Fake News - Kannada
 

ಭಾರತದ ಚುನಾವಣೆಗೂ ಬಾಂಗ್ಲಾದೇಶಿ ಮುಸ್ಲಿಂ ಸ್ಕಾಲರ್ ಯತಿ ನರಸಿಂಘನಂದ್ ಸರಸ್ವತಿಯವರನ್ನು ಗುರಿಯಾಗಿಸಿ ಮಡಿದ ಭಾಷಣಕ್ಕೂ ಯಾವುದೇ ಲಿಂಕ್ ಇಲ್ಲ

0

ಹಿಂದೂಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಕೇಳುತ್ತಿರುವ ವ್ಯಕ್ತಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆತ ಹಿಂದಿಯಲ್ಲಿ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಹಿಂದೂಗಳ ಮನೆ ಬಾಗಿಲಿಗೆ ಹೋಗಿ ಇಸ್ಲಾಂಗೆ ಆಮಂತ್ರಣವನ್ನು ನೀಡುತ್ತೇನೆ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.

ಇದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಕ್ಲೇಮ್: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಇಸ್ಲಾಂಗೆ ಪರಿವರ್ತಿಸುತ್ತೇನೆ ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಹೇಳುತ್ತಿರುವ ವಿಡಿಯೋ.

ಫ್ಯಾಕ್ಟ್: ಇದು ಬಾಂಗ್ಲಾದೇಶದ ಹಳೆಯ ವೀಡಿಯೊ; 2024 ರ ಸಾರ್ವತ್ರಿಕ ಚುನಾವಣೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೀಡಿಯೊದಲ್ಲಿರುವ ವ್ಯಕ್ತಿ ‘ಸೈಯದ್ ಇರ್ಷಾದ್ ಅಹ್ಮದ್ ಅಲ್ ಭುಕಾರಿ’ ಎಂಬ ಮುಸ್ಲಿಂ ವಿದ್ವಾಂಸ. ಅವರು 2021 ರಲ್ಲಿ ಬಾಂಗ್ಲಾದೇಶದ ದಿನಜ್‌ಪುರದಲ್ಲಿ ಇಸ್ಲಾಂ ಧರ್ಮದ ಕುರಿತು ಭಾರತದ ಯತಿ ನರಸಿಂಹಾನಂದ ಸರಸ್ವತಿ ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಹೇಳಿದ್ದಾರೆ. ಹಾಗಾಗಿ ಈ ಪೋಸ್ಟ್ ನಲ್ಲಿ ಮಾಡಿದ  ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ಕುರಿತು ಹೆಚ್ಚಿನ ವಿವರಗಳನ್ನು ಹುಡುಕಲು ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವು  2021 ಮೇ ಯಲ್ಲಿನ  ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಡಿದ ಪೋಸ್ಟ್‌ಗೆ (ಆರ್ಕೈವ್ ಲಿಂಕ್) ನಮ್ಮನ್ನು ಕರೆದೊಯ್ಯಿತು.


ವೈರಲ್ ಪೋಸ್ಟ್‌ನಲ್ಲಿರುವ ವೀಡಿಯೊಗಿಂತ ಈ ವೀಡಿಯೊ ವಿಸ್ತಾರವಾಗಿದೆ. ಈ ವೀಡಿಯೊದ ಆರಂಭದಲ್ಲಿ, ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅದೇ ವ್ಯಕ್ತಿ ಮೈಕ್ರೋಫೋನ್ ಹಿಡಿದುಕೊಂಡು ಬಾಂಗ್ಲಾದೇಶದ ದಿನಜ್‌ಪುರದಿಂದ ಮಾತನಾಡುತ್ತಿದ್ದೇನೆ ಎಂದು ಹೇಳುವುದನ್ನು ಕಾಣಬಹುದು.

ಈ ಸುಳಿಯನ್ನು ಹಿಡಿದುಕೊಂಡು,  ಈ ವ್ಯಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್ನೆಟ್ ನಲ್ಲಿ ಹುಡುಕಿದ್ದೇವೆ. ಆತನ  ಫೇಸ್ಬುಕ್  ಪ್ರೊಫೈಲ್ ಮತ್ತು ಯೂಟ್ಯೂಬ್  ಚಾನಲ್ ಅನ್ನು ಕಂಡುಕೊಂಡಿದ್ದೇವೆ. ಅವರ ಹೆಸರು ‘ಸೈಯದ್ ಇರ್ಷಾದ್ ಅಹ್ಮದ್ ಅಲ್ ಬುಖಾರಿ,’ ಮತ್ತು ಆತನ  ಫೇಸ್‌ಬುಕ್ ‘ಇಂಟ್ರೋ ‘ ಪ್ರಕಾರ, ಅವರು ಬಾಂಗ್ಲಾದೇಶದ ದಿನಜ್‌ಪುರದವರು ಮತ್ತು ಅಂತರರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರಾಗಿದ್ದಾರೆ.  ಅವರ ಯೂಟ್ಯೂಬ್  ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ಪೂರ್ಣ ಆವೃತ್ತಿಯನ್ನು ನೀವು ಇಲ್ಲಿ ನೋಡಬಹುದು (ಆರ್ಕೈವ್ ಲಿಂಕ್) (ಇಲ್ಲಿಯೂ ಕೂಡ ). ವೀಡಿಯೊದ ಶೀರ್ಷಿಕೆಯು ‘ಡಾ. ಸೈಯದ್ ಇರ್ಷಾದ್ ಬುಖಾರಿ ಬಾಂಗ್ಲಾದೇಶದ ವಿಲೆ ನರಸಿಂಹಾನಂದ ಸರಸ್ವತಿ ಅವರಿಗೆ ಮುಬಾಹಿಲಾ ಸವಾಲು,’ ಎಂದಿದೆ. ಇದು ಏಪ್ರಿಲ್  30,  2021 ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.

ವೀಡಿಯೊದಲ್ಲಿ, ಸಯೀದ್ ಇರ್ಷಾದ್  ಇಸ್ಲಾಂ ಧರ್ಮದ ಬಗ್ಗೆ ಭಾರತದ ಯತಿ ನರಸಿಂಹಾನಂದ ಸರಸ್ವತಿ ಅವರ ಆಪಾದಿತ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. ವೈರಲ್ ವೀಡಿಯೊದಲ್ಲಿ ಅವರು ಮಾತನಾಡಿದ ಸಾಲುಗಳು 1:35 ಮತ್ತು 7:00 ನಡುವೆ ಇದೆ. ಅವರು ಈ ಭಾಷಣ ಮಾಡಿದ್ದು ಬಾಂಗ್ಲಾದೇಶದ ದಿನಾಜ್‌ಪುರದಲ್ಲಿಯೇ ಹೊರತು ಭಾರತದಲ್ಲಿ ಅಲ್ಲ. ಈ ವಿಡಿಯೋದಲ್ಲಿ ಎಲ್ಲಿಯೂ ಅವರು ಕಾಂಗ್ರೆಸ್ ಅಥವಾ ಭಾರತದ ಚುನಾವಣೆಗಳ ಬಗ್ಗೆ ಮಾತನಾಡಿಲ್ಲ. ಪ್ರಾಮುಖ್ಯವಾಗಿ, ವೈರಲ್ ವೀಡಿಯೊದಲ್ಲಿ ಕೂಡ  ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿಲ್ಲ ಅಥವಾ ಆಪಾದಿತ ಹೇಳಿಕೆಯನ್ನು ನೀಡಲಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯು 2021 ರಲ್ಲಿ ಬಾಂಗ್ಲಾದೇಶದ ದಿನಜ್‌ಪುರದಲ್ಲಿ ಭಾಷಣ ಮಾಡಿದ್ದಾರೆ  ಹೊರತು ಭಾರತದಲ್ಲಲ್ಲ. ಈ ವೀಡಿಯೊಗೂ ಪ್ರಸ್ತುತ ನಡೆಯುತ್ತಿರುವ 2024 ರ ಚುನಾವಣೆಗಳಿಗೆ ಯಾವುದೇ ಸಂಬಂಧವಿಲ್ಲ.

Share.

Comments are closed.

scroll