Fake News - Kannada
 

2019 ರಲ್ಲಿ ದೆಹಲಿ ವಿಶೇಷ ದಳವು ತುಪ್ಪದ ಡಬ್ಬಿಗಳಲ್ಲಿ ಬಂದೂಕುಗಳನ್ನು ಇರಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂಬ ಹಳೆಯ ವೀಡಿಯೊದಲ್ಲಿ ಅವರು ಮುಸ್ಲಿಂ ಆರೋಪಿಗಳು ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

0

ಪೊಲೀಸರು ತುಪ್ಪದ ಡಬ್ಬಿಗಳಲ್ಲಿ ಗನ್ನನ್ನು ಅಡಗಿಸಿಟ್ಟ ಇಬ್ಬರು ಮುಸ್ಲಿಂ ಪುರುಷರನ್ನು ಹಿಡಿಯುವ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್: ತುಪ್ಪದ ಡಬ್ಬಿಗಳಲ್ಲಿ ಗನ್ ಬಚ್ಚಿಟ್ಟಿದ್ದ ಇಬ್ಬರು ಮುಸ್ಲಿಂರನ್ನು ಪೊಲೀಸರು ಹಿಡಿಯುತ್ತಿರುವುದನ್ನು ತೋರಿಸುತ್ತಿರುವ ವೀಡಿಯೊ.

ಫ್ಯಾಕ್ಟ್: ವೈರಲ್ ಆಗಿರುವ ಈ ವೀಡಿಯೊ ಸೆಪ್ಟೆಂಬರ್ 23, 2019 ರದ್ದು.  ದೆಹಲಿ ಪೊಲೀಸ್ ವಿಶೇಷ ದಳವು ಘಾಜಿಪುರ ಪ್ರದೇಶದಲ್ಲಿ ಜಿತೇಂದ್ರ ಮತ್ತು ರಾಜ್ ಬಹದ್ದೂರ್ ಎಂಬ ಇಬ್ಬರು ವ್ಯಕ್ತಿಗಳು ತುಪ್ಪದ ಡಬ್ಬಿಗಳಲ್ಲಿ 26 ಗನ್ಗಳನ್ನು ಅಡಗಿಸಿಟ್ಟಿದ್ದಕ್ಕಾಗಿ ಬಂಧಿಸಿದ್ದಾರೆ. ವಿಶೇಷ ದಳದ ಡಿಸಿಪಿ ಪ್ರಮೋದ್ ಕುಶ್ವಾಹ ಆರೋಪಿಗಳನ್ನು ಗುರುತಿಸಿ, ಇವರು ಮಧ್ಯಪ್ರದೇಶದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ತಡೆದು ದೊಡ್ಡ ತುಪ್ಪದ ಡಬ್ಬಿಗಳಲ್ಲಿ  ಅದ್ದಿದ ಗನ್ಗಳನ್ನು ಸೆರೆಹಿಡಿದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಆರೋಪಿಗಳು ಮುಸ್ಲಿಮರಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ಇದನ್ನು ಪರಿಶೀಲಿಸಲು ನಾವು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ, ಸೆಪ್ಟೆಂಬರ್ 2019 ರ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡ NDTV ವರದಿ (ಆರ್ಕೈವ್) ಕಂಡುಬಂದಿದೆ. ವರದಿಯ ಪ್ರಕಾರ, ದೆಹಲಿ ಪೊಲೀಸ್ ವಿಶೇಷ ಘಟಕವು ಘಾಜಿಪುರ ಪ್ರದೇಶದಲ್ಲಿ 26 ಪಿಸ್ತೂಲ್‌ಗಳನ್ನು ತುಪ್ಪದ ಡಬ್ಬಿಗಳಲ್ಲಿ ಅಡಗಿಸಿಟ್ಟಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಬಗ್ಗೆ ಮಾಹಿತಿಯ ಮೇರೆಗೆ, ಸೆಪ್ಟೆಂಬರ್ 23, 2019 ರಂದು, ಪೊಲೀಸರು ವಾಹನವನ್ನು ತಡೆದು ದೊಡ್ಡ ಡಬ್ಬಿಗಳ ಒಳಗೆ ತುಪ್ಪದಲ್ಲಿ ಅಡಗಿಸಿಟ್ಟಿದ್ದ ಗನ್ ಗಳನ್ನು ಪತ್ತೆ ಮಾಡಿದ್ದಾರೆ. 

ಸೆಪ್ಟೆಂಬರ್ 27, 2019 ರಂದು  ದಿಲ್ಲಿ ತಕ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ಘಟಕದ ಡಿಸಿಪಿ ಪ್ರಮೋದ್ ಕುಶ್ವಾಹ ಅವರನ್ನು ಒಳಗೊಂಡ ವೀಡಿಯೊ (ಆರ್ಕೈವ್) ನಮಗೆ ಲಭಿಸಿದೆ. ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಬಗ್ಗೆ ಪೊಲೀಸರಿಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23, 2019 ರಂದು ಬಂಧಿತರಾದ ಜಿತೇಂದ್ರ ಮತ್ತು ರಾಜ್ ಬಹದ್ದೂರ್ ಆರೋಪಿಗಳೆಂದು ಗುರುತಿಸಿದ್ದಾರೆ.  ಕಾರ್ಯಾಚರಣೆಯಲ್ಲಿ  ಸಮಯದಲ್ಲಿ, ಘಾಜಿಪುರದಲ್ಲಿ ಮಹೀಂದ್ರಾ ಬೊಲೆರೊವನ್ನು ನಿಲ್ಲಿಸಲಾದ ವಾಹನದಿಂದ ಎರಡು ತುಪ್ಪದ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಯಿತು. ತಪಾಸಣೆಯ ಸಮಯದಲ್ಲಿ, ತುಪ್ಪದಲ್ಲಿ ಅಡಗಿಸಿಟ್ಟಿದ್ದ  26 ಗನ್ಗಳನ್ನು ಮತ್ತು ಮ್ಯಾಗಜೀನ್‌ಗಳನ್ನು ಸೆರೆಹಿಡಿಯಲಾಯಿತು. 

ಈ ಘಟನೆಗೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಜಿತೇಂದ್ರ ಮತ್ತು ರಾಜ್ ಬಹದ್ದೂರ್ ಅವರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು (ಸಿಎನ್‌ಆರ್ ಸಂಖ್ಯೆ ಡಿಎಲ್‌ಎನ್‌ಡಿ020285402019) ಪ್ರಾರಂಭಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ವಿಶೇಷ ದಳವು ತುಪ್ಪದ ಡಬ್ಬಿಗಳಲ್ಲಿ ಗನ್  ಇರಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ 2019 ರ ಹಳೆಯ ವೀಡಿಯೊ ಮತ್ತು ಅದರಲ್ಲಿರುವ ಆರೋಪಿಗಳು ಮುಸ್ಲಿಮರು ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll