ಬರೇಲಿ ನಗರದಲ್ಲಿನ ಪೋಲೀಸ್ ದಂಡದ ಚಲನ್ ಹಾಕಿದ್ದಕ್ಕಾಗಿ ಮುಸ್ಲಿಮರು ಹೊಡೆಯುತ್ತಿರುವ ದೃಶ್ಯಗಳು, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಪ್ರತಿಪಾದನೆ : ಬರೇಲಿ ನಗರದಲ್ಲಿ ಒಬ್ಬ ಪೋಲೀಸ್ ದಂಡದ ಚಲನ್ ಬರೆದದ್ದಕ್ಕಾಗಿ ಮುಸ್ಲಿಮರು ಆತನನ್ನು ಹೊಡೆಯುತ್ತಿರುವ ದೃಶ್ಯಗಳು.
ಸತ್ಯಾಂಶ: ವಿಡಿಯೋದಲ್ಲಿನ ಘಟನೆ ರಾಜಸ್ತಾನ್ ರಾಜ್ಯದಲ್ಲಿನ ಭರತ್‌ಪುರ್ ಜಿಲ್ಲೆಯಲ್ಲಿ ನಡೆದಿದೆ. ಹರ್ಯಾಣ ಪೋಲೀಸರು ಒಂದು ಕೇಸಿಗೆ ಸಂಬಂಧಿಸಿದಂತೆ ಭರತ್‌ಪುರ್ ಜಿಲ್ಲೆಯಲ್ಲಿನ ಜುರ್ರಹೋ ಪಟ್ಟಣದಲ್ಲಿ ಪ್ರಯಾಣಿಸುತ್ತಿರುವಾಗ ಅವರ ವಾಹನ ಮತ್ತೊಂದು ವಾಹನವನ್ನು ಡಿಕ್ಕಿ ಹೊಡೆದಿದೆ. ಪೊಲೀಸ್ ವಾಹನ ಡಿಕ್ಕಿಯಾದ ಮತ್ತೊಂದು ವಾಹನದಲ್ಲಿದ್ದವರು ಯುವಕರು ಮುಸ್ಲಿಮರೆಂದು ಪೋಲೀಸರು ಎಲ್ಲಿಯೂ ಪ್ರಕಟಿಸಿಲ್ಲ. ಈ ವಿಡಿಯೋ ಉತ್ತರಪ್ರದೇಶ ರಾಜ್ಯದಲ್ಲಿನ ಬರೇಲಿ ನಗರಕ್ಕೆ ಸಂಬಂದಿಸಿದ್ದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟನಲ್ಲಿ ಷೇರ್ ಮಾಡುತ್ತಿರುವ ವಿಡಿಯೋದ ಸ್ಕ್ರೀನ್‌ಷಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿ ಹುಡುಕಿದಾಗ, ಇದೇ ದೃಶ್ಯಗಳು ಕಾಣಿಸುವ ವಿಡಿಯೋವನ್ನು ‘Dainik Bhaskar’ ಸುದ್ದಿ ವೆಬ್ಸೈಟ್ ಮಾರ್ಚ್ 2021ನಲ್ಲಿ ಪ್ರಕಟಿಸಿದ ಲೇಖನದಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಘಟನೆ ರಾಜಸ್ತಾನ ರಾಜ್ಯದಲ್ಲಿನ ಭರತ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಈ ಲೇಖನದಲ್ಲಿ ತಿಳಿಸಿದ್ದಾರೆ. ಹರ್ಯಾಣ ಪೋಲೀಸರು ಒಂದು ಕೇಸ್ ವಿಚಾರಣೆಗಾಗಿ ಭರತ್‌ಪುರ ಜಿಲ್ಲೆಯಲ್ಲಿನ ಜುರೆಹ್ರು ಪಟ್ಟಣದಲ್ಲಿ ಪ್ರಯಾಣಿಸುತ್ತಿರುವಾಗ ಅವರ ವಾಹನ ಮತ್ತೊಂದು ವಾಹನವನ್ನು ಡಿಕ್ಕಿ ಹೊಡೆದಿರುವುದಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಪೋಲೀಸ್ ವಾಹನ ಡಿಕ್ಕಿ ಹೊಡೆದ ಮತ್ತೊಂದು ವಾಹನದಲ್ಲಿನ ಯುವಕರು ಪೋಲೀಸರೊಂದಿಗೆ ವಾಗ್ವಾದಕ್ಕೆ ಇಳಿದು ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ದಾಳಿ ಮಾಡಿರುವುದಾಗಿ ಈ ಸುದ್ದಿಯಲ್ಲಿ ವರದಿಯಾಗಿದೆ.
ರಾಜಸ್ತಾನ ರಾಜ್ಯ ಭರತ್‌ಪುರ ಜಿಲ್ಲೆಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪ್ರಕಟಗೊಂಡ ಮತ್ತಷ್ಟು ವರದಿಗಳು ಮತ್ತು ವಿಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಈ ಘಟನೆಗೆ ಸಂಬಂಧಿಸಿದಂತೆ ಭರತ್‌ಪುರ್ ಜಿಲ್ಲೆಯ ಪೋಲೀಸರು ಟ್ವೀಟ್ ಸಹ ಮಾಡಿದ್ದಾರೆ. ಪೋಲೀಸ್ ಕಾನ್ಸ್‌ಟೇಬಲ್ ಮೇಲೆ ದಾಳಿ ಮಾಡಿದ ಯುವಕರು ಮುಸ್ಲಿಮರೆಂದು ಭರತ್‌ಪುರ್ ಪೋಲೀಸರು ಎಲ್ಲಿಯೂ ಪ್ರಕಟಿಸಿಲ್ಲ. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋ ರಾಜಸ್ತಾನ್ ರಾಜ್ಯಕ್ಕೆ ಸಂಬಂಧಿಸಿರುವುದೆಂದು, ಉತ್ತರಪ್ರದೇಶದ ಬರೇಲಿ ನಗರದಲ್ಲಿ ನಡೆದಿರುವುದಿಲ್ಲ ಎಂದು ಹೇಳಬಹುದು.
ಒಟ್ಟಿನಲ್ಲಿ ರಾಜಸ್ತಾನ ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋವನ್ನು ದಂಡದ ಚಲನ್ ಬರೆದಕ್ಕಾಗಿ ಪೊಲೀಸರನ್ನು ಮುಸ್ಲಿಮರು ಹೊಡೆಯುತ್ತಿರುವ ದೃಶ್ಯಗಳು ಎಂದು ಷೇರ್ ಮಾಡುತ್ತಿದ್ದಾರೆ.