Fake News - Kannada
 

ಕಳೆದ ವರ್ಷ ಅಹ್ಮದಾಬಾದ್‌ನಲ್ಲಿ ಪಕ್ಷಿಗಳು ಹಾರಾಡುತ್ತಿದ್ದ ದೃಶ್ಯವನ್ನು ಈಗ ಬೆಂಗಳೂರು ವಿಮಾನ ನಿಲ್ದಾಣದ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

0

ಬೆಂಗಳೂರು ವಿಮಾನ ನಿಲ್ದಾಣದ ಬಳಿ ಪಕ್ಷಿಗಳ ಗುಂಪೊಂದು ಸುಂದರವಾಗಿ ಹಾರಾಡುತ್ತಿರುವ ವಿಡಿಯೊ ಎಂದು ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಹಕ್ಕಿಗಳು ಗುಂಪು ಗುಂಪಾಗಿ ಹಾರಾಡುತ್ತಿರುವ ವಿಡಿಯೊ.

ನಿಜಾಂಶ: ಕಳೆದ ವರ್ಷ ಫೆಬ್ರವರಿಯಲ್ಲಿ ಅಹಮದಾಬಾದ್‌ನ ಸಬರಮತಿ ನದಿ ತೀರದ ಹತ್ತಿರ ಒಬ್ಬ ವ್ಯಕ್ತಿ ಈ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದರು. ಹೀಗಾಗಿ ಈ ವಿಡಿಯೊ ವೈರಲ್ ಆಗಿತ್ತು. ಹಲವು ವಾರ್ತಾ ಸಂಸ್ಥೆಗಳು ಸಹ ಈ ವಿಡಿಯೊ, ಸುದ್ದಿ ವರದಿ ಮಾಡಿದ್ದಾರೆ. ಈ ವಿಡಿಯೊಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ  ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಈ ವಿಡಿಯೊ ಕಳೆದ ವರ್ಷ ಅಹಮದಾಬಾದ್‌ನ ನದಿ ತೀರದಲ್ಲಿ ಚಿತ್ರೀಕರಿಸಿರುವುದಾಗಿದೆ. ಟೈಮ್ಸ್ ಅಫ್ ಇಂಡಿಯಾ ಇದೇ ವಿಡಿಯೊವನ್ನು 13 ಫೆಬ್ರವರಿ 2020 ರಂದು ವರದಿ ಮಾಡಿದೆ. ಹೀಗೆ ನೂರಾರು ಸಂಖ್ಯೆಯಲ್ಲಿರುವ ಪಕ್ಷಿಗಳು ಗುಂಪಾಗಿ ಹಾರಾಡುತ್ತಿರುವ ಈ  ವಿಡಿಯೊ ಯಾವ ದಿನ  ಚಿತ್ರೀಕರಿಸಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಈ ಸುದ್ದಿಯಲ್ಲಿ ಯಾವುದೇ ಮಾಹಿತಿ ನೀಡಲಾಗಿಲ್ಲ.

ಸಬರಮತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಇದೇ ವಿಡಿಯೊವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಶೇರ್ ಮಾಡಿದೆ.

ಇದೇ ವಿಡಿಯೊವನ್ನು ಒಬ್ಬ ಫೇಸ್ ಬುಕ್ ಬಳಕೆದಾರ 2020ರ ಫೆಬ್ರವರಿ 12  ರಂದು ತನ್ನ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ವಿಡಿಯೊ ಕೃಪೆಯನ್ನು ಚಿರಾಗ್ ತೂಮರ್ ಎಂಬ ವ್ಯಕ್ತಿಗೆ ನೀಡಲಾಗಿದೆ. ಇದರ ಆಧಾರದ ಮೇಲೆ ಚಿರಾಗ್ ತೂಮರ್ ಹೆಸರಿನ ಟ್ವಿಟರ್ ಖಾತೆಯನ್ನು ಪರೀಕ್ಷಿಸಿದಾಗ, ಇದೇ ವಿಡಿಯೊ ದೊರಕಿದೆ. ಈ ಖಾತೆಯಲ್ಲಿ ಇದೇ ವಿಡಿಯೊ ಅಪ್ಲೋಡ್ ಮಾಡಲಾಗಿದೆ. ಬೂಮ್ ಎಂಬ ಫ್ಯಾಕ್ಟ್ – ಚೆಕಿಂಗ್ ಏಜೆನ್ಸಿ ಚಿರಾಗ್ ತೂಮರ್  ಅವರನ್ನು ಸಂಪರ್ಕಿಸಿದಾಗ, ಈ ವಿಡಿಯೊವನ್ನು ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ಡಿಸೈನ್ಸ್, ಸಬರಮತಿ ರಿವರ್ ಫ್ರಂಟ್ ಹತ್ತಿರ ತಾನೆ ಚಿತ್ರೀಕರಿಸಿದ್ದಾಗಿ ತಿಳಿಸಿದ್ದಾರೆ. ಇದನ್ನು ಅವಲಂಬಿಸಿ ಈ ವಿಡಿಯೊ ಹಳೆಯದೆಂದು, ಈ ವಿಡಿಯೊಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗುತ್ತದೆ.

ಒಟ್ಟಾರೆ, ಕಳೆದ ವರ್ಷ ಅಹ್ಮದಾಬಾದ್‌ನ ಸಬರಮತಿ ನದಿ ತೀರದಲ್ಲಿ ಪಕ್ಷಿಗಳು ಗುಂಪುಗಳಾಗಿ ಹಾರಾಡಿದ ದೃಶ್ಯವನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಪಕ್ಷಿಗಳು ಹಾರಾಡಿವೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll