Fake News - Kannada
 

ಸೋನಿಯಾ ಗಾಂಧಿ ಸಿಗರೇಟ್ ಹಿಡಿದಿರುವ ಈ ವೈರಲ್ ಫೋಟೋವನ್ನು AI ಫೇಸ್ ಸ್ವಾಪ್ ಟೂಲ್ ಬಳಸಿ ಮಾರ್ಫ್ ಮಾಡಲಾಗಿದೆ

0

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಕಿರಿಯ ವಯಸ್ಸಿನಲ್ಲಿ ಸಿಗರೇಟ್ ಹಿಡಿದಿರುವುದನ್ನು ತೋರಿಸುವ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ, ವೈರಲ್ ಫೋಟೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಕ್ಲೇಮ್ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ತಮ್ಮ ಯೌವನದಲ್ಲಿ ಸಿಗರೇಟ್ ಹಿಡಿದಿರುವ ಫೋಟೋ.

ಫ್ಯಾಕ್ಟ್ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಇಳೆಯ ವಯಸ್ಸಿನಲ್ಲಿ ಸಿಗರೇಟ್ ಹಿಡಿದಿರುವ ಈ ವೈರಲ್ ಫೋಟೋವನ್ನು ಮಾರ್ಫ್ ಮಾಡಲಾಗಿದೆ. ರಿಯಲ್ ಚಿತ್ರದಲ್ಲಿ ಸೋನಿಯಾ ಗಾಂಧಿಯವರ ಮುಖವಿಲ್ಲ. ‘ರೀಮೇಕರ್’ ಹೆಸರಿನ AI ಫೇಸ್-ಸ್ವಾಪಿಂಗ್ ಟೂಲ್ ಅನ್ನು ಬಳಸಿಕೊಂಡು ಅವರ ಮುಖವನ್ನು ಬದಲಾಯಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಫೋಟೋವನ್ನು ಸರಿಯಾಗಿ ಗಮನಿಸಿದಾಗ, ಕೆಳಗೆ  ಎಡ ಬದಿಯ ಮೂಲೆಯಲ್ಲಿ ‘ರೀಮೇಕರ್‘ ಎನ್ನುವ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ‘ರೀಮೇಕರ್’ ಎಂದು ನಾವು ಗೂಗಲ್ ನಲ್ಲಿ ಹುಡುಕಿದಾಗ ‘ರೀಮೇಕರ್’ ಒಂದು AI ಎಡಿಟಿಂಗ್ ಟೂಲ್ ಮತ್ತು ಫೇಸ್ ಸ್ವಾಪ್ ಆನ್ಲೈನ್ ಸಾಧನವಾಗಿದ್ದು, ವಿವಿಧ ವೈಶಿಷ್ಟಗಳನ್ನು ಒಳಗೊಂಡಿದೆ. ಈ ಉಚಿತ ಆನ್‌ಲೈನ್ ಫೇಸ್ ಚೇಂಜರ್ ಬಳಕೆದಾರರಿಗೆ ಮಾನವನ ತಲೆಯನ್ನು ಬದಲಾಯಿಸಲು ಮತ್ತು ಫೋಟೋಗಳಲ್ಲಿ ಮುಖಗಳನ್ನು ಬದಲಾಯಿಸಬಹುದಾಗಿದೆ. ಈ ವೈರಲ್ ಚಿತ್ರವನ್ನು ಬಹುಶಃ ಈ ಫೇಸ್-ಸ್ವಾಪಿಂಗ್ ಉಪಕರಣವನ್ನು ಬಳಸಿಕೊಂಡು ರಚಿಸಲಾಗಿದೆ ಎಂದು ಸೂಚಿಸುತ್ತದೆ, ಸೋನಿಯಾ ಗಾಂಧಿಯವರ ಮುಖವನ್ನು ರಿಯಲ್ ಫೇಸ್ ನೊಂದಿದೆ ಮಾರ್ಫ್ ಮಾಡಲಾಗಿದೆ.

ನಂತರ ನಾವು ಮೂಲ ಫೋಟೋವನ್ನು ಪತ್ತೆಹಚ್ಚಲು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ನಮ್ಮನ್ನು   ಫೆಬ್ರವರಿ 26, 2013 ರಂದು ‘Tumblr’ ನಲ್ಲಿ ಅಪ್‌ಲೋಡ್ ಮಾಡಿದ ಫೋಟೋಗೆ ಕರೆದೊಯ್ಯಿತು. ಮುಖವನ್ನು ಹೊರತುಪಡಿಸಿ್ದಾರೆ ಈ ಚಿತ್ರ  ವೈರಲ್ ಫೋಟೋವನ್ನು ಹೋಲುತ್ತದೆ. ಚಿತ್ರದ ಕೆಳಗೆ,  ‘ಗಜಲೆ ಫೋಟೋಗ್ರಾಫೆಡ್ ಬೈ  ಫರ್ಜಾದ್ ಸರ್ಫರಾಜಿ, 2012.’ ಎಂಬ ಟೈಟಲ್ ಇದೆ. ಈ Tumblr ಫೋಟೋದೊಂದಿಗೆ ವೈರಲ್ ಫೋಟೋದ ಹೋಲಿಕೆಯನ್ನು ಕೆಳಗೆ ನೋಡಬಹುದು.

ತುಂಬಾ ಜನ ಉಸೆರ್ಸ್ ಈ ಫೋಟೋಗ್ರಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದನ್ನು ಫರ್ಜಾದ್ ಸರ್ಫರಾಜಿಗೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹೋಲಿಸಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ, ಸೋನಿಯಾ ಗಾಂಧಿಯವರು ಇಳೆಯ ವಯಸ್ಸಿನಲ್ಲಿ ಸಿಗರೇಟ್ ಹಿಡಿದಿರುವುದನ್ನು ತೋರಿಸುವ ಈ ಫೋಟೋವನ್ನು ‘ರೀಮೇಕರ್’ ಹೆಸರಿನ AI ಫೇಸ್ ಸ್ವಾಪ್ ಟೂಲ್ ಬಳಸಿ ಡಿಜಿಟಲ್ ಮಾರ್ಫ್ ಮಾಡಲಾಗಿದೆ ಎಂಬುವುದು ಸ್ಪಷ್ಟವಾಗಿದೆ.

Share.

Comments are closed.

scroll