Fake News - Kannada
 

ದಾಲ್ ಸರೋವರದ ಬಳಿ ಅಕ್ರಮವಾಗಿ ನೆಲೆಸಿದ್ದವರನ್ನು ಒಕ್ಕಲೆಬ್ಬಿಸಿದ್ದನ್ನು ರೋಹಿಂಗ್ಯಾಗಳು ಎಂದು ಸುಳ್ಳು ಸಂದೇಶ ಹಂಚಿಕೊಳ್ಳಲಾಗಿದೆ!

0

ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ನೆಲೆಸಿದ್ದ ರೋಹಿಂಗ್ಯಾಗಳ ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಜಮ್ಮು ಮತ್ತು ಕಾಶ್ಮೀರದಲ್ಲಿ ರೋಹಿಂಗ್ಯಾಗಳ ಅಕ್ರಮ ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮಗೊಳಿಸುವ ದೃಶ್ಯ..

ಸತ್ಯ: ಜಮ್ಮು ಮತ್ತು ಕಾಶ್ಮೀರದ ಕೆರೆಗಳು ಮತ್ತು ಜಲಮಾರ್ಗ ಅಭಿವೃದ್ದಿ ಪ್ರಾಧಿಕಾರ (LAWDA)ವು ದಾಲ್‌ ಸರೋವರದ ತೀರದಲ್ಲಿ ಅಕ್ರಮವಾಗಿ ನೆಲೆಸಿದ್ದವರ ಗುಡಿಸಲುಗಳನ್ನು ನೆಲಸಮ ಮಾಡಿದೆ ಎಂದು ಕಾಶ್ಮೀರದ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ, ಯಾವುದೇ ವರದಿಯು ಇದು ರೋಹಿಂಗ್ಯಾಗಳ ಗುಡಿಸಲುಗಳು ಎಂದು ಬರೆದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ವೀಡಿಯೊ ‘ಜಮ್ಮು ಲಿಂಕ್ಸ್ ನ್ಯೂಸ್’ಎನ್ನುವ ವಾಟರ್‌ಮಾರ್ಕ್ ಅನ್ನು ಹೊಂದಿದೆ. ಇದರಿಂದ ಒಂದು ಕ್ಲ್ಯೂ ತೆಗೆದುಕೊಂಡು, ಯೂಟ್ಯೂಬ್‌ನಲ್ಲಿ ಹುಡುಕಿದಾಗ, ಅದೇ ಹೆಸರಿನ ಚಾನಲ್‌ನಲ್ಲಿರುವ ಮೂಲ ವೀಡಿಯೊ ದೊರೆತಿದೆ. ವೀಡಿಯೊದಲ್ಲಿ ಒದಗಿಸಲಾದ ವಿವರಣೆಯ ಪ್ರಕಾರ, ಕೆರೆಗಳು ಮತ್ತು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರವು (LAWDA) ಲಷ್ಕರಿ ಮೊಹಲ್ಲಾ, ದೋಜಿ ಮೊಹಲ್ಲಾ, ಬುರ್ಜಾಮಾ, ವಂಗುತ್ ತೈಲ್ಬಾಲ್ ಮತ್ತು ನಿಶಾತ್ ಪ್ರದೇಶಗಳಲ್ಲಿನ ಅಕ್ರಮ ನೆಲೆಗಳನ್ನು ನೆಲಸಮ ಮಾಡಿದೆ ಎಂದು ಹೇಳಿದೆ.

ಹೆಚ್ಚಿನ  ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈಟಿವಿ ಭಾರತ್‌ನ ಸುದ್ದಿ ವರದಿಯೊಂದು ತೊರೆತಿದೆ. ಅದೂ ಕೂಡ ಅದೇ ಘಟನೆಯ ಬಗ್ಗೆ ವರದಿ ಮಾಡಿದೆ. ಈ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕೆರೆಗಳು ಮತ್ತು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ (LAWDA) ಲಷ್ಕರಿ ಮೊಹಲ್ಲಾ, ದೋಬಿ ಮೊಹಾಕಾ, ಬಾರ್ಜಹಾಮಾ, ವಂಗತ್, ಟೆಲ್ ಬಿಲ್, ನಿಶಾತ್ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಕ್ರಮ ನಿವಾಸಗಳನ್ನು ಧ್ವಂಸಗೊಳಿಸಿದೆ ಎಂದು ಹೇಳಿದೆ.

ಇದಲ್ಲದೆ, ಅನೇಕ ಜೆ & ಕೆ ಸ್ಥಳೀಯ ಸುದ್ದಿ ಸಂಸ್ಥೆಗಳು ಅದೇ ರೀತಿಯ ಘಟನೆಗಳನ್ನು ವರದಿ ಮಾಡಿವೆ ಮತ್ತು ಇದೇ ರೀತಿಯ ದೃಶ್ಯಗಳನ್ನು ಪ್ರಕಟಿಸಿವೆ. ಈ ವರದಿಗಳ ಪ್ರಕಾರ, ಯಾವುದೇ ಪೂರ್ವ ಅನುಮತಿಯಿಲ್ಲದೆ ದಾಲ್ ಸರೋವರದ ಉದ್ದಕ್ಕೂ ಕಾನೂನುಬಾಹಿರವಾಗಿ ಹಲವರು ನೆಲೆಸಿದ್ದರು. ಅವರ ನಿವಾಸಗಳನ್ನು LAWDA ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಈ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಅಧಿಕಾರಿಗಳು ಅಕ್ರಮ ನೆಲೆಗಳನ್ನು ಕೆಡವಿದ್ದಕ್ಕೆ ಸಂಬಂಧಿಸಿದ ಕೆಲವು ಇತರ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಟಿವಿ 9, ಇಂಡಿಯಾ ಟುಡೆ ಮತ್ತು ಝೀ ನ್ಯೂಸ್‌ಗಳು ಸಹ LAWDA ಅಧಿಕಾರಿಗಳು ದಾಲ್ ಸರೋವರದ ಉದ್ದಕ್ಕೂ ಅಕ್ರಮ ನೆಲೆಗಳನ್ನು ಕೆಡವಿವೆ ಎಂದು ವರದಿ ಮಾಡಿವೆ. ಆದಾಗ್ಯೂ, ಈ ಎಲ್ಲಾ ವರದಿಗಳು ದಾಲ್ ಸರೋವರದ ತೀರದಲ್ಲಿ ಅಕ್ರಮ ನಿರ್ಮಾಣಗಳಾಗಿವೆ ಎಂದು ಸೂಚಿಸುತ್ತವೆ. ಆದರೆ ಈ ಯಾವುದೇ ವರದಿಗಳು ಈ ನಿವಾಸಗಳು ರೋಹಿಂಗ್ಯಾಗಳಿಗೆ ಸಂಬಂಧಿಸಿವೆ ಎಂದು ಯಾವುದೇ ವರದಿಯೂ ಹೇಳಿಲ್ಲ. ಅಲ್ಲದೆ, ಈ ಘಟನೆಗೂ ಯೋಹಿಂಗ್ಯಾಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವು ಸೂಚಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ದಾಲ್ ಸರೋವರದ ಉದ್ದಕ್ಕೂ ಅಕ್ರಮ ನೆಲೆಗಳನ್ನು ನೆಲಸಮ ಮಾಡುತ್ತಿರುವುದನ್ನು ರೋಹಿಂಗ್ಯಾಗಳೊಂದಿಗೆ ತಪ್ಪಾಗಿ ಸಂಬಂಧ ಕಲ್ಪಿಸಲಾಗಿದೆ.

Share.

About Author

Comments are closed.

scroll