Fake News - Kannada
 

ಪ್ರಯಾಗರಾಜ್ ನಗರದಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಬಿಡಿಸಿದ ಮನೆಗಳು ಮತ್ತು ಸೇತುವೆಯ ಕಂಬಗಳ ಛಾಯಾಚಿತ್ರಗಳನ್ನು ಅಯೋಧ್ಯೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ರಾಮ ಮಂದಿರದ ಭೂಮಿಪೂಜೆಯ ಸಿದ್ಧತೆಗಳ ಅಂಗವಾಗಿ ಅಯೋಧ್ಯೆಯನ್ನು ಕೇಸರಿ ಬಣ್ಣದಿಂದ ತುಂಬುತ್ತಿದ್ದಾರೆ ಎಂದು ಹೇಳಿಕೊಂಡು ಕೆಲವು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಛಾಯಾಚಿತ್ರಗಳು ಹಿಂದೂ ದೇವತೆಗಳ ಚಿತ್ರಗಳನ್ನು ಬಿಡಿಸಿದ ಮನೆಗಳ ಕಟ್ಟಡ ಮತ್ತು ಸೇತುವೆಯ ಕಂಬಗಳನ್ನು ತೋರಿಸುತ್ತವೆ. ರಾಮ ದೇವಸ್ಥಾನಕ್ಕೆ ‘ಭೂಮಿಪೂಜೆ’ ನಡೆಸಲು ಪ್ರಧಾನಿ ಮೋದಿ ಅವರು ‘ಆಗಸ್ಟ್ 5, 2020’ ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ರಾಮ ದೇವಾಲಯದ ‘ಭೂಮಿಪೂಜೆ’ ಕಾರ್ಯಕ್ರಮದ ಸಿದ್ಧತೆಯ ಭಾಗವಾಗಿ ಅಯೋಧ್ಯೆಯಲ್ಲಿನ ಮನೆಗಳು ಮತ್ತು ಸೇತುವೆಯ ಕಂಬಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ ಎನ್ನುವ ಛಾಯಾಚಿತ್ರಗಳು.

ನಿಜಾಂಶ: ಮನೆಗಳು ಮತ್ತು ಸೇತುವೆಯ ಕಂಬಗಳ ಮೇಲೆ ಹಿಂದೂ ದೇವತೆಗಳ ಚಿತ್ರ ಬಿಡಿಸಿರುವ ಛಾಯಾಚಿತ್ರಗಳು ಅಯೋಧ್ಯೆಯವಲ್ಲ ಬದಲಾಗಿ ಪ್ರಯಾಗರಾಜ್ (ಅಲಹಾಬಾದ್) ಪಟ್ಟಣದ್ದು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಹೇಳಿಕೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಸರ್ಚ್ ತಂತ್ರವನ್ನು ಬಳಸಿ, ಅದಕ್ಕೆ ನಾವು ಫೋಟೋಗಳನ್ನು ಒಳಪಡಿಸಿದಾಗ, ಅದು ಪ್ರಯಾಗರಾಜ್ ನಗರದ ಮನೆಗಳು ಮತ್ತು ಸೇತುವೆಯ ಕಂಬಗಳ ಮೇಲೆ ಹಿಂದೂ ದೇವತೆಗಳ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆಯೆಂದು ದೃಢಪಡಿಸುವ ವರದಿಗಳು ಕಂಡುಬAದವು.

ಫೋಟೋ -1:

ಈ ಫೋಟೋವನ್ನು ‘ಔಟ್‌ಲುಕ್’ ಲೇಖನದಲ್ಲಿ ನೋಡಬಹುದು. ಫೋಟೋದ ವಿವರಣೆಯಲ್ಲಿ, ಅದು ಹಿಂದೂ ದೇವತೆಗಳ ಚಿತ್ರಗಳನ್ನು ಬರೆದಿರುವ ಪ್ರಯಾಗರಾಜ್‌ನಲ್ಲಿರುವ ಮನೆಗಳೆಂದು ಹೇಳಲಾಗಿದೆ.

ಫೋಟೋ -2:

ಫೋಟೋದಲ್ಲಿ ಕಂಡುಬರುವ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಯಾಗರಾಜ್ ನಲ್ಲಿರುವ ಮನೆಗಳ ಗೋಡೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಬಿಡಿಸಿರುವ ಬಗ್ಗೆ ಎನ್ ಡಿ ಟಿವಿಯ ಸುದ್ದಿ ವಿಡಿಯೋದಲ್ಲಿ ನೋಡಬಹುದು. ‘ಎಎನ್ಐ ಯುಪಿ’ ಟ್ವೀಟ್ ನಲ್ಲೂ ಇದೇ ರೀತಿಯ ಫೋಟೋವನ್ನು ಕಾಣಬಹುದು.

ಫೋಟೋ -3:

ಮಾಲೀಕರ ಒಪ್ಪಿಗೆಯಿಲ್ಲದೆ ಪ್ರಯಾಗರಾಜ್ ನ ಒಂದು ಬೀದಿಯಲ್ಲಿ ಮನೆಗಳಿಗೆ ಕೇಸರಿ ಬಣ್ಣ ಬಳಿದು, ಚಿತ್ರಗಳನ್ನು ಬಿಡಿಸಿದ್ದಾರೆಂದು ದೂರುಗಳು ದಾಖಲಾಗುತ್ತಿರುವ ಬಗ್ಗೆ ಮಾಹಿತಿಯನ್ನು ಹೊಂದಿರುವ ‘ಎಎನ್‌ಐ ಯುಪಿ’ ಟ್ವೀಟ್‌ನಲ್ಲಿ ಈ ಫೋಟೋವನ್ನು ನೋಡಬಹುದು.

ಫೋಟೋ -4:

ಕುಂಭಮೇಳ ಉತ್ಸವದ ‘ಪೇಂಟ್ ಮೈ ಸಿಟಿ’ (ನನ್ನ ನಗರಕ್ಕೆ ಬಣ್ಣ ಹಚ್ಚಿ) ಯೋಜನೆಯ ಭಾಗವಾಗಿ ಚಿತ್ರ ಬರೆದಿರುವ ಅಲಹಾಬಾದಿನ(ಪ್ರಯಾಗರಾಜ್) ಶಾಸ್ತ್ರಿ ಸೇತುವೆಯ ಕಂಬಗಳನ್ನು ಫೋಟೋ ತೋರಿಸುತ್ತದೆ ಎಂಬ ವಿವರಣೆಯೊಂದಿಗೆ ಫೋಟೋವನ್ನು ‘ಗೆಟ್ಟಿ ಇಮೇಜಸ್’ ಜಾಲತಾಣದಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಯಾಗರಾಜ್ ನಗರದಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಬಿಡಿಸಿರುವ ಮನೆಗಳು ಮತ್ತು ಸೇತುವೆಯ ಕಂಬಗಳ ಛಾಯಾಚಿತ್ರಗಳನ್ನು ಅಯೋಧ್ಯೆಯದೆಂದು  ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll