Fake News - Kannada
 

2019ರಲ್ಲಿ ನಡೆದ ಬೀದಿ ನಾಟಕವನ್ನು ಆಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿಯ ನಾಗರೀಕರನ್ನು ಕೊಲ್ಲುತ್ತಿರುವ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಆಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಈ ರೀತಿಯಲ್ಲಿ ಕೊಲ್ಲುತ್ತಿದ್ದಾರೆಂದು ಹೇಳುತ್ತಾ  ವಿಡಿಯೋ ಇರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೊಳ್ಳುತ್ತಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ. 

ಪ್ರತಿಪಾದನೆ: ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಕೊಲ್ಲುತ್ತಿರುವ ವಿಡಿಯೋ.

ನಿಜಾಂಶ: ಆಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಕೊಲ್ಲುತ್ತಿರುವಂತೆ ಈ ವಿಡಿಯೋದಲ್ಲಿರುವುದು 2019ರಲ್ಲಿ ಮಾಡಿದ ಒಂದು ಬೀದಿನಾಟಕವಾಗಿದೆಯೇ ಹೊರತು, ನಿಜವಾಗಲೂ ನಡೆದಿರುವುದಲ್ಲ. ಮೈದಾನ್ ವಾರ್ದಕ್ ಪೆರಾವಿನ್ಸ್‌ನಲ್ಲಿ ತಾಲಿಬಾನ್‌ಗಳ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸಲು ಕಲಾವಿದರ ತಂಡ ಕಾಬುಲ್‌ನಲ್ಲಿ ನಿರ್ವಹಿಸಿದ ಬೀದಿ ನಾಟಕ ಇದಾಗಿದೆ. ಅಪ್ಘಾನಿಸ್ತಾನನಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಹಿಂಸಿಸುತ್ತಿದ್ದಾರೆಂದು ಸಾಕಷ್ಟು ಸುದ್ದಿಯ ವರದಿಗಳು ಇವೆ. ಆದರೆ ಈ ವಿಡಿಯೋ ಈಗಿನದ್ದಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.

ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿ ಮೇಲೆ ಎಡಬಾಗದಲ್ಲಿ ಒಂದು ಲೋಗೋ ನೋಡಬಹುದು.  ಆ ಲೋಗೋವನ್ನು ಇಂಗ್ಲೀಷ್‌ಗೆ ಅನುವಾದಿಸಿದರೆ ‘Afghan International’ ಎಂದು ನಮಗೆ ತಿಳಿಯುತ್ತದೆ. ‘Afghan International’ ಎಂದು ಯೂಟ್ಯೂಬ್‌ನಲ್ಲಿ ಹುಡುಕಿದಾಗ, ಅದೇ ದೃಶ್ಯಗಳಿರುವ ವಿಡಿಯೋವನ್ನು 25 ಸೆಪ್ಟೆಂಬರ್  2019ನಲ್ಲಿ ಅಪ್ಲೋಡ್ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋವನ್ನು 1:20 ನಿಮಿಷಲ್ಲಿ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.

ಯೂಟ್ಯೂಬ್‌ನಲ್ಲಿನ ವಿಡಿಯೋದ ವಿವರಣೆಯಲ್ಲಿ ‘How the Taliban group closes the passengers in Jalriz! See more of the allegory of artists being beaten by the Taliban in Jalriz in the video.’ ತಾಲಿಬಾನ್ ಜಲ್‌ರಿಜ್‌ನಲ್ಲಿ ಪ್ರಯಾಣಿಕರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ನಾಟಕದಲ್ಲಿ ತೋರಿಸಿದ್ದಾರೆಂದೆ ವಿವರಣೆಯ ಮೂಲಕ ತಿಳಿಯುತ್ತಿದೆ.‌

ವಿಡಿಯೋದಲ್ಲಿ ಕ್ಯಾಮೆರಾಗಳು, ಸಣ್ಣ ಮೈಕ್‌ಗಳನ್ನು ಉಪಯೋಗಿಸಿರುವುದನ್ನು ಗಮನಿಸಬಹುದು ಇದರ ಮೂಲಕ ಅದು ನಿಜವಾದ ಘಟನೆ ಅಲ್ಲವೆಂದು ಸ್ಪಷ್ಟವಾಗುತ್ತಿದೆ.

ವಿಡಿಯೋದ ಸ್ಕ್ರೀನ್‌ ಶಾರ್ಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ಚಿತ್ರಗಳನ್ನೊಳಗೊಂಡ ಲೇಖನವೊಂದು ಕಂಡುಬಂದಿದೆ. ಅಫ್ಘಾನಿಸ್ತಾನದಲ್ಲಿನ ಜಲ್‌ರಿಜ್ ನಲ್ಲಿನ ಮೈದಾನ್ ವಾರ್ದಕ್ ಪೆರಾವಿನ್ಸ್‌ನಲ್ಲಿ ತಾಲಿಬಾನ್‌ರ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸಲು ಕಲಾವಿದರ ತಂಡ ಕಾಬುಲ್‌ನಲ್ಲಿ ಬೀದಿ ನಾಟಕ ನಿರ್ವಹಿಸಿದೆ. ಇದು ಒಂದು ‘‘symbolic movement’ ಎಂದು ಪೋಟೊ ಕ್ಯಾಪ್ಷನ್ ಇರುವುದನ್ನು ಲೇಖನದಲ್ಲಿ ನೋಡಬಹದು.

ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಹಿಂಸಿಸುತ್ತಾರೆಂದು ಸಾಕಷ್ಟು ಸುದ್ದಿ ಲೇಖನಗಳು ಇವೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದ್ದರೆ ವಿಡಿಯೋದಲ್ಲಿ ತೋರಿಸುತ್ತಿರುವುದು ಬೀದಿನಾಟಕವೇ ಹೊರತು ನಿಜವಾಗಿ ನಡೆದದ್ದಲ್ಲ.

ಒಟ್ಟಿನಲ್ಲಿ 2019ರಲ್ಲಿ ನಡೆದ ಬೀದಿ ನಾಟಕವನ್ನು ಅಪ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಕೊಲ್ಲುತ್ತಿರುವ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll