Fake News - Kannada
 

ಅಲಹಾಬಾದ್ ರೈಲ್ವೆ ಸೇತುವೆ ಕೆಳದಾರಿಯನ್ನು (ಅಂಡರ್‌ಪಾಸ್) ಪಿಎಂ ಮೋದಿಯವರ ಕ್ಷೇತ್ರ ವಾರಣಾಸಿಯ ರಸ್ತೆಯ ಸ್ಥಿತಿಯೆಂದು ತಪ್ಪಾಗಿ ಚಿತ್ರಿಸಲಾಗಿದೆ

0

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿನ ರಸ್ತೆಗಳ ಸ್ಥಿತಿ ಎಂದು ಹೇಳಿಕೊಂಡು ಮೊಣಕಾಲು ಮಟ್ಟದವರೆಗೆ ಮಳೆನೀರು ತುಂಬಿರುವ ರಸ್ತೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರ ಫೋಟೋಗಳಿರುವ ಬ್ಯಾನರ್ ಅನ್ನು ರಸ್ತೆಯ ಪಕ್ಕದಲ್ಲಿ ಕಾಣಬಹುದು. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದಎಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿ ಮೊಣಕಾಲು ಮಟ್ಟದ ಮಳೆನೀರು ತುಂಬಿದ ರಸ್ತೆಯ ಫೋಟೋ.

ನಿಜಾಂಶ: ಆಗಸ್ಟ್ 2018 ರಲ್ಲಿ, ಅಲಹಾಬಾದ್ ನಗರದ ರೈಲ್ವೆ ಸೇತುವೆ ಕೆಳದಾರಿಯಲ್ಲಿ ಮಳೆನೀರು ಮೊಣಕಾಲು ಮಟ್ಟದಷ್ಟು ತುಂಬಿತ್ತು. ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಅಲಹಾಬಾದ್ ನಗರದಲ್ಲಿ ಮಳೆಯ ಸಮಯದಲ್ಲಿ ತೆಗೆಯಲಾಗಿದೆ ಮತ್ತು ಇದು ಪ್ರಧಾನಿ ಮೋದಿಯ ಕ್ಷೇತ್ರ ವಾರಣಾಸಿಗೆ ಸಂಬಂಧಿಸಿಲ್ಲ. ಬಿಜೆಪಿ ಮುಖಂಡರಾದ ರೀಟಾ ಬಹುಗುಣ ಜೋಶಿ ಅಲಹಾಬಾದ್ ಕ್ಷೇತ್ರದಿಂದ ಚುನಾಯಿತ ಲೋಕಸಭಾ ಸದಸ್ಯರಾಗಿದ್ದಾರೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿ ಹಂಚಿಕೊಂಡ ಫೋಟೋದ ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ‘ಪತ್ರಿಕಾ’ ಪತ್ರಿಕೆ ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಆ ಲೇಖನದಲ್ಲಿ, ಫೋಟೋ ಉತ್ತರ ಪ್ರದೇಶದ ಅಲಹಾಬಾದ್ ನಗರದ ರೈಲ್ವೆ ಸೇತುವೆ ಕೆಳದಾರಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. 2018 ರ ಮಳೆಗಾಲದಲ್ಲಿ ರೈಲ್ವೆ ಸೇತುವೆ ಕೆಳದಾರಿಯಲ್ಲಿ ಮಳೆನೀರು ತುಂಬಿತ್ತು ಎಂದು ಹೇಳಲಾಗಿದೆ. ಬಿಜೆಪಿ ಮುಖಂಡರಾದ ರೀಟಾ ಬಹುಗುಣ ಜೋಶಿ ಅಲಹಾಬಾದ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದ್ದರಿಂದ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಗೆ ಸಂಬಂಧಿಸಿಲ್ಲ.

‘ಪತ್ರಿಕಾ’ ಪ್ರಕಟಿಸಿದ ಲೇಖನದಲ್ಲಿ ಈ ಛಾಯಾಚಿತ್ರವನ್ನು ರಾಜೇಶ್ ಕುಮಾರ್ ಸಿಂಗ್ ಕ್ಲಿಕ್ಕಿಸಿದ್ದಾರೆ ಎಂದು ಬರೆಯಲಾಗಿದೆ. ಈ ಕೀವರ್ಡ್ ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ನಾವು ಹುಡುಕಿದಾಗ, ಅದೇ ಫೋಟೋವನ್ನು ‘ಎಪಿ ಇಮೇಜಸ್’ ಜಾಲತಾಣದಲ್ಲಿ ನಾವು ಕಂಡುಕೊಂಡಿದ್ದೇವೆ. ‘ಎಪಿ ಇಮೇಜ್’ನ ಜಾಲತಾಣದಲ್ಲಿ ಕೂಡ ಫೋಟೋ ಉತ್ತರ ಪ್ರದೇಶದ ಅಲಹಾಬಾದ್ ನಗರದ ರೈಲ್ವೆ ಸೇತುವೆ ಕೆಳದಾರಿಗೆ ಸಂಬಂಧಿಸಿದ್ದೆಂದು ಹೇಳಲಾಗಿದೆ. ಆದ್ದರಿಂದ, ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಚಿತ್ರ ಪ್ರಧಾನಿ ಮೋದಿಯವರ ಕ್ಷೇತ್ರ ವಾರಣಾಸಿಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಲಹಾಬಾದ್ ನಗರದಲ್ಲಿ ರೈಲ್ವೆ ಸೇತುವೆ ಕೆಳದಾರಿಯ (ಅಂಡರ್‌ಪಾಸ್) ಫೋಟೋವನ್ನು ಪಿಎಂ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿ ರಸ್ತೆಗಳ ಸ್ಥಿತಿ ಎಂದು ತಪ್ಪಾಗಿ ಚಿತ್ರಿಸಲಾಗಿದೆ.

Share.

About Author

Comments are closed.

scroll