು 100 ಗೆ ಕರೆ ಮಾಡಿದರೆ,ಅವರಿಗೆ ಅಗತ್ಯವಿರುವ ಸಹಾಯವನ್ನು ಮಾಡುವುದಾಗಿ ಹೇಳಿದ್ದಾರೆ. ಮಹಿಳೆಯರು ಟಿ-ಸೇಫ್ ಆಪ್ ಅನ್ನು ಇನ್ಸ್ಟಾಲ್ ಮಾಡಿದರೆ, ಅಥವಾ 100 ಗೆ ಡಯಲ್ ಮಾಡಿ್ 8 ನಂಬರ್ ಅನ್ನು ಆಯ್ಕೆ ಮಾಡಿದರೆ, ಆ ಮಹಿಳೆಯರ ಪ್ರಯಾಣ / ಪ್ರಯಾಣಗಳನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಾರೆ ಮತ್ತು ಅವರ ಪ್ರಯಾಣಗಳು ಸುರಕ್ಷಿತವಾಗಿ ಮುಂದುವರಿಯುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ತೆಲಂಗಾಣ ಪೊಲೀಸರು ಸಿದ್ಧಪಡಿಸಿದ ಕಮರ್ಷಿಯಲ್ ಜಾಹೀರಾತು ಇಲ್ಲಿದೆ. ಅಲ್ಲದೆ, ಈ ಪೋಸ್ಟ್ ವೈರಲ್ ಆದ ನಂತರ, ಹೈದರಾಬಾದ್ ನಗರ ಪೊಲೀಸರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ್ದಾರೆ ಮತ್ತು ಅಂತಹ ಯಾವುದೇ ಉಚಿತ ರೈಡ್ ಹಗರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, ಕಲ್ಕತ್ತಾ ಪೊಲೀಸರು ಇದೇ ರೀತಿಯ ಯೋಜನೆಯನ್ನು ಪರಿಚಯಿಸಿದ್ದಾರೆ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು. ಆದರೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (ಫೇಸ್ಬುಕ್ ಮತ್ತು ಟ್ವಿಟರ್) ಇದು ನಿಜವಲ್ಲ ಎಂದು ತಿಳಿಸಿದ್ದಾರೆ.
ಕೊನೆಯದಾಗಿ ಹೇಳುವುದಾದರೆ , ಲುಧಿಯಾನ ಪೊಲೀಸರು ರಾತ್ರಿಯಲ್ಲಿ ಪ್ರಯಾಣಿಸುವ ಮಹಿಳೆಯರ ರಕ್ಷಣೆಗಾಗಿ ಪ್ರಾರಂಭಿಸಿದ ಉಚಿತ ರೈಡ್ ಸ್ಕೀಮ್ ಹೆಲ್ಪ್ ಲೈನ್ ನಂಬರ್ (7837018555) ಅನ್ನು ದೇಶಾದ್ಯಂತ ಮಹಿಳೆಯರಿಗಾಗಿ ಪೊಲೀಸರು ಪ್ರಾರಂಭಿಸಿದ ಉಚಿತ ರೈಡ್ ಸ್ಕೀಮ್ ಹೆಲ್ಪ್ ಲೈನ್ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. 1091 ಎಂಬುದು ನ್ಯಾಷನಲ್ ಕಮಿಷನ್ ಫಾರ್ ವಿಮೆನ್ ಆಯೋಗ ನಿರ್ವಹಿಸುವ ಪ್ಯಾನ್-ಇಂಡಿಯಾ ನಂ.1091 ಮಹಿಳಾ ಸಹಾಯವಾಣಿ ಸಂಖ್ಯೆಯಾಗಿದೆ.