Fake News - Kannada
 

ಫ್ಲೈಟ್ ಸಿಮ್ಯುಲೇಶನ್ ವೀಡಿಯೊವನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತಗೊಳ್ಳುವುದಕ್ಕೆ ಸ್ವಲ್ಪ ಮುಂಚಿನ ಹಾರಟದ ದೃಶ್ಯ ಎಂದು ಹಂಚಿಕೊಳ್ಳಲಾಗಿದೆ

0

ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟದ ದೃಶ್ಯಗಳನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಒಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸುವ ಮುನ್ನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಕೊನೆಯ ನಿಮಿಷದ ವಿಡಿಯೋ.

ನಿಜಾಂಶ: ವೀಡಿಯೊ ನೈಜ ಘಟನೆಯ ದೃಶ್ಯಗಳನ್ನು ತೋರಿಸುವುದಿಲ್ಲ. ಇದು ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾರಾಟದ ಅಪಘಾತವನ್ನು ಪ್ರತಿನಿಧಿಸುವ ಫ್ಲೈಟ್ ಸಿಮ್ಯುಲೇಶನ್(ವಿಮಾನ ಹಾರಾಟದ ಅಣಕು) ವಿಡಿಯೋ ಮಾತ್ರ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪು.

ಆಗಸ್ಟ್ 07, 2020 ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕೋಳಿಕ್ಕೋಡ್ ವಿಮಾನ ನಿಲ್ದಾಣದ ರನ್ ವೇಯಿಂದ ಜಾರಿ ಕಣಿವೆಗೆ ಬಿದ್ದಿತು. ಈ ಅಪಘಾತದಲ್ಲಿ ಸುಮಾರು 18 ಜನರು ಪ್ರಾಣ ಕಳೆದುಕೊಂಡರು ಮತ್ತು ಅನೇಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ವಿಡಿಯೊವನ್ನು ಗಮನಿಸಿದಾಗ, ಇದು ಅನಿಮೇಟೆಡ್ ವಿಡಿಯೊದಂತೆ ಕಾಣುತ್ತದೆ ಎಂದು ಸುಲಭವಾಗಿ ಕಂಡುಹಿಡಿಯಬಹುದು. ಆದ್ದರಿಂದ, ಕೀವರ್ಡ್ ಗಳೊಂದಿಗೆ ಹುಡುಕಿದಾಗ, ಕೋಳಿಕ್ಕೋಡ್ ಅಪಘಾತಕ್ಕೆ ಸಂಬಂಧಿಸಿದಂತೆ ಅಪ್‌ಲೋಡ್ ಮಾಡಲಾದ ಅನೇಕ ಆನಿಮೇಟೆಡ್ ವಿಡಿಯೋಗಳು ಹುಡುಕಾಟ ಫಲಿತಾಂಶಗಳಲ್ಲಿ ಕಂಡುಬಂದಿವೆ. ಪೋಸ್ಟ್ ಮಾಡಿದ ವಿಡಿಯೋವನ್ನು ಅಪಘಾತದ ದಿನದಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ಕಾಣಬಹುದು. ವಿಡಿಯೋದ ವಿವರಣೆಯಲ್ಲಿ, ಇದು ‘ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 1344 ರ ನೈಜ ದತ್ತಾಂಶದೊಂದಿಗೆ ವಿಡಿಯೊ ಸಿಮ್ಯುಲೇಶನ್’ ಎಂದು ಹೇಳಲಾಗಿದೆ. ಅಲ್ಲದೆ, ಶೀರ್ಷಿಕೆಯಲ್ಲಿ, ‘ಪಿ3ಡಿ’ ಅನ್ನು ಉಲ್ಲೇಖಿಸಲಾಗಿದೆ. ‘ಪಿ3ಡಿ’ ಅಥವಾ ‘ಪ್ರಿಪಾರ್3ಡಿ’ ಒಂದು ಫ್ಲೈಟ್ ಸಿಮ್ಯುಲೇಶನ್ ತಂತ್ರಾಂಶ ಆಗಿದೆ. ಕೋಳಿಕ್ಕೋಡ್ ಅಪಘಾತಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಲಾದ ಇನ್ನೂ ಕೆಲವು ಸಿಮ್ಯುಲೇಶನ್ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕೋಳಿಕ್ಕೋಡ್ ನಲ್ಲಿ ಅಪಘಾತ ಸಂಭವಿಸುವ ಮುನ್ನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟದ ವಿಡಿಯೋ ಎಂದು ಫ್ಲೈಟ್ ಸಿಮ್ಯುಲೇಶನ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll