Fake News - Kannada
 

ವೈರಲ್ ದೃಶ್ಯಗಳು ಗಾಂಧಿ ಸಿನಿಮಾದಲ್ಲ, ‘ವೀರ್ ಸಾವರ್ಕರ್ ಚಿತ್ರದ್ದು

0

1982 ರ ‘ಗಾಂಧಿ’ ಸಿನಿಮಾದಲ್ಲಿ ಮಹಾತ್ಮ ಗಾಂಧಿಯವರು ವೀರ್ ಸಾವರ್ಕರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ದೃಶ್ಯ ಎಂದು ಹೇಳುವ ವೀಡಿಯೊ ಕ್ಲಿಪ್ಪಿಂಗ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಹಾತ್ಮ ಗಾಂಧಿಯವರೊಂದಿಗಿನ ಜಾತಿ ವ್ಯವಸ್ಥೆ, ಧಾರ್ಮಿಕ ಮತಾಂತರಗಳು ಮತ್ತು ಅಹಿಂಸಾ ಚಳುವಳಿಯ ಬಗ್ಗೆ ಸಾವರ್ಕರ್ ಅವರು ತಮ್ಮ ಭಿನ್ನಾಭಿಪ್ರಾಯವನ್ನು ಬಲವಾಗಿ ವ್ಯಕ್ತಪಡಿಸುವ ದೃಶ್ಯಗಳು ಎಂದು ಪ್ರತಿಪಾದಿಸಲಾಗಿದೆ. ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಲನಚಿತ್ರವು ಹಿಂದೂ ಧರ್ಮದ ಬಗ್ಗೆ ಸಾವರ್ಕರ್ ಅವರ ಬಲವಾದ ದೃಷ್ಟಿಕೋನಗಳನ್ನು ಎದುರಿಸುವಲ್ಲಿ ಗಾಂಧಿಯವರ ಆತ್ಮವಿಶ್ವಾಸದ ಕೊರತೆಯನ್ನು ಚಿತ್ರಿಸಿದೆ ಎಂದು ಈ ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ

ಪ್ರತಿಪಾದನೆ: 1982 ರ ‘ಗಾಂಧಿ’ ಚಿತ್ರದ ಮಹಾತ್ಮ ಗಾಂಧಿ ಮತ್ತು ಸಾವರ್ಕರ್ ಅವರ ಸಂಭಾಷಣೆಯ ದೃಶ್ಯವನ್ನು ವೀಡಿಯೊ ತೋರಿಸುತ್ತದೆ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು 2001 ರಲ್ಲಿ ಬಿಡುಗಡೆಯಾದ ‘ವೀರ್ ಸಾವರ್ಕರ್’ ಚಿತ್ರದ ಕ್ಲಿಪ್ಪಿಂಗ್ ಅನ್ನು ತೋರಿಸುತ್ತದೆ. ಆ ಚಿತ್ರಕ್ಕೂ 1982 ರಲ್ಲಿ ಬಿಡುಗಡೆಯಾದ ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಲನಚಿತ್ರಕ್ಕೂ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸಿನಿಮಾ ದೃಶ್ಯಗಳ ಕ್ಲಿಪ್‍ಅನ್ನು ಸ್ಕ್ರೀನ್‍ಶಾಟ್‍ನೊಂದಿಗೆ ಗೂಗಲ್ ರಿವರ್ಸ್ ಇಮೇಜ್‍ ಸರ್ಚ್ ಮಾಡಿದಾಗ, ಏಪ್ರಿಲ್ 2011 ರಲ್ಲಿ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ವೀಡಿಯೊದ ವಿವರಣೆಯು ಹೀಗೆ ಹೇಳುತ್ತದೆ, “ವಿನಾಯಕ ದಾಮೋದರ್ ಸಾವರ್ಕರ್ ಅವರು ರತ್ನಗಿರಿಯಲ್ಲಿ ಮಹಾತ್ಮ ಗಾಂಧಿಯನ್ನು ಭೇಟಿಯಾಗುತ್ತಾರೆ. ವೀರ್ ಸಾವರ್ಕರ್ ಚಿತ್ರದ ಕ್ಲಿಪ್” ಎಂದು ಬರೆದಿದೆ. ನಾವು ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಕಟವಾದ ‘ವೀರ್ ಸಾವರ್ಕರ್’ ಚಿತ್ರದ ಸಂಪೂರ್ಣ ಆವೃತ್ತಿಯಲ್ಲಿ ಅದೇ ದೃಶ್ಯಗಳೊಂದಿಗೆ ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೇದ್ ರಾಹಿ ನಿರ್ದೇಶನದ ‘ವೀರ್ ಸಾವರ್ಕರ್‘ ಚಲನಚಿತ್ರವು 2001 ರಲ್ಲಿ ಬಿಡುಗಡೆಯಾಯಿತು. ‘ವೀರ್ ಸಾವರ್ಕರ್’ ಚಿತ್ರದ ಪಾತ್ರವರ್ಗದ ವಿವರವಾದ ಪಟ್ಟಿಯನ್ನು ಲ್ಲಿ ನೋಡಬಹುದು.

ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ‘ ಚಲನಚಿತ್ರವು 1982 ರಲ್ಲಿ ಬಿಡುಗಡೆಯಾಯಿತು. ಮಹಾತ್ಮ ಗಾಂಧಿ ಮತ್ತು ಹಿಂದೂ ಬಲಪಂಥೀಯ ಕಾರ್ಯಕರ್ತರ ನಡುವಿನ ಸಂಭಾಷಣೆಯನ್ನು ‘ಗಾಂಧಿ’ ಚಲನಚಿತ್ರದಿಂದ ಇಲ್ಲಿ ನೋಡಬಹುದು. ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಿತ್ರದಲ್ಲಿ ಬೆನ್ ಕಿಂಗ್ಸ್ಲಿ ಮಹಾತ್ಮ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ, ‘ವೀರ್ ಸಾವರ್ಕರ್’ ಚಿತ್ರದಲ್ಲಿ ಬೆನ್ ಕಿಂಗ್ಸ್ಲಿ ಅದೇ ಪಾತ್ರವನ್ನು ನಿರ್ವಹಿಸಲಿಲ್ಲ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ವೇದ್ ರಾಹಿ ನಿರ್ದೇಶನದ ವೀರ್ ಸಾವರ್ಕರ್ ಚಲನಚಿತ್ರದ ದೃಶ್ಯಗಳು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ 1982 ರಲ್ಲಿ ಬಿಡುಗಡೆಯಾದ ಗಾಂಧಿ ಚಲನಚಿತ್ರಕ್ಕೂ ಈ ದೃಶ್ಯಕ್ಕೂ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ‘ವೀರ್ ಸಾವರ್ಕರ್’ ಚಿತ್ರದ ಮಹಾತ್ಮ ಗಾಂಧಿ ಮತ್ತು ವೀರ್ ಸಾವರ್ಕರ್ ಅವರ ಸಂಭಾಷಣೆಯನ್ನು ತೋರಿಸುವ ದೃಶ್ಯವನ್ನು 1982 ರ ‘ಗಾಂಧಿ’ ಚಲನಚಿತ್ರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll