Fake News - Kannada
 

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ T20I ಪಂದ್ಯದ ವೇಳೆ ಪ್ರೇಕ್ಷಕರು ಶ್ರಿರಾಮ್‌ನಿಗೆ ಸಂಬಂಧಿಸಿದ ಹಾಡು ಹಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

25 ಸೆಪ್ಟೆಂಬರ್ 2022 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೂರನೇ T20 ಪಂದ್ಯದ ಸಂದರ್ಭದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಹಾಡು (ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೆಗಾ)ನ್ನು ಪ್ರೇಕ್ಷಕರು ಹಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದು ನಡೆದಿದೆ ಎಂದು ಪೋಸ್ಟ್‌ಗಳಲ್ಲಿ ಪ್ರತಿಪಾದಿಸಲಾಗಿದ್ದು, ಅದು ನಿಜವೇ ಎಂದು ಪರಿಶೀಲಿಸೋಣ.

ಪ್ರತಿಪಾದನೆ: 2022ರ ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ T20 ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರು ಶ್ರೀರಾಮನಿಗೆ ಸಂಬಂಧಿಸಿದ ಹಾಡನ್ನು ಹಾಡುತ್ತಿದ್ದಾರೆ.

ನಿಜಾಂಶ: ಪೋಸ್ಟ್ ಮಾಡಿದ ವೀಡಿಯೊ 2022ರ ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ T20 ಪಂದ್ಯಕ್ಕೆ ಸಂಬಂಧಿಸಿದ್ದಲ್ಲ. ವೀಡಿಯೊವನ್ನು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಚಿತ್ರೀಕರಿಸಲಾಗಿದೆ. ಪೋಸ್ಟ್ ಮಾಡಿದ ವೀಡಿಯೊದಲ್ಲಿನ ಆಡಿಯೊದ ದೃಢೀಕರಣವನ್ನು ನಾವು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ, ಅದೇ ವೀಡಿಯೊವನ್ನು ಅನೇಕ ಜನರು ಪೋಸ್ಟ್ ಮಾಡಿದ್ದು, ಅದು ನಾಗ್ಪುರಕ್ಕೆ ಸಂಬಂಧಿಸಿದ ವಿಡಿಯೊ ಎಂಬ ವಿವರಣೆಯೊಂದಿಗೆ ಕಂಡುಬಂದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ T20 ಪಂದ್ಯವು 23 ಸೆಪ್ಟೆಂಬರ್ 2022 ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಿತು. ವಿಡಿಯೊದಲ್ಲಿ ಇರುವ ದೃಶ್ಯಗಳು ನಾಗ್ಪುರ (ಅಲ್ಲಿ ಹೆಚ್ಚಿನ ಸ್ಟ್ಯಾಂಡ್‌ಗಳನ್ನು ಮುಚ್ಚಲಾಗುತ್ತದೆ) ಕ್ರೀಡಾಂಗಣದ್ದಾಗಿದ್ದು, ಹೈದರಾಬಾದ್‌ನ (ಅಲ್ಲಿ ಸ್ಟ್ಯಾಂಡ್‌ಗಳು ಹೆಚ್ಚಾಗಿ ಮುಚ್ಚುವುದಿಲ್ಲ ) ಕ್ರೀಡಾಂಗಣದ್ದಲ್ಲ.

ಅಲ್ಲದೆ, ಈ ವಿಡಿಯೊ ಕನಿಷ್ಠ 24 ಸೆಪ್ಟೆಂಬರ್ 2022 ರಿಂದ ಇಂಟರ್ನೆಟ್‌ನಲ್ಲಿದೆ (ಟ್ವೀಟ್ ಆರ್ಕೈವ್ ಮಾಡಲಾಗಿದೆ) ಆದರೆ ಹೈದರಾಬಾದ್‌ನಲ್ಲಿ ಪಂದ್ಯವು 25 ಸೆಪ್ಟೆಂಬರ್ 2022 ರಂದು ನಡೆಯಿತು.

ಅದೇ ಆಡಿಯೋ ಇರುವ ಇನ್ನೊಂದು ಹಳೆಯ ವಿಡಿಯೋವನ್ನು ಇಲ್ಲಿ ನೋಡಬಹುದು. ಬಹುಶಃ ಈ ವೀಡಿಯೊದ ಆಡಿಯೊವನ್ನು ವೈರಲ್ ಆಗಿರುವ ವಿಡಿಯೊಗೆ ಆಯ್ಕೆ ಮಾಡಿ ಸೇರಿಸಿರಬಹುದು. ಆದ್ದರಿಂದ, ಪೋಸ್ಟ್ ಮಾಡಿದ ವೀಡಿಯೊದಲ್ಲಿ ಆಡಿಯೊದ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ ವಿಡಿಯೊ ಮಾತ್ರ ನಾಗ್ಪುರದದ್ದಾಗಿದೆ. ಹಾಗಾಗಿ ಈ ವೀಡಿಯೊ ಹೈದರಾಬಾದ್‌‌ನದ್ದಲ್ಲ ಎಂದು ನಾವು ಖಚಿತಪಡಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ T20I ಪಂದ್ಯದ ವೇಳೆ ಶ್ರೀರಾಮನಿಗೆ ಸಂಬಂಧಿಸಿದ ಹಾಡನ್ನು ಪ್ರೇಕ್ಷಕರು ಹಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll