ರಾಜಸ್ಥಾನದ ಬಾರ್ಮರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನಾ ಮಹಿಳೆಯರು 48°C ಬಿಸಿಲಿನಲ್ಲಿ ಕುಳಿತು ಆಹಾರ ಸೇವಿಸುತ್ತಿರುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಪಾಕಿಸ್ತಾನ ಗಡಿಯಲ್ಲಿ 48° ತಾಪಮಾನದಲ್ಲಿ ಊಟ ಮಾಡುತ್ತಿರುವ ಭಾರತೀಯ ಮಹಿಳಾ ಸೈನಿಕರ ಫೋಟೋ
ಫ್ಯಾಕ್ಟ್: ಇದು ಎಐ-ರಚಿಸಿದ ಚಿತ್ರವಾಗಿದೆಯೋ ಹೊರತು ಭಾರತೀಯ ಸೈನಿಕರು ಬಿಸಿನಲ್ಲಿ ಕುಳಿತು ಆಹಾರ ಸೇವಿಸುತ್ತಿರುವ ನಿಜವಾದ ಫೋಟೋ ಅಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಮೊದಲಿಗೆ, ಈ ಫೋಟೋ ಕುರಿತು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಯಾವುದಾದರು ಸುದ್ದಿ ವರದಿಗಳಿವೆಯೇ ಎಂದು ತಿಳಿದುಕೊಳ್ಳಲು ನಾವು ಇಂಟರ್ನೆಟ್‌ನಲ್ಲಿ ಹುಡುಕಾಡಿದೆವು, ಆದರೆ ಯಾವುದೇ ರೀತಿಯ ಸುದ್ದಿಯು ಇತರ ಕುರಿತಾಗಿ ವರದಿಯಾಗಿದ್ದು ಕಂಡುಬಂದಿಲ್ಲ.
ನಂತರ, ವೈರಲ್ ಫೋಟೋವನ್ನು ಸ್ಪಷ್ಟವಾಗಿ ಗಮನಿಸಿದಾಗ, ಅನೇಕ ವ್ಯತ್ಯಾಸಗಳಿರುವುದು ನಮಗೆ ಕಂಡುಬಂದಿದೆ. ಕೃತಕ ಬುದ್ಧಿ(ಆರ್ಟಿಫಿಷಿಯಲ್ ಇಂಟೆಲ್ಲೆಗೆನ್ಸ್) /AI (ಇಲ್ಲಿ, ಇಲ್ಲಿ) ರಚಿತವಾದ ಚಿತ್ರಗಳಲ್ಲಿ ಇಂತಹ ವ್ಯತ್ಯಾಸಗಳು ಸಾಮಾನ್ಯವಾಗಿ ಗಮನಿಸಬಹುದಾಗಿದೆ.
ವೈರಲ್ ಫೋಟೋದಲ್ಲಿನ ವ್ಯತ್ಯಾಸಗಳನ್ನು ಗಮನಿಸೋಣ. ಮೊದಲನೆಯದಾಗಿ, ಇಲ್ಲಿ ಕುಳಿತಿರುವ ಮಹಿಳಾ ಸೈನಿಕರ ಹಿಂದೆ ನಡೆದುಕೊಂಡು ಬರುತ್ತಿರುವ ಸೈನಿಕರ/ಅಧಿಕಾರಿಗಳ ನೆರಳುಗಳು ಚಿತ್ರದಲ್ಲಿ ಸಂಪೂರ್ಣವಾಗಿ ಕಾಣಿಸುತ್ತಿಲ್ಲ. ಮಹಿಳಾ ಸೈನಿಕರ ಮಧ್ಯದಲ್ಲಿ ಕುಳಿತಿರುವ ವ್ಯಕ್ತಿಯ ಎಡಗೈ, ಭಾಗಶಃ ತಾನು ಹಿಡಿದಿರುವ ಬೌಲ್ ನಿಂದ ಆವೃತಕೊಂಡಿದೆ. ಸಾಮಾನ್ಯವಾಗಿ, AI ನಿಂದ ರಚಿಸಲಾದ ಚಿತ್ರಗಳಲ್ಲಿ ಕೈಗಳು, ಪಾದಗಳು ಮತ್ತು ಬೆರಳುಗಳನ್ನು ಸರಿಯಾಗಿ ಮಾಡಿಲ್ಲ.
ಇದಲ್ಲದೆ, ಚಿತ್ರದ ಎಡಭಾಗದಲ್ಲಿ ಕುಳಿತಿರುವ ಮುಂದಿನ ಸಾಲಿನ ಸೈನಿಕನ ಭುಜದ ಮೇಲೆ ಕಾಣಸಿಗುವ ಭಾರತೀಯ ಭಾವುಟದ ಚಿತ್ರವು ವಿಭಿನ್ನವಾಗಿದೆ. ಭಾರತೀಯ ಧ್ವಜದಲ್ಲಿ ಇರುವ ಮೂರು ಬಣ್ಣಗಳ ಬದಲಾಗಿಯೂ ಬೇರೆಯೇ ಬಣ್ಣಗಳು ಮತ್ತು ವಿಭಿನ್ನ ಶೈಲಿಯನ್ನು ಕಾಣಬಹುದಾಗಿದೆ. ಕೊನೆಯದಾಗಿ, ಈ ಸೈನಿಕನ ಮುಂದೆ ಕುಳಿತಿರುವ ಇನ್ನೊಬ್ಬ ಸೈನಿಕನಿಗೆ ಮೂರು ಕೈಗಳಿರುವುದನ್ನು ಇಲ್ಲಿ ಕಾಣಬಹುದು.
ಹೆಚ್ಚುವರಿಯಾಗಿ, ‘ಹೈವ್’ ಮತ್ತು ‘ಟ್ರೂ ಮೀಡಿಯಾ’ ನಂತಹ AI-ಇಮೇಜ್ ಪತ್ತೆ ಸಾಧನಗಳ ಮೂಲಕ ನಾವು ಈ ಚಿತ್ರವನ್ನು ರನ್ ಮಾಡಿದ್ದೇವೆ. ಈ ಚಿತ್ರಗಳನ್ನು AI ಬಳಸಿ ರಚಿಸಲಾಗಿದೆ ಎಂದು ಅವರು ಖಚಿತಪಡಿಸಿದರು.
ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಬಿಸಿಲಿಗೆ ಭಾರತೀಯ ಮಹಿಳಾ ಸೈನಿಕರು ಆಹಾರವನ್ನು ಸೇವಿಸುವ ನೈಜ ಫೋಟೋ ಎಂದು ಹೇಳಲಾಗುತ್ತಿರುವ ಈ ಚಿತ್ರ AI- ರಚಿತವಾಗಿದೆ.