Fake News - Kannada
 

ವೈರಲ್ ವೀಡಿಯೊದಲ್ಲಿರುವ ಗಾಯಕಿ ಕೆ.ಜೆ. ಯೇಸುದಾಸ್ ಅವರ ಮೊಮ್ಮಗಳು ಅಮೆಯಾ ಅಲ್ಲ ಬದಲಾಗಿ ಶ್ರೀಲಲಿತಾ ಗುಡಿಪಾಟಿ

0

ಮಹಿಳೆಯೊಬ್ಬರು ರಘುವೀರ ಗದ್ಯಂ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗುತಿದ್ದು, ಆಕೆಯ ಹೆಸರು ಅಮೆಯಾ ಮತ್ತು ಆಕೆ ಖ್ಯಾತ ಗಾಯಕ ಕೆ.ಜೆ. ಯೇಸುದಾಸ್ ಅವರ ಪುತ್ರ ಗಾಯಕ ವಿಜಯ್ ಯೇಸುದಾಸ್ ಅವರ ಪುತ್ರಿ ಎಂದು ಹೇಳಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತೀಯ ಗಾಯಕ ವಿಜಯ್ ಯೇಸುದಾಸ್ ಅವರ ಪುತ್ರಿ ಅಮೇಯಾ ಯೇಸುದಾಸ್ ಅವರು “ರಘುವೀರ ಗದ್ಯಂ” ಹಾಡುತ್ತಿರುವ ವೀಡಿಯೊ.

ಫ್ಯಾಕ್ಟ್: ವೈರಲ್ ವೀಡಿಯೊದಲ್ಲಿರುವ ಮಹಿಳೆ ಆಂಧ್ರಪ್ರದೇಶದ ಗಾಯಕಿ ಶ್ರೀಲಲಿತಾ ಗುಡಿಪಾಟಿ. ಆಕೆ ವಿಜಯ್ ಯೇಸುದಾಸ್ ಅವರ ಮಗಳು ಅಮೇಯಾ ಅಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ರಿವೆರ್ಸೆ ಇಮೇಜ್  ಹುಡುಕಾಟವು ನಮ್ಮನ್ನು ಮೇ 2024 ರಲ್ಲಿ ‘ಶ್ರೀಲಲಿತಾ ಸಿಂಗರ್’ ನ ಇನ್ಸ್ಟಾಗ್ರಾಮ್ ಮತ್ತು ಯುಟ್ಯೂಬ್ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿದ ಮೂಲ ವೀಡಿಯೊಗೆ (ಇಲ್ಲಿ ಮತ್ತು ಇಲ್ಲಿ) ಕರೆದೊಯ್ಯಿತು. ಇಲ್ಲಿನ ಕ್ಯಾಪ್ಶನ್  ನಲ್ಲಿ ಆಕೆ  ‘ಶ್ರೀಲಲಿತಾ ಗುಡಿಪತಿ’ ಎಂದು ತಿಳಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಶ್ರೀಲಲಿತಾ ಆಂಧ್ರಪ್ರದೇಶದ ವಿಜಯವಾಡದ ಕರ್ನಾಟಿಕ್ ಗಾಯಕಿ, ಮತ್ತು ಅವರ ಪೋಷಕರು ರಾಜಶೇಖರ್ ಭಮಿಡಿಪತಿ ಮತ್ತು ಸತ್ಯವಾಣಿ.

ವಿಜಯ್ ಯೇಸುದಾಸ್‌ಗೆ ಅಮೆಯಾ ಎಂಬ ಮಗಳು ಇದ್ದಾಳೆ, ಆದರೆ ವೈರಲ್ ವೀಡಿಯೊ ಮತ್ತು ಅಮೆಯಾಳಿಗೆ ಹೋಲಿಸಿದಾಗ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಅಮೆಯಾ ಅಲ್ಲ ಬದಲಾಗಿ ಶ್ರೀಲಲಿತಾ ಗುಡಿಪಾಟಿ ಎಂದು ತಿಳಿಸುತ್ತದೆ.

ಇದಲ್ಲದೆ, 2021 ರಲ್ಲಿ, ಶ್ರೀಲಲಿತಾ ಹರಿವರಾಸನಂ ಹಾಡುವ ಮತ್ತೊಂದು ವೀಡಿಯೊವನ್ನು ಕೆ.ಜೆ.ಯೇಸುದಾಸ್ ಅವರ ಮೊಮ್ಮಗಳು ಎಂದು ಸುಳ್ಳು ಹೇಳಿಕೊಂಡಾಗ, ಶ್ರೀಲಲಿತಾ ಇಂಡಿಯಾ ಟುಡೇಗೆ ತನಗೂ ಕೆಜೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಲ್ಲದೆ, ಅಕ್ಟೋಬರ್ 2024 ರಲ್ಲಿ, ವಿಜಯ್ ಯೇಸುದಾಸ್ ವೈರಲ್ ವೀಡಿಯೊದಲ್ಲಿ ಗಾಯಾಕಿ ಆಂಧ್ರಪ್ರದೇಶದ ಶ್ರೀಲಲಿತಾ, ತನ್ನ ಮಗಳು ಅಮೆಯಾ ಅಲ್ಲ  ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಆಂಧ್ರಪ್ರದೇಶದ ಗಾಯಕಿ ಶ್ರೀಲಲಿತಾ ಗುಡಿಪಾಟಿಏ ಹೊರತು ವಿಜಯ್ ಯೇಸುದಾಸ್ ಅವರ ಮಗಳು ಅಮೇಯಾ ಅಲ್ಲ.

Share.

Comments are closed.

scroll