Fake News - Kannada
 

ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆಂದು ಎಡಿಟ್ ಮಾಡಿರುವ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಪಕ್ಷದ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಭವಿಷ್ಯದಲ್ಲಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ಅವರು ‘ಮೊಘಲರು ಭಾರತವನ್ನು 800 ವರ್ಷಗಳ ಕಾಲ ಆಳಿದರು. ಈ ದೇಶ ಇಸ್ಲಾಮಿಕ್ ರಾಷ್ಟ್ರವಾಗಲಿದೆ… ಇಡೀ ರಾಷ್ಟ್ರದಲ್ಲಿ ಒಬ್ಬ ಹಿಂದೂ ಕೂಡ ಇರುತ್ತಿರಲಿಲ್ಲ. ಎಲ್ಲರೂ ಮುಸ್ಲಿಮರಾಗಿ ಪರಿವರ್ತನೆಗೊಳ್ಳುತ್ತಾರೆ ’ ಎಂದು ಹೇಳುತ್ತಿರುವಂತೆ ಕಾಣುತ್ತದೆ. ಈ ಲೇಖನದಲ್ಲಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಭವಿಷ್ಯದಲ್ಲಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳುವ ವಿಡಿಯೋ.

ಸತ್ಯಾಂಶ: ಇದು ಎಡಿಟೆಡ್ ವೀಡಿಯೊ ಆಗಿದೆ. ಮೂಲ ವೀಡಿಯೊಗಳನ್ನು ಬಳಸಿಕೊಂಡು ಅದು ತಪ್ಪು ಸಂದೇಶವನ್ನು ನೀಡುವಂತೆ ಎಡಿಟ್ ಮಾಡಲಾಗಿದೆ. ಮೂಲ ವೀಡಿಯೊದಲ್ಲಿ, ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳುತ್ತಾರೆ – ‘ಈ ದೇಶವನ್ನು ಸುಮಾರು 800 ವರ್ಷಗಳ ಕಾಲ ಮೊಘಲ್ ಚಕ್ರವರ್ತಿಗಳು ಆಳಿದ್ದಾರೆ ಎಂದು ನಿಮಗೆ ತಿಳಿದಿದೆ, ಆದರೆ ಅವರು ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಧೈರ್ಯ ಮಾಡಲಿಲ್ಲ ……’ (ಇಂಗ್ಲಿಷ್ ಅನುವಾದ). ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಘಟನೆಯ ಬಗ್ಗೆ ನಾವು ಇಂಟರ್‌ನೆಟ್‌‌ನಲ್ಲಿ ಹುಡುಕಿದಾಗ, ಎಐಡಿಯುಎಫ್ ಪಕ್ಷದ ಶಾಸಕ ಡಾ.ಹಫೀಜ್ ರಫೀಕುಲ್ ಇಸ್ಲಾಂ ಅವರು ಈ ವೈರಲ್ ವಿಡಿಯೋ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೂಲ ವೀಡಿಯೊವನ್ನು ಟ್ವೀಟ್ ಮಾಡಿರುವ ಅವರು, ‘ಎಡಿಟ್ ಮಾಡಿದ ವಿಡಿಯೋ ಕ್ಲಿಪ್‌ನ ಮೂಲ ವೀಡಿಯೋ ಇಲ್ಲಿದೆ’ ಎಂದು ಬರೆದಿದ್ದಾರೆ. ಅಲ್ಲದೆ, ವೀಡಿಯೊದ ದೀರ್ಘ ಆವೃತ್ತಿಯನ್ನು 2019 ರ ಏಪ್ರಿಲ್‌ನಲ್ಲಿ  ‘ಬಾರ್‌ಪೇಟಾದಲ್ಲಿ ಮೌಲಾನಾ ಬದ್ರುದ್ದೀನ್ ಅಜ್ಮಲ್ ಭಾಷಣ [ಶರುಖಾತ್ರಿ ಸಮಷ್ಠಿ # ಕಾಯಕುಚಿ] ಎಂ.ಪಿ ಚುನಾವಣೆ 2019’ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಮೂಲ ವೀಡಿಯೊದಲ್ಲಿ, ಮೌಲಾನಾ ಬದ್ರುದ್ದೀನ್ ಅಜ್ಮಲ್, ‘ಈ ದೇಶವನ್ನು ಸುಮಾರು 800 ವರ್ಷಗಳ ಕಾಲ ಮೊಘಲ್ ಚಕ್ರವರ್ತಿಗಳು ಆಳಿದ್ದಾರೆ ಎಂದು ನಿಮಗೆ ತಿಳಿದಿದೆ, ಆದರೆ ಅವರು ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಧೈರ್ಯ ಮಾಡಲಿಲ್ಲ. ಅವರ ಭಾವಿಸಿದ್ದರೆ ಅದನ್ನು ಅವರು ಆ 800 ವರ್ಷಗಳಲ್ಲಿ ಬಹಳ ಸುಲಭವಾಗಿ ಮಾಡಬಹುದಿತ್ತು. ಹೀಗೆ ಮಾಡಿದಿದ್ದರೆ ಇಲ್ಲಿ ಹಿಂದೂಗಳು ಇರುತ್ತಿರಲಿಲ್ಲ. ಅವರು ಹಾಗೆ ಮಾಡಿದ್ದಾರೆಯೇ? (ಪ್ರತಿಯೊಬ್ಬರೂ ‘ಇಲ್ಲ’ ಎಂದು ಹೇಳುತ್ತಾರೆ.) ಆದ್ದರಿಂದ, ಅವರಿಗೆ ಧೈರ್ಯವಿಲ್ಲದ ಕಾರಣ ಅವರು ಪ್ರಯತ್ನಿಸಲಿಲ್ಲ. ’(ಇಂಗ್ಲಿಷ್ ಅನುವಾದ). ಭಾರತವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಬ್ರಿಟಿಷರು ಕೂಡಾ ಪ್ರಯತ್ನಿಸಲಿಲ್ಲ ಅಥವಾ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕನಸು ಕಾಂಗ್ರೆಸ್ ಕಂಡಿಲ್ಲ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವಿಡಿಯೋ ಮೂಲ ವೀಡಿಯೊದ ತುಣುಕುಗಳನ್ನು ಅದು ತಪ್ಪು ಸಂದೇಶವನ್ನು ತಲುಪಿಸುವ ರೀತಿಯಲ್ಲಿ ಎಡಿಟ್ ಮಾಡಲಾಗಿದೆ .

ಅಲ್ಲದೆ, ವೈರಲ್ ವೀಡಿಯೊವನ್ನು ಸ್ಪಷ್ಟಪಡಿಸುತ್ತಿರುವ ANI ವರದಿಯಲ್ಲಿ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಹೀಗೆ ಹೇಳಿದ್ದಾರೆ – ‘ಇದು 100% ನಕಲಿಯಾಗಿದೆ….ನೀವು ನಿಜವಾದ ವೀಡಿಯೊವನ್ನು ನೋಡಿದರೆ, ಹಿಮಾಂತ ಬಿಸ್ವಾ ಶರ್ಮಾ ನನ್ನನ್ನು ಮೊಘಲ್ ಎಂದು ಕರೆದಾಗ , ಮೊಘಲರು 800 ವರ್ಷಗಳ ಕಾಲ ಭಾರತವನ್ನು ಆಳಿದರು ಎಂದು ನಾನು ಹೇಳಿದ್ದೆ ಆದರೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಬಗ್ಗೆ ಯೋಚಿಸಿದ್ದರೆ? ಎಂದು ನಾನು ಜನರೊಂದಿಗೆ ಕೇಳುವುದನ್ನು ನೀವು ನೋಡಬಹುದು. ಆಗ ಜನರು ‘ಇಲ್ಲ’ಎಂದು ಹೇಳುತ್ತಾರೆ. ಈ ವಿಷಯದ ಬಗ್ಗೆ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಸ್ಪಷ್ಟೀಕರಣ ನೀಡುತ್ತಿರುವ ಪತ್ರಿಕಾಗೋಷ್ಠಿಯನ್ನು ಇಲ್ಲಿ ನೋಡಬಹುದು.

ಈ ಹಿಂದೆ ಮೌಲಾನಾ ಬದ್ರುದ್ದೀನ್ ಅಜ್ಮಲ್ ಮಾಡಿದ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತವು ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದಂತೆ ಎಡಿಟೆಡ್‌ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll